ಬಾ ನನ್ನ ಸಂಗೀತ - The Indic Lyrics Database

ಬಾ ನನ್ನ ಸಂಗೀತ

गीतकार - Chi. Udayashankar | गायक - S. P. Balasubramanyam, K. S. Chitra | संगीत - Rajan-Nagendra | फ़िल्म - Matthe Hadithu Kogile | वर्ष - 1990

Song link

View in Roman

ಬಾ ನನ್ನ ಸಂಗೀತ
ಬಾ ನನ್ನ ಸಂಗೀತ
ನಿನಗಾಗಿ ನನ್ನ ಸಂಗೀತ
ಸಂಗಾತಿ ನಿನಗಿಂದು ಶುಭಶಯ ಸಂಗೀತ
ಬಾ ನನ್ನ ಸಂಗೀತ
ನಿನಗಾಗಿ ನನ್ನ ಸಂಗೀತ

ಎಂದಂದು ಬದುಕಲ್ಲಿ ಸಂತೋಷವೇ ತುಂಬಲಿ
ಒಲವು ಹೂವಾಗಿ ಗೆಲುವು ಕಂಪಾಗಿ ಸುಖವೇ ತುಂಬಲಿ
ಆಆ..

ಮಾತಾಡೋ ಮಾತೆಲ್ಲ ಒಂದೊಂದು ಮುತ್ತಾಗಲಿ
ಚೆಲುವೆ ಈ ನನ್ನ ಸನಿಹ ನಿನಗೆಂದು ಹಿತವ ತೋರಲಿ
ನಗು ನಗುತ ನಾವು ದಿನವು ಸೇರಿ ನಲ್ಲೆ ಹೀಗೇ ನಲಿಯುವ
ಕನಸಲ್ಲಿ ತೇಲಾಡುವ ಸವಿಗಾನಸಲ್ಲಿ ತೇಲಾಡುವ

ಬಾ ನನ್ನ ಸಂಗೀತ
ಬಾ ನನ್ನ ಸಂಗೀತ ನಿನಗಾಗಿ ನನ್ನ ಸಂಗೀತ
ಸಂಗಾತಿ ನಿನಗಿಂದು ಶುಭಶಯ ಸಂಗೀತ
ಬಾ ನನ್ನ ಸಂಗೀತ ನಿನಗಾಗಿ ನನ್ನ ಸಂಗೀತ

ಸಿಂಗಾರಿ ಬದುಕಲ್ಲಿ ಶ್ರುಗರವೇ ತುಂಬಲಿ
ನನ್ನ ಬಂಗಾರಿ ನನ್ನ ವಯ್ಯಾರಿ ದಿನವು ನಲಿಯಲಿ
ಹ್ಮ್ಹ್ಮ್.. ಆಆ..

ನಿನ್ನಂಥ ಹೆಣ್ಣನ್ನು ಇನ್ನೆಲ್ಲಿ ನಾ ಕಾಣಲಿ
ನಿನ್ನ ಸೌಂದರ್ಯ ಎಂದು ಹೀಗೇ ನಯನ ಸೆಳೆಯಲಿ
ನಿನ್ನ ಕಂಡ ಮೇಲೆ ನನ್ನ ನಲ್ಲೆ ನೂರು ವರುಷ ಬದುಕುವ
ಹೊಸ ಆಸೆ ನನಗಾಗಿದೆ ಈಗ ಹೊಸ ಆಸೆ ನನಗಾಗಿದೆ

ಬಾ ನನ್ನ ಸಂಗೀತ
ಬಾ ನನ್ನ ಸಂಗೀತ
ನಿನಗಾಗಿ ನನ್ನ ಸಂಗೀತ
ಸಂಗಾತಿ ನಿನಗಿಂದು ಶುಭಶಯ
ಸಂಗೀತಾ..
ಬಾ ನನ್ನ ಸಂಗೀತ
ನಿನಗಾಗಿ ನನ್ನ ಸಂಗೀತ..