ಯೇನೆ ಕನ್ನಡತಿ - The Indic Lyrics Database

ಯೇನೆ ಕನ್ನಡತಿ

गीतकार - R. N. Jayagopal | गायक - S. P. Balasubrahmanyam | संगीत - M. M. Keeravani | फ़िल्म - Appaji | वर्ष - 1996

Song link

View in Roman

ಯೇನೆ ಕನ್ನಡತಿ
ನೀ ಯಾಕೆ ಹಿಂಗಾಡ್ತೀ

ಯೇನೆ ಕನ್ನಡತಿ ನೀ ಯಾಕೆ ಹಿಂಗಾಡ್ತೀ
ಇಂಗ್ಲೀಷು ಯಾಕಡ್ತಿ ಯೆಂದು ಕನ್ನಡ ಮಾತಾಡ್ತಿ
ಈ ಕನ್ನಡ ನೆಲ ಕನ್ನಡ ಜಾಲ
ಕನ್ನಡ ಗಾಳಿ ಕನ್ನಡ ಅಣ್ಣ
ಯೆಂತ ಚಂದನೋ ಗೊತ್ತೇನೆ ಶ್ರೀಮತಿ
ಯಾಕೆ ಈ ತರ ಅನುಕರಣೇ ಮಾಡುತಿ
ಕನ್ನಡ ಸೊಗಡಲಿ ನೀ ಸುಖವ ಕಾಣುತಿ
ಕಲಿಸೋಕೆ ಬಂದೆ ನಾ ಕನ್ನಡದ ಭೂಪತಿ

ಯೇನೆ ಕನ್ನಡತಿ ನೀ ಯಾಕೆ ಹಿಂಗಾಡ್ತೀ
ಇಂಗ್ಲೀಷು ಯಾಕಡ್ತಿ ಯೆಂದು ಕನ್ನಡ ಮಾತಾಡ್ತಿ

ಪೊಗರು ತುಂಬ ನಡೆ ಕೊಬ್ಬು ಯೆಲ್ಲ ಕಡೆ
ಮೂಗಿನ್ ತೂಗಿ ಕೋಪ ಸಾಕು ಸಾಕು ಬಿಡೆ
ಆನೆ ಕೂಡ ಅಡಗಿಸೋಕೆ ಅಂಕುಶವು ಒಂದಿದೆ
ಹೆಣ್ಣು ಹುಲಿ ಪಳಗಿಸೋಕೆ ಕನ್ನಡದ ಗಂಡಿದೇ
ಕನ್ನಡದ ಗಂಡಿದೇ ಕನ್ನಡದ ಗಂಡೀ

ಬಾರೆ ಕಣ್ಮಣಿ ನನ್ನ ಮುದ್ದಿನ ಅರಗಿಣಿ
ನೀ ಕೇಳು ಕಣಿ ಕಾಣಿ ಲಜ್ಜೆ ಗಿಜ್ಜೆ ಕಲಿಸಿನಿ
ನಿನ್ನ ಕೊಬ್ಬು ಇಳಿಸ್ತಿನಿ ಹೊಯ್ಯ್
ಹೂಯ್ ಯಾಕೆ ಈ ತರ ಅನುಕರಣೇ ಮಾಡುತಿ
ಕನ್ನಡ ಸೊಗಡಲಿ ನೀ ಸುಖವ ಕಾಣುತಿ
ಕಲಿಸೋಕೆ ಬಂದೆ ನಾ ಕನ್ನಡದ ಭೂಪತಿ

ಯೇನೆ ಕನ್ನಡತಿ ನೀ ಯಾಕೆ ಹಿಂಗಾಡ್ತೀ
ಇಂಗ್ಲೀಷು ಯಾಕಡ್ತಿ ಯೆಂದು ಕನ್ನಡ ಮಾತಾಡ್ತಿ

ಕುಂಕುಮದ ಬೊಟ್ಟು ಹಣೆಯ ಮೇಲೆ ಐತು
ಚಂದದ ಸೀರೆ ಉಟ್ಟು ಹೂವ ಮುಡಿಯಲಿಟ್ಟು
ಬಳುಕಿ ನಡೆದು ಬರುವಾಗ ಕನ್ನೆರೆದು ಸಾಲದು
ಈ ಜೀನ್ಸ್-ಯು ಜಾಕೆಟ್ ನಿನ್ನಂದಕೆ ಸಲ್ಲದು
ನಿನ್ನಂದಕೆ ಸಲ್ಲದು ನಿನ್ನಂದಕೆ ಸಲ್ಲದು
ಮುತ್ತು ಮೂಗುತಿ ಯೆಂತ ಚಂದ ಅನ್ನುತಿ
ಅದೇ ನಾದ ಸಂಸ್ಕೃತಿ ನಡೆ ನುಡಿ ಕಲಿಸಿನಿ
ಕನ್ನಡತಿ ಮಾಡ್ತೀನಿ ಹೋಯ್

ಯಾಕೆ ಈ ತರ ಅನುಕರಣೇ ಮಾಡುತಿ
ಕನ್ನಡ ಸೊಗಡಲಿ ನೀ ಸುಖವ ಕಾಣುತಿ
ಕಲಿಸೋಕೆ ಬಂದೆ ನಾ ಕನ್ನಡದ ಭೂಪತಿ

ಯೇನೆ ಕನ್ನಡತಿ ನೀ ಯಾಕೆ ಹಿಂಗಾಡ್ತೀ
ಇಂಗ್ಲೀಷು ಯಾಕಡ್ತಿ ಯೆಂದು ಕನ್ನಡ ಮಾತಾಡ್ತಿ

ಯಾಕೆ ಈ ತರ ಅನುಕರಣೇ ಮಾಡುತಿ
ಕನ್ನಡ ಸೊಗಡಲಿ ನೀ ಸುಖವ ಕಾಣುತಿ
ಕಲಿಸೋಕೆ ಬಂದೆ ನಾ ಕನ್ನಡದ ಭೂಪತಿ