ಹೊಸ ವರ್ಷ ಬಂದಂತೆ - The Indic Lyrics Database

ಹೊಸ ವರ್ಷ ಬಂದಂತೆ

गीतकार - Dr. N. S. Lakshminarayana Bhatta | गायक - C. Ashwath | संगीत - Garthikere Raganna | फ़िल्म - Album Abhinandana | वर्ष - 1970

Song link

View in Roman

ಹೊಸ ವರ್ಷ ಬಂದಂತೆ ಯಾರು ಬಂದಾರು
ಗಿಡಮರಕೆ ಹೊಸ ವಸ್ತ್ರ ಯಾರು ತಂದಾರು
ಹಾಡೆಂದು ಕೋಗಿಲೆಯ ಕೂಗಿ ಕರೆದರು
ಮಾವಿನ ಚಿಗುರನ್ನು ತಿನಲು ಕೊಟ್ಟಾರು

ಹೊಸ ವರುಷ ಬಂದಂತೆ ಯಾರು ಬಂದಾರು
ಗಿಡಮರಕೆ ಹೊಸ ವಸ್ತ್ರ ಯಾರು ತಂದಾರು

ಯೇನೋ ನೀರಿಕ್ಷೆ ಸೃಷ್ಟಿಯೆಲ್ಲ
ಹೂಗಳ ಪರೀಕ್ಷೆ ದುಂಬಿಗಳಿಗೆಲ್ಲ
ಯೇನೋ ನೀರಿಕ್ಷೆ ಸೃಷ್ಟಿಯೆಲ್ಲ
ಹೂಗಳ ಪರೀಕ್ಷೆ ದುಂಬಿಗಳಿಗೆಲ್ಲ
ಬಂದಾನೋ ವಸಂತ ಬಂಡಿಗಳೇ ಯೆಲ್ಲಾ
ಬಂದಾನೋ ವಸಂತ ಬಂಡಿಗಳೇ ಯೆಲ್ಲಾ
ಹೊಸ ಬೇಕೆ ಹೊಸ ಅಲೆ ರುಚಿರುಚಿಯ ಬೆಲ್ಲ

ಹೊಸ ವರುಷ ಬಂದಂತೆ ಯಾರು ಬಂದಾರು
ಗಿಡಮರಕೆ ಹೊಸ ವಸ್ತ್ರ ಯಾರು ತಂದಾರು

ಯೆನಿದೆಯೋ ಇಲ್ಲವೋ ಆಸೆಯೊಂದುಂಟು
ಬಾಣಿನಲಿ ಹೊಸ ಸೂರ್ಯ ಬರುವ ಮಾತುಂಟು
ಯೆನಿದೆಯೋ ಇಲ್ಲವೋ ಆಸೆಯೊಂದುಂಟು
ಬಾಣಿನಲಿ ಹೊಸ ಸೂರ್ಯ ಬರುವ ಮಾತುಂಟು
ಸಂಜೆಯಲಿ ಮಿಂಚಿದರೆ ಅಂಚುಗಳ ಬಣ್ಣ
ಸಂಜೆಯಲಿ ಮಿಂಚಿದರೆ ಅಂಚುಗಳ ಬಣ್ಣ
ಕಪ್ಪಾದರು ಮುಗಿಲು ಜಾರಿ ಸೀರೆಯಣ್ಣಾ

ಹೊಸ ವರ್ಷ ಬಂದಂತೆ ಯಾರು ಬಂದಾರು
ಗಿಡಮರಕೆ ಹೊಸ ವಸ್ತ್ರ ಯಾರು ತಂದಾರು

ನೆನಪುಗಳ ಜೋಳಿಯಲಿ ತೂಗುವುದು ಮನಸು
ಕಟ್ಟುವುದು ಮಳೆಯಲಿ ಹೊಸ ಹೊಸ ಕನಸು
ನೆನಪುಗಳ ಜೋಳಿಯಲಿ ತೂಗುವುದು ಮನಸು
ಕಟ್ಟುವುದು ಮಳೆಯಲಿ ಹೊಸ ಹೊಸ ಕನಸು
ನನಸಾಗದಿದ್ದರು ಕನಸಿಗಿದೆ ಘನತೆ
ನನಸಾಗದಿದ್ದರು ಕನಸಿಗಿದೆ ಘನತೆ
ತಾಯಿಲ ಯಾವುದೆ ಇರಲಿ ಉರಿಯುವುದು ಹಣತೆ
ತಾಯಿಲ ಯಾವುದೆ ಇರಲಿ ಉರಿಯುವುದು ಹಣತೆ

ಹೊಸ ವರ್ಷ ಬಂದಂತೆ ಯಾರು ಬಂದಾರು
ಗಿಡಮರಕೆ ಹೊಸ ವಸ್ತ್ರ ಯಾರು ತಂದಾರು
ಹಾಡೆಂದು ಕೋಗಿಲೆಯ ಕೂಗಿ ಕರೆದರು
ಮಾವಿನ ಚಿಗುರನ್ನು ತಿನಲು ಕೊಟ್ಟಾರು

ಹೊಸ ವರುಷ ಬಂದಂತೆ ಯಾರು ಬಂದಾರು
ಗಿಡಮರಕೆ ಹೊಸ ವಸ್ತ್ರ ಯಾರು ತಂದಾರು
ಯಾರು ತಂದಾರು.. ಯಾರು ತಂದಾರು..