ಈ ಸಂಜೆ ಯಾಕಾಗಿದೆ - The Indic Lyrics Database

ಈ ಸಂಜೆ ಯಾಕಾಗಿದೆ

गीतकार - Jayanth Kaikini | गायक - Sonu Nigam | संगीत - Mano Murthy | फ़िल्म - Geleya | वर्ष - 2007

Song link

View in Roman

ಈ ಸಂಜೆ ಯಾಕಾಗಿದೆ

ನೀನಿಲ್ಲದೆ
ಈ ಸಂಜೆ ಯಾಕಾಗಿದೆ

ಈ ಸಂತೆ ಸಾಕಾಗಿದೆ
ನೀನಿಲ್ಲದೆ
ಈ ಸಂತೆ ಸಾಕಾಗಿದೆ

ಏಕಾಂತವೆ ಆಲಾಪವು
ಏಕಾಂಗಿಯ ಸಲ್ಲಾಪವು

ಈ ಮೌನ ಬಿಸಿಯಾಗಿದೆ... ಓ...
ಈ ಮೌನ ಬಿಸಿಯಾಗಿದೆ...

ಈ ಸಂಜೆ ಯಾಕಾಗಿದೆ
ನೀನಿಲ್ಲದೆ
ಈ ಸಂಜೆ ಯಾಕಾಗಿದೆ


ಈ ನೋವಿಗೆ ಕಿಡಿ ಸೋಕಿಸಿ
ಮಜ ನೋಡಿವೆ ತಾರಾಗಣ
ತಂಗಾಳಿಯ ಪಿಸುಮಾತಿಗೆ
ಯುಗವಾಗಿದೆ ನನ್ನ ಕ್ಷಣ
ನೆನಪೆಲ್ಲವು ಹೂವಾಗಿದೆ

ಮೈಯೆಲ್ಲವೂ ಮುಳ್ಳಾಗಿದೆ
ಈ ಜೀವ ಕಸಿಯಾಗಿದೆ... ಓ...
ಈಜೀವ ಕಸಿಯಾಗಿದೆ...

ಈ ಸಂಜೆ ಯಾಕಾಗಿದೆ
ನೀನಿಲ್ಲದೆ
ಈ ಸಂಜೆ ಯಾಕಾಗಿದೆ


ನೀನಿಲ್ಲದೆ ಆ ಚಂದಿರಾ ಈ
ಕಣ್ಣಲಿ ಕಸವಾಗಿದೆ
ಅದನೂದುವ ಉಸಿರಿಲ್ಲದೆ
ಬೆಳದಿಂಗಳು ಅಸು ನೀಗಿದೆ
ಆಕಾಶದಿ ಕಲೆಯಾಗಿದೆ ಈ

ಸಂಜೆಯ ಕೊಲೆಯಾಗಿದೆ
ಈ ಗಾಯ ಹಸಿಯಾಗಿದೆ...
ಈ ಗಾಯಹಸಿಯಾಗಿದೆ...

ಈ ಸಂಜೆ ಯಾಕಾಗಿದೆ
ನೀನಿಲ್ಲದೆ
ಈ ಸಂಜೆ ಯಾಕಾಗಿದೆ

ಈ ಸಂತೆ ಸಾಕಾಗಿದೆ
ನೀನಿಲ್ಲದೆ
ಈ ಸಂತೆ ಸಾಕಾಗಿದೆ

ಏಕಾಂತವೆ ಆಲಾಪವು

ಏಕಾಂಗಿಯ ಸಲ್ಲಾಪವು

ಈ ಮೌನ ಬಿಸಿಯಾಗಿದೆ... ಓ...

ಈ ಮೌನ ಬಿಸಿಯಾಗಿದೆ...

ಈ ಸಂಜೆ ಯಾಕಾಗಿದೆ
ನೀನಿಲ್ಲದೆ
ಈ ಸಂಜೆ ಯಾಕಾಗಿದೆ