ಓ ಸೋನಾ ಓ ಸೋನಾ - The Indic Lyrics Database

ಓ ಸೋನಾ ಓ ಸೋನಾ

गीतकार - K. Kalyan | गायक - Hariharan, Sudeep | संगीत - Rajesh Ramanath | फ़िल्म - Vaali | वर्ष - 2001

Song link

View in Roman

ಓ ಸೋನಾ ಓ ಸೋನಾ ಓ ಸೋನಾ
ಐ ಲವ್ ಯು ಲವ್ ಯು ಡಿಯರ್
ಓ ಸೋನಾ ಓ ಸೋನಾ ಓ ಸೋನಾ
ಐ ಲವ್ ಯು ಲವ್ ಯು ಡಿಯರ್

ಹುಣ್ಣಿಮೆಯ ಬಾಚಿಕೊಂಡ ಹೂ-ಎ
ಅವಳು ಮಿಂಚುಗಳ ಬಚ್ಚಿಕೊಂಡ ಪವರ್-ಎ
ಮಲೆಬಿಲ್ಲ ತೊಟ್ಟುಕೊಂಡ ಬಣ್ಣ-ಎ
ನಾನ್ ಅವಳ ಪ್ರೀತಿ ಮಾಡಿದಂತೆ ಕಥೆ ಸುಂದರ

ಓ ಸೋನಾ ಓ ಸೋನಾ ಓ ಸೋನಾ
ಐ ಲವ್ ಯು ಲವ್ ಯು ಡಿಯರ್

ಒಂದ್ ದಿವ್ಸ ಅವ್ಳು ಮೌತ್ ಆರ್ಗನ್ ಪ್ಲೇ ಮಾಡ್ತಾ ಇದ್ಲು
ನಾನೂ ಕೂತ್ಕೊಂಡ್ ಕೇಳ್ತಾ ಇದ್ದೆ
ನಿಂಗೆ ಪ್ಲೇ ಮಾಡಕ್ ಬರತ್ತ ಅಂದ್ಲು
ನಾ ಬರತ್ತೆ ಅಂದೆ..

ನಿಲ್ಸು ನಿಲ್ಸು...ಯಾಕ್ ಗೊತ್ತು ಅಂದೆ...
ಗೊತ್ತಿಲ್ಲ ಅಂತಾ ಹೇಳ್ಬೇಕಾಯ್ತು

ಯಾಕೆ ಗೊತ್ತಿರೋದ್ನ ಗೊತ್ತು ಅಂತಾ ತಾನೆ ಹೇಳ್ಬೇಕು...
ನಂಗೆ ಸುಳ್ ಹೇಳಕ್ ಇಷ್ಟ ಇಲ್ಲಾ

ಅಯ್ಯೋ ಪೆದ್ದು.
ಹೆಂಗಸ್ರಿಗೆ ಗೊತ್ತಿದೆ ಅನ್ನೋ ಗಂಡಸ್ರಿಗಿಂಥ
ಗೊತ್ತಿಲ್ಲ ಅನ್ನೋ ಗಂಡ್ಸ್ರನ್ನ ಕಂಡ್ರೆನೇ ತುಂಬಾ ಇಷ್ಟ..
ನೀನು ಅವತ್ತು ಗೊತ್ತಿಲ್ಲ ಅಂದಿದ್ರೆ ಅವಳೇ ನಿಂಗೆ ಹೇಳ್ಕೊಡೋಳು
ಹಾಗೋ ಹೀಗೋ ದೊಡ್ಡ್ ರೋಮ್ಯಾನ್ಸ್ ನಡ್’ದಿರೋದೆ
ಚೆ ನಿ ಮಿಸ್ ಮಾಡ್ಕೊಂಡೆ

ಅವತ್ ರೊಮ್ಯಾನ್ಸ್ ನಡೀತೆ

ಹಣ್ಣ್ ನಿಂಗೆ ಗೊತ್ತು ಅಂಥ ಹೇಳಿದ್ ಮೇಲು ರೊಮ್ಯಾನ್ಸ್ ನಡೀತಾ? ಹೇಗೇ?

ಅವ್ಲು ಮೌತ್ ಆರ್ಗನ್ ಕೊಟ್ಲು..
ನಾ ಹತ್ರ ಹೋಗ್ ತಗೊಂಡೆ..
ಮೌತ್ ​​ಆರ್ಗನ್’ನಾ ನೋಡ್’ದೆ.. ಅವ್ಳ್ನಾ ನೋಡ್’ದೆ..
ಮೌತ್ ​​ಆರ್ಗನ್ ಕೆಳಗಿಟ್ಟು, ನಿನ್ ಮೌತ್-ಇ ಆರ್ಗನ್ ಥರ ಇದೆ..
ಮತ್ಯಕ್ ಮೌತ್ ಆರ್ಗನ್ ಅಂತ ಹೇಳಿ ಕಿಸ್ ಮಾಡ್ಬಿಟ್ಟೆ...

ಓ ಸೋನಾ ಓ ಸೋನಾ ಓ ಸೋನಾ
ಐ ಲವ್ ಯು ಲವ್ ಯು ಡಿಯರ್

ಮುತ್ಸಂಜೆ ಹೊತ್ತಲ್ಲಿ ಮಂಜಿನ ಮಾಳೇಲಿ
ನನ್ನವಳು ನೆನೆಯೊಡನ್ನ ಕಂಡು ನಾನು ಕರಗಿದೆ
ಅವಳಂದವ ಚಂದವ ಒಂದಾಗಿ ಸೇರಿಸಿ
ನನ್ನೆದೆಯ ಗೂಡಲಿ ಗುಬ್ಬಿ ಹಾಗೆ ಬಚ್ಚಿಟ್ಟುಕೊಂಡೆ
ಮ್ಯಾಲೆ ನಿಂತೋದ ಪರಿವೇ ಇಲ್ಲ ಅಲ್ಲಿ ಯೇನಾಯ್ತೋ ಅರಿವೇ ಇಲ್ಲಾ
ಯೆಷ್ಟೋ ಮಾತುಗಳು ಯೆಡೆಯಲ್ಲಿ ಉಕ್ಕಿ ಬಂತು
ಬಾಯಿ ತೆರೆದೆ ತುಟಿ ಮೇಲೆ ಒತ್ತಿ ಹರಿ ಹೋದವು ವುವು ವು....

ಓ ಸೋನಾಆಆ ಐ ಲವ್ ಯೂ ಓ ಮೈ ಡಿಯರ್ ಸೋನಾ ಐ ಲವ್ ಯೂ

ಓ ಸೋನಾ ಓ ಸೋನಾ ಓ ಸೋನಾ
ಐ ಲವ್ ಯು ಲವ್ ಯು ಮೈ.....

ವಾಲೀ ಕನ್ನಡ ಹಾಡುಗಳ ಸಾಹಿತ್ಯ

ಓ ಸೋನಾ ಓ ಸೋನಾ
ವಸಂತ ಮಾಸದಳ್ಳಿ
ಚಂದಿರನ ಹಿಡಿದು
ಮೆಲೆ ಚಂದ್ರಣ್ಣ
ದಿಲ್ ಮೇರಿ ದಿಲ್