ಸಾವಿರ ಮೆಟ್ಟಿಲು ಹತ್ತಿ ಬನ್ನಿ - The Indic Lyrics Database

ಸಾವಿರ ಮೆಟ್ಟಿಲು ಹತ್ತಿ ಬನ್ನಿ

गीतकार - P. V. Nanjaraj Urs | गायक - P. B. Srinivas, S. Janaki | संगीत - Vijaya Bhaskar | फ़िल्म - Savira Mettilu | वर्ष - 2006

Song link

View in Roman

ಸಾವಿರ ಮೆಟ್ಟಿಲು ಹತ್ತಿ ಬನ್ನಿ
ಸಾವಿರ ಮೆಟ್ಟಿಲು ಹತ್ತಿ ಬನ್ನಿ
ದೇವಿಯ ಗುಡಿಯ ಸುತ್ತಿ ಬನ್ನಿ
ಭಕ್ತಿಯ ಕಾಣಿಕೆ ಮರೆಯದೆ ತನ್ನಿ
ಆದಿಶಕ್ತಿಗೆ ಶರಣು ಶರಣೆನ್ನಿ

ಸಾವಿರ ಮೆಟ್ಟಿಲು ಹತ್ತಿ ಬನ್ನಿ

ಕನ್ನಡ ತಾಯಿಯ ರನ್ನದ ತೊಟ್ಟಿಲು
ಕರುಣೆಯ ಹಾಲಿನ ಚಿನ್ನದ ಬಟ್ಟಲು
ಕನ್ನಡ ತಾಯಿಯ ರನ್ನದ ತೊಟ್ಟಿಲು
ಕರುಣೆಯ ಹಾಲಿನ ಚಿನ್ನದ ಬಟ್ಟಲು
ಮೆಟ್ಟಿಲು ಮೆಟ್ಟಿಲು ಹತ್ತುತ ಬರಲು
ಹತ್ತೀರ ಹತ್ತೀರ ತಾಯಿಯ ಮಡಿಲು

ಸಾವಿರ ಮೆಟ್ಟಿಲು ಹತ್ತಿ ಬನ್ನಿ

ಮೆಟ್ಟಿಲಿಗೊಂದು ನಾಮವ ನೆನೆಯಿರಿ
ಸಾವಿರ ಹೆಸರಲಿ ದೇವಿಯ ಕರೆಯಿರಿ

ಓಂ ಬ್ರಹ್ಮೈ ನಮಃ
ಓಂ ಮಹೇಶ್ವರ್ಯೈ ನಮಃ
ಓಂ ಕೌಮರ್ಯೈ ನಮಃ
ಓಂ ವಾರಾಹ್ಯೈ ನಮಃ
ಓಂ ಚಾಮುಂಡಾಯೈ ನಮಃ
ಓಂ ಮಹಾಬಲ ಶ್ರೀನಿವಾಸಿನ್ಯೇ ನಮಃ
ಓಂ ಚಂಡ ಮುಂಡ ನಿಶುಂಬಾದಿ ಖಂಡನಾಯೈ ನಮಃ
ಓಂ ಮಹಿಷಾಸುರ ದೋರ್ವೀರ್ಯ ನಿಗ್ರಹಾಯೈ ನಮಃ
ಓಂ ನಿತ್ಯ ಯೌವ್ವನ ಮಾಂಗಲ್ಯ ಮಾಗಳಾಯೈ ನಮಃ
ಓಂ ರಾಜ ರಾಜಾತೀತ ಪಾದ ಸರೋಜಾಯೈ ನಮಃ

ಮೆಟ್ಟಿಲಿಗೊಂದು ನಾಮವ ನೆನೆಯಿರಿ
ಸಾವಿರ ಹೆಸರಲಿ ದೇವಿಯ ಕರೆಯಿರಿ
ಹೃದಯ ಕಲ್ಮಷ ಕಳೆಯಿರಿ
ಮಧುರ ಮೈತ್ರಿಯ ತಿಳಿಯಿರಿ

ಸಾವಿರ ಮೆಟ್ಟಿಲು ಹತ್ತಿ ಬನ್ನಿ
ಸಾವಿರ ಮೆಟ್ಟಿಲು ಹತ್ತಿ ಬನ್ನಿ
ದೇವಿಯ ಗುಡಿಯ ಸುತ್ತಿ ಬನ್ನಿ
ಭಕ್ತಿಯ ಕಾಣಿಕೆ ಮರೆಯದೆ ತನ್ನಿ
ಆದಿಶಕ್ತಿಗೆ ಶರಣು ಶರಣೆನ್ನಿ

ಸಾವಿರ ಮೆಟ್ಟಿಲು ಹತ್ತಿ ಬನ್ನಿ

ಬದುಕಿನ ಕಡಲಲಿ ಸಾವಿರ ಅಲೆಗಳು
ಅಲೆ ಅಲೆಯಲ್ಲು ನೋವಿನ ಬಳೆಗಳು
ಬದುಕಿನ ಕಡಲಲಿ ಸಾವಿರ ಅಲೆಗಳು
ಅಲೆ ಅಲೆಯಲ್ಲು ನೋವಿನ ಬಳೆಗಳು

ಸೋಲು ಗೆಲುವಿನ ಈ ಬಾಳು
ಹಾಯಲಾರದ ಹರಿಗೋಲು
ಬಾಳ್ವೆ ಬೆಟ್ಟವ ಹತ್ತಲು
ಸಾವಿರ ಮೆಟ್ಟಿಲು
ಸಾವಿರ ಮೆಟ್ಟಿಲು