ನಮ್ಮೂರ ಬೆಟ್ಟದ ತೋಳಿನಲ್ಲಿ - The Indic Lyrics Database

ನಮ್ಮೂರ ಬೆಟ್ಟದ ತೋಳಿನಲ್ಲಿ

गीतकार - P. V. Nanjaraj Urs | गायक - P. B. Srinivas, P. Susheela | संगीत - Vijaya Bhaskar | फ़िल्म - Savira Mettilu | वर्ष - 2006

Song link

View in Roman

ನಮ್ಮೂರ ಬೆಟ್ಟದ ತೋಳಿನಲ್ಲಿ
ನಮ್ಮೂರ ಬೆಟ್ಟದ ತೋಳಿನಲ್ಲಿ
ಬೆಳ್ಳಿ ಹೂವಿನ ತೋಟದಲ್ಲಿ
ಮುತ್ತಿನ ನೆನಪಿನ ಗುಂಗಿನಲಿ
ಕಾಡಿಹಳೆನ್ನ ರಾಜಕುಮಾರಿ

ಬೆಟ್ಟದ ಆಚೆಯ ಪಟ್ಟಣದಲ್ಲಿ
ಬೆಟ್ಟದ ಆಚೆಯ ಪಟ್ಟಣದಲ್ಲಿ
ಬೆಳ್ಳಿ ಕೋಟೆಯ ಅರಮನೆಯಲ್ಲಿ
ನಿದ್ದೆಯು ಬಾರದ ರಾತ್ರಿಯಲ್ಲಿ
ಕಾಡಿಹನೆನ್ನ ರಾಜಕುಮಾರ

ತಿಂಗಳ ಬೆಳಕಿನ ಕಂಠಿಯಲಿ
ತುಂತುರು ಹಾಲಿನ ಮಳೆಯಲ್ಲಿ
ಹೂವಿನ ನಡೆ ಮಾಡಿದ ಹಸುತಲಿ
ಬೆಳಗುವಳಾರತಿ ಹರುಷದಲಿ
ಪಕ್ಕನೆ ಸೆಳೆದು ತೊಲಿನಲಿ
ಅಪ್ಪುತ ಅವಳನ್ನು ಮುದದಲ್ಲಿ
ಪಕ್ಕನೆ ಸೆಳೆದು ತೊಲಿನಲಿ
ಅಪ್ಪುತ ಅವಳನ್ನು ಮುದದಲ್ಲಿ
ತುತಿಯನು ಒತ್ತಲು ಸಾರಸದಲ್ಲಿ
ಚಂಗನೆ ನೆಗೆದಳು ಮುನಿಸಿನಲಿ
ಚಂಗನೆ ನೆಗೆದಳು ಮುನಿಸಿನಲಿ

ನಮ್ಮೂರ ಬೆಟ್ಟದ ತೋಳಿನಲ್ಲಿ
ನಮ್ಮೂರ ಬೆಟ್ಟದ ತೋಳಿನಲ್ಲಿ
ಬೆಳ್ಳಿ ಹೂವಿನ ತೋಟದಲ್ಲಿ
ಮುತ್ತಿನ ನೆನಪಿನ ಗುಂಗಿನಲಿ
ಕಾಡಿಹಳೆನ್ನ ರಾಜಕುಮಾರಿ

ಬೆಟ್ಟದ ಆಚೆಯ ಪಟ್ಟಣದಲ್ಲಿ
ಬೆಟ್ಟದ ಆಚೆಯ ಪಟ್ಟಣದಲ್ಲಿ
ಬೆಳ್ಳಿ ಕೋಟೆಯ ಅರಮನೆಯಲ್ಲಿ
ನಿದ್ದೆಯು ಬಾರದ ರಾತ್ರಿಯಲಿ
ಕಾಡಿಹನೆನ್ನ ರಾಜಕುಮಾರ

ಸಿಹಿ ತುಟಿ ದಕ್ಕದ ಮುನಿಸಿನಲಿ
ಕಣ್ಣಲೆ ಮಿನುಗುವ ಕೋಪದಲಿ
ರೋಷವ ತಾಳೆಯುತ ನಾಡಿಗೆಯಲಿ
ನೋಡಿದನಲ್ಲೆಯ ಹಸಿವಿನಲಿ
ಚಕ್ಕನೆ ನೆಗೆದು ಅವಳ ಬಾಳಿ
ಒಪ್ಪುವ ಆಸೆಯ ತೋರುತಲಿ
ಚಕ್ಕನೆ ನೆಗೆದು ಅವಳ ಬಾಳಿ
ಒಪ್ಪುವ ಆಸೆಯ ತೋರುತಲಿ
ಕೆನ್ನೆಯ ಬಡಿದು ಬೇಡುತಲಿ
ಮೆಲ್ಲನೆ ಕುಳಿತನು ಕಾಲ ಬಲಿ
ಮೆಲ್ಲನೆ ಕುಳಿತನು ಕಾಲ ಬಲಿ

ಬೆಟ್ಟದ ಆಚೆಯ ಪಟ್ಟಣದಲ್ಲಿ
ಬೆಟ್ಟದ ಆಚೆಯ ಪಟ್ಟಣದಲ್ಲಿ
ಬೆಳ್ಳಿ ಕೋಟೆಯ ಅರಮನೆಯಲ್ಲಿ
ನಿದ್ದೆಯು ಬಾರದ ರಾತ್ರಿಯಲಿ
ಕಾಡಿಹನೆನ್ನ ರಾಜಕುಮಾರ

ನಮ್ಮೂರ ಬೆಟ್ಟದ ತೋಳಿನಲ್ಲಿ
ನಮ್ಮೂರ ಬೆಟ್ಟದ ತೋಳಿನಲ್ಲಿ
ಬೆಳ್ಳಿ ಹೂವಿನ ತೋಟದಲ್ಲಿ
ಮುತ್ತಿನ ನೆನಪಿನ ಗುಂಗಿನಲಿ
ಕಾಡಿಹಳೆನ್ನ ರಾಜಕುಮಾರಿ

ಬಲ್ಲಿಯ ಮರೆಯಲಿ ನಿಂತವಳು
ಹುಬ್ಬಿನ ಬಿಲ್ಲನು ಕುಣಿಸಿದಳು
ಬಿಂಕದಿ ಜಡೆಯನು ಬೀಸಿದಳು
ಬೆರಳಲಿ ಸಣ್ಣೆಯ ಮಡಿದಾಳು
ನಲ್ಲನ ಗಲ್ಲಕೆ ತುಟಿ ತಂದು
ಕನ್ನಲಿ ಮುತ್ತನು ಸುರಿದಳು
ನಲ್ಲನ ಗಲ್ಲಕೆ ತುಟಿ ತಂದು
ಕನ್ನಲಿ ಮುತ್ತನು ಸುರಿದಳು
ನೀನೆ ನನಗೇ ಗತಿಯೆಂದು
ಕೈ ಕೈ ಮುಗಿದು ಬೇಡಿದಾಳು
ಕೈ ಕೈ ಮುಗಿದು ಬೇಡಿದಾಳು

ನಮ್ಮೂರ ಬೆಟ್ಟದ ತೋಳಿನಲ್ಲಿ
ಬೆಳ್ಳಿ ಹೂವಿನ ತೋಟದಲ್ಲಿ
ಮುತ್ತಿನ ನೆನಪಿನ ಗುಂಗಿನಲಿ
ಕಾಡಿಹಳೆನ್ನ ರಾಜಕುಮಾರಿ

ಬೆಟ್ಟದ ಆಚೆಯ ಪಟ್ಟಣದಲ್ಲಿ
ಬೆಳ್ಳಿ ಕೋಟೆಯ ಅರಮನೆಯಲ್ಲಿ
ನಿದ್ದೆಯು ಬಾರದ ರಾತ್ರಿಯಲಿ
ಕಾಡಿಹನೆನ್ನ ರಾಜಕುಮಾರ