ಮಕ್ಕಳು ಬೇಕು ಅಂತಾರೆ ಮಕ್ಕಳು ಇರದವರು - The Indic Lyrics Database

ಮಕ್ಕಳು ಬೇಕು ಅಂತಾರೆ ಮಕ್ಕಳು ಇರದವರು

गीतकार - Hamsalekha | गायक - Dr. Rajkumar | संगीत - Hamsalekha | फ़िल्म - Hettavaru | वर्ष - 1996

Song link

View in Roman

ಮಕ್ಕಳು ಬೇಕು ಅಂತಾರೆ ಮಕ್ಕಳು ಇರದವರು
ಮಕ್ಕಳೇ ಇರದವರು
ಮಕ್ಕಳೇ ಬೇಡ ಅಂತಾರೆ ಮಕ್ಕಳ ಹೆತ್ತವರು
ಮಕ್ಕಳ ಹೆತ್ತವರು

ಈ ಭೂಮಿಲಿ ಆನಂದ ಇವರಿಂದ
ಈ ಬಾಳಲ್ಲಿ ಕಣ್ಣೀರು ಇವರಿಂದ

ಮಕ್ಕಳು ಬೇಕು ಅಂತಾರೆ ಮಕ್ಕಳು ಇರದವರು
ಮಕ್ಕಳೇ ಇರದವರು
ಮಕ್ಕಳೇ ಬೇಡ ಅಂತಾರೆ ಮಕ್ಕಳ ಹೆತ್ತವರು
ಮಕ್ಕಳ ಹೆತ್ತವರು

ಹೆತ್ತವರನ್ನೂ ಪ್ರೀತಿಸಿದ ಮಕ್ಕಳು ಕಾಡೊಳಗೆ
ಹೆತ್ತವರನ್ನೂ ನೋಯಿಸಿದ ಮಕ್ಕಳು ಗೂಡೋಳಗೆ
ಹೆತ್ತವರನ್ನು ಪೂಜಿಸಿದ ಮಕ್ಕಳು ಕಥೆಯೊಳಗೆ
ಹೆತ್ತವರನ್ನೂ ಓಡಿಸಿದ ಮಕ್ಕಳು ಜೊತೆಯಲ್ಲಿ

ಈ ಭೂಮಿಲಿ ಧರ್ಮನು ಇವರಿಂದ
ಈ ಬಾಳಲ್ಲಿ ಖರ್ಮನು ಇವರಿಂದ

ಮಕ್ಕಳು ಬೇಕು ಅಂತಾರೆ ಮಕ್ಕಳು ಇರದವರು
ಮಕ್ಕಳೇ ಇರದವರು
ಮಕ್ಕಳೇ ಬೇಡ ಅಂತಾರೆ ಮಕ್ಕಳ ಹೆತ್ತವರು
ಮಕ್ಕಳ ಹೆತ್ತವರು

ಮಕ್ಕಳೇ ದೇವರು ಅಂತಾರೆ ಮಕ್ಕಳು ಇರದವರು
ಆ ದೇವರ ಶಾಪಕೆ ಸಿಕ್ತಾರೆ ಮಕ್ಕಳ ಹೆತ್ತವರು
ದಾನ ಧರ್ಮ ಮಾಡ್ತಾರೆ ಮಕ್ಕಳು ಇರದವರು
ಆ ಭಿಕ್ಷೆ ಬೇಡಿ ತಿಂತರೆ ಮಕ್ಕಳ ಹೆತ್ತವರು

ಈ ಭೂಮಿ ಪುಣ್ಯಾನು ಇವರಿಂದ
ಈ ಬಾಳಲ್ಲಿ ಪಾಪನು ಇವರಿಂದ

ಮಕ್ಕಳು ಬೇಕು ಅಂತಾರೆ ಮಕ್ಕಳು ಇರದವರು
ಮಕ್ಕಳೇ ಇರದವರು
ಮಕ್ಕಳೇ ಬೇಡ ಅಂತಾರೆ ಮಕ್ಕಳ ಹೆತ್ತವರು
ಮಕ್ಕಳ ಹೆತ್ತವರು

ಭಾರ ಹೊತ್ತು ಉಸಿರಿಟ್ಟು ಬೆಳೆದ ಮಕ್ಕಳಿಗೇ
ಭಾರ ಆದರು ಹೆತ್ತವರು ಮುಪ್ಪಿನ ದಿನದೊಳಗೆ
ಬುದ್ದಿ ಇಲ್ಲಾ ಮಕ್ಕಳಿಗೇ ಭೋಧಿಸು ಅಂತಾರೆ
ಬುದ್ದಿ ಕಲಿಸೋ ಮಕ್ಕಳಿಗೇ ವಂದಿಸು ಅಂತಾರೆ

ಈ ಭೂಮಿಲಿ ಅಭಿಮಾನ ಇವರಿಂದ
ಈ ಬಾಳಲ್ಲಿ ಅವಮಾನ ಇವರಿಂದ

ಮಕ್ಕಳು ಬೇಕು ಅಂತಾರೆ ಮಕ್ಕಳು ಇರದವರು
ಮಕ್ಕಳೇ ಇರದವರು
ಮಕ್ಕಳೇ ಬೇಡ ಅಂತಾರೆ ಮಕ್ಕಳ ಹೆತ್ತವರು
ಹೆತ್ತು ನಿತ್ಯ ಅತ್ತಾವರು