ಬೇವು ಬೆಲ್ಲ ಹಂಚಿಕೊಂಡ್ರೆ - The Indic Lyrics Database

ಬೇವು ಬೆಲ್ಲ ಹಂಚಿಕೊಂಡ್ರೆ

गीतकार - V. Nagendra Prasad | गायक - Rajesh Krishnan, Sowmya Raoh | संगीत - Gandharva | फ़िल्म - Gaajina Mane | वर्ष - 1999

Song link

View in Roman

ಹೇ ಹೇ ಹ್ಹಾ

ಬೇವು ಬೆಲ್ಲ ಹಂಚಿಕೊಂಡ್ರೆ |2|
ಸಿಹಿ ಕಹಿ ಸೊಗಸಿನ ಯುಗಾದಿ ಹೆಣ್ಣೇ
ಅದು ವರುಷಕೆ ಬರೋದು ಒಂದೇ ದಿನ ಕಣೋ

ಮನ್ಸು ಮನ್ಸು ಮೆಚ್ಚಿಕೊಂಡ್ರೆ |2|
ಸವಿ ಸವಿ ಕನಸಿರೋ ಪ್ರೇಮ ಕಣೋ ಇದು ಪ್ರೇಮ ಕಣೋ
ಹೂ ರಾಮ ರಸ ಕುಡಿದಾಗ ರಾಮ ನವಮಿನೋ
ಪ್ರೇಮ ರಸ ಸವಿ ಅಂತ ನನ್ನ ಮಾನವಿ ಇಲ್ಲ ನನ್ನ ಮನವಿನೋ
ಪ್ರೇಮರಸ ಸವಿದಾಗ ಪ್ರೇಮ ನವಮಿನೋ

ಬೇವು ಬೆಲ್ಲ ಹಂಚಿಕೊಂಡ್ರೆ |2|
ಸಿಹಿ ಕಹಿ ಸೊಗಸಿನ ಯುಗಾದಿ ಹೆಣ್ಣೇ
ಅದು ವರುಷಕೆ ಬರೋದು ಒಂದೇ ದಿನ ಕಣೋ

ಪತಿಯ ಪಾದ ತೊಲೆಯೊಡು ಭೀಮನ ಅಮವಾಸೆ
ಹೃದಯ ಮೀಸಲಿರಿಸೋದು ನನ್ನ ಮನದಾಸೆ
ಶ್ಯಾಮನ ಪೂಜೆ ಮಾಡುವ ಗೋಕುಲಾಷ್ಟಮಿ
ಪ್ರೇಮದ ಪೂಜೆ ಮಾಡುವ ದಿನವು ಪೌರ್ಣಮಿ
ಮೋಡಕದಳ್ಳಿ ಹಹ್ಹ ಮೋಡಕಡಳ್ಳಿ ಮಾಡೋಡು ಶ್ರೀ ಗಣಪನ ಹಬ್ಬ
ಮನದ ಕಡವ ತೆರೆಯೋದು ಪ್ರಣಯನಪ್ಪಾ

ಹೂ ಹತ್ತು ದಿನ ಸಡಗರದ ದಸರಾ ಅಂತೇ
ಮುತ್ತು ಕೊಟ್ರೆ ಸಾರಸದ ಸದಾ ಅಂತೇ
ಹಾನ್ ಬಣ್ಣ ದೀಪ ಹಚ್ಚಿದಾಗ ದೀಪಾವಳಿ
ಕಣ್ಣ ದೀಪ ಹಚ್ಚಿ ನೋಡು ಪ್ರೇಮಾವಳಿ
ಹುತ್ತಕ್ಕೆ ಬೊಟ್ಟನ್ನಿಟ್ರೆ ನಾಗಪಂಚಮಿ
ಚಿತ್ತಕ್ಕೆ ಮುತ್ತನ್ನಿತ್ರೆ ಯೋಗ ಪಂಚಮಿ

ಬೇವು ಬೆಲ್ಲ ಹಂಚಿಕೊಂಡ್ರೆ |2|
ಸಿಹಿ ಕಹಿ ಸೊಗಸಿನ ಯುಗಾದಿ ಹೆಣ್ಣೇ
ಅದು ವರುಷಕೆ ಬರೋದು ಒಂದೇ ದಿನ ಕಣೋ

ದವಸ ಧಾನ್ಯ ಪೂಜಿಸೋದು ಸುಗ್ಗಿ ಸಂಕ್ರಾಂತಿ
ಕಣ್ಣು ಕಣ್ಣು ಕೂಡಿದಾಗ ಇಲ್ಲ ವಿಶ್ರಾಂತಿ
ಸೂರ್ಯ ರಥದಿ ಬರುವಾಗ ರಥ ಸಪ್ತಮಿ
ಪ್ರೇಮ ಗಂಗೆ ನಾನು ನಿನಗೆ ಸಮರ್ಪಯಾಮಿ
ಹಾನ್ ಕಾಮನನ್ನೂ ಹಾನ್ ಕಾಮನನ್ನೂ ದಹಿಸೋದು ಭೋಗಿ ಹಬ್ಬ
ಪ್ರೇಮಕ್ಕಾಗಿ ಜಪಿಸೋನು ಯೋಗಿನಪ್ಪ

ಶಿವ ಧ್ಯಾನ ಮಾಡೋ ರಾತ್ರಿ ಶಿವರಾತ್ರಿಣೋ
ನಿನ್ನ ಧ್ಯಾನ ಮಾಡೋದೇನೆ ದಿನ ರಾತ್ರಿನೋ
ಮೇಲುಕೋಟೆ ವೈರ ಮುದಿಯ ನಾರಾಯಣ
ಪ್ರೀತಿಗೆ ಪ್ರೇಮವೆನೆ ಪಾರಾಯಣ
ಹೇಳಿ ಕೇಳಿ ಮಾಡೋದಲ್ಲಾ ಹೊಲಿಯ ಹಬ್ಬ
ತಾಳಿ ತಾಳಿ ಮಾಡೋದೇನೆ ಪ್ರೇಮನಪ್ಪ

ಬೇವು ಬೆಲ್ಲ ಹಂಚಿಕೊಂಡ್ರೆ |2|
ಸಿಹಿ ಕಹಿ ಸೊಗಸಿನ ಯುಗಾದಿ ಹೆಣ್ಣೇ
ಅದು ವರುಷಕೆ ಬರೋದು ಒಂದೇ ದಿನ ಕಣೋ