ಬಾರೋ ಬಾರೋ ಮುದ್ದಿನ ನಲ್ಲ - The Indic Lyrics Database

ಬಾರೋ ಬಾರೋ ಮುದ್ದಿನ ನಲ್ಲ

गीतकार - Chi. Udaya Shankar | गायक - S. P. Balasubramanyam, S. Janaki | संगीत - Rajan-Nagendra | फ़िल्म - Nanna Devaru | वर्ष - 1982

Song link

View in Roman

ಲಾಲಾಲಾ.. ಹೇ ಹೇ ಹೇ
ಲಾಲಾಲಾ.. ಹಾನ್ ಹಾನ್ ಹಾನ್

ಬಾರೋ ಬಾರೋ ಮುದ್ದಿನ ನಲ್ಲ
ನನ್ನ ಸ್ನೇಹ ಸಕ್ಕರೆ ಬೆಲ್ಲ
ನಿನ್ನಂಥ ಗಂಡನು ನಾ ಕಾಣೆ
ಬಿಡನೆಂದು ನಿನ್ನನು ನನ್ನಾನೆ
ಸಂಕೋಚ ನಿನಗೇಕೆ
ಅಯ್ಯಯ್ಯೋ ನೀ ದೂರ ಓಡದಿರು

ತಾಳು ತಾಳು ಮುತ್ತಿನ ರಾಣಿ
ನಿಲ್ಲು ಅಲ್ಲೇ ಬಣ್ಣದ ವೇಣಿ
ಬಾ ಎಂದು ಕೂಗುವೆ ಇಂದೇಕೆ
ಮೈಯ್ಯನು ಸೋಕುವೆ ಹೀಗೇಕೆ
ಚೆಲ್ಲಾಟ ಸಾರಿ ಎನು
ಅಯ್ಯಯ್ಯೋ ನನ್ನನ್ನು ಕಾಡದಿರು

ಬಾರೋ ಬಾರೋ ಮುದ್ದಿನ ನಲ್ಲ
ನಿನ್ನಂಥ ಗಂಡನು ನಾ ಕಾಣೆ

ಮನಸೆಲ್ಲವೂ ನೀನ ಮೇಲಿದೆ
ನಾನಾ ಅಂದವು ನೀನಾಗಿದೆ
ಸಂತೋಷ ಹೊಂಡೋನಾ ಬಾರೋ
ಇಂಥಾ ಹೆಣ್ಣನೂ ಬೇಡ ಅನ್ನೋದುಂಟೆನು
ನಾನಾಗಿ ಕೂಗಿದರು ಬಹಯವು ಇನ್ನೇನು

ನಾನಾ ಆಸೆಯು ನಿನ್ನ ಮೇಲಿದೆ
ನೀನಾ ಅಂದವು ನನಗಾಗಿದೆ
ಅನುರಾಗ ಏನೆಂದು ಬಲ್ಲೆ
ನಾವು ಒಂದಾಗಿ ಆನಂದ ಹೊಂದೋಕೆ
ಈ ಜಾಗ ಸರಿಯಲ್ಲ ಕೇಳೆ ನನ್ನಾಕೆ

ನಿನ್ನ ಮಾತು ಕೇಳೋದಿಲ್ಲ
ಇನ್ನು ನಿನ್ನ ಬಿಡೋದಿಲ್ಲ
ಬಾ ಬೇಗ ಬಲಿ ಈಗ ನಲ್ಲಾ

ತಾಳು ತಾಳು ಮುತ್ತಿನ ರಾಣಿ
ನಿಲ್ಲು ಅಲ್ಲೇ ಬಣ್ಣದ ವೇಣಿ

ಕಣ್ಣಲ್ಲಿಯೇ ಕೊಳಬೇಡವೆ
ಬಾಳಿಯಲ್ಲಿ ನೀ ನಿಲ್ಲಬೇಡ
ಮೈ ಮೇಲೆ ಬೀಳದಿರು ಹೀಗೇ
ಜನರು ಕಂಡರು ನಮ್ಮ ನೋಡಿ ನಾಕಾರು
ದಮ್ಮಯ್ಯ ಕೈಮುಗಿವೆ ಸುಮ್ಮನೆ ಹೋಗು ಹನ್

ಈ ಕೆನ್ನೆಯ ನೀ ತಾಕಡೆ
ಮುದ್ದಾಡಲು ಬಲಿ ಬಾರದೆ
ಮಂಕಾಗಿ ನೋಡದಿರು ಹಾಗೇ
ಪ್ರೀತಿ ಬಂದಾಗ
ಇಂಥಾ ಸಮಯ ಬಂದಾಗ
ಸನ್ಯಾಸಿ ಆಗದೆ ರಸಿಕ ನೀನಾಗು
ಬೇಡ ಏನೊ ಮನಸು ಇಲ್ಲಾ
ಬೇಕು ಅನ್ನೋ ಡೈರಿಯಾ ಇಲ್ಲಾ
ಈಗೇನು ಮಾಡೋದೋ ಕಣೇ

ತಾಳು ತಾಳು ಮುತ್ತಿನ ರಾಣಿ
ನಿಲ್ಲು ಅಲ್ಲೇ ಬಣ್ಣದ ವೇಣಿ

ನಿನ್ನಂಥ ಗಂಡನು ನಾ ಕಾಣೆ
ಬಿಡನೆಂದು ನಿನ್ನನು ನನ್ನಾನೆ

ಚೆಲ್ಲಾಟ ಸಾರಿ ಎನು
ಅಯ್ಯಯ್ಯೋ ನನ್ನನ್ನು ಕಾಡದಿರು

ಯೇ ಬಾರೋ ಬಾರೋ ಮುದ್ದಿನ ನಲ್ಲಾ
ಆಹಾ ಆಹಾ..