ರೆಕ್ಕೆಯ ಕುದುರೆ ಏರಿ - The Indic Lyrics Database

ರೆಕ್ಕೆಯ ಕುದುರೆ ಏರಿ

गीतकार - V Nagendra Prasad | गायक - S P Balasubrahmanyam And Sreya Jayadeep | संगीत - Gvr Vasu | फ़िल्म - Kavacha | वर्ष - 2019

Song link

View in Roman

ರೆಕ್ಕೆಯ ಕುದುರೆ ಏರಿ
ಬೆಳ್ಳಿ ಬೆಳ್ಳಿ ಮೋಡವ ದಾಟಿ
ಬರುವ ನಿನ್ನ ಅಪ್ಪಯ್ಯ

ಮೀನುಗೊ ಚುಕ್ಕಿಗಳನ್ನು
ಹಿಡಿದು ಬೊಗಸೆಯಲ್ಲಿ
ತರುವ ನಿನ್ನ ಅಪ್ಪಯ್ಯ

ರೆಕ್ಕೆಯ ಕುದುರೆ ಏರಿ
ಬೆಳ್ಳಿ ಬೆಳ್ಳಿ ಮೋಡವ ದಾಟಿ
ಬರುವ ನನ್ನ ಅಪ್ಪಯ್ಯ

ಮುಡಿಯುವೆನು ಮುಡಿಯೊಳಗೆ ಮಿನುಗುವ ತಾರೆ
ನಡೆಯುವೆನು ಅವನ ಜೊತೆ ನೋಡಲಿ ಊರೇ
ಕಂದ ಕಂದ ನೀನೇ ಚಂದ ಅಂತ ಅಂತಾನೆ
ನಿನ್ನ ಕೂಡಿ ಕಣ್ಣ ಮುಚ್ಚೇ ಆಟ ಆಡ್ತಾನೆ

ರೆಕ್ಕೆಯ ಕುದುರೆ ಏರಿ
ಬೆಳ್ಳಿ ಬೆಳ್ಳಿ ಮೋಡವ ದಾಟಿ
ಬರುವ ನನ್ನ ಅಪ್ಪಯ್ಯ
ಬರುವ ನನ್ನ ಅಪ್ಪಯ್ಯ

ಕಾಮನ ಬಿಲ್ಲನ್ನು ಕೇಳಿದ
ತಕ್ಷಣ ಕೈಯ್ಯಲ್ಲಿ ಇಡುತಾನೆ
ಹುಣ್ಣಿಮೆ ಬೆಳಕ ವಸ್ತ್ರವ
ಮಾಡಿಸಿ ತಂದು ಕೊಡ್ತಾನೆ

ಕಾಮನಬಿಲ್ಲನ್ನು ಮಾಡಿಕೊಳ್ಲುವೆನು
ಕೈಯ್ಯ ಬಳೆಯಾಗಿ
ಹುಣ್ಣಿಮೆ ವಸ್ತ್ರವ
ಹೊತ್ತಿಕೊಳ್ಳುವೆನು ಕಂಬಳಿಯನ್ನಾಗಿ

ಸ್ವರ್ಗದ ಮೇನೆ ಇಂದ್ರನ ಆನೆ
ಎದುರು ಇಡುವನು
ನಿನ್ನನ್ನು ಮುದ್ದಿಸಿ ಬರುವನು
ಬೊಂಬೆಯ ಮಾಡಿಕೊಂಡು
ಅದರ ಜೊತೆಗೆ ಆಡುವೆನು

ರೆಕ್ಕೆಯ ಕುದುರೆ ಏರಿ
ಬೆಳ್ಳಿ ಬೆಳ್ಳಿ ಮೋಡವ ದಾಟಿ
ಬರುವ ನನ್ನ ಅಪ್ಪಯ್ಯ

ಹಂಸ ನಾವೆಯಲ್ಲಿ
ರಾಜಕುಮಾರಿಯ ಹಾಗೆ ನಿನ್ನನ್ನು
ಏಳು ಬೆಟ್ಟದಾಚೆ ಏಳು ಕಡಲಲ್ಲೂ
ಸುತ್ತಿಸಿ ಬರ್ತಾನೆ

ಅಲ್ಲಾ ಉದ್ದೀನನ ಅದ್ಭುತ
ದೀಪದ ಹಾಗೆ ನನ್ನಪ್ಪ
ಎಲ್ಲ ಸಂತೋಷ ನೀಡುತ್ತಾ
ನನ್ನನ್ನು ಕಂದ ಅಂತಾನೆ

ಕವಿತೆಯ ಹಾಡಿ ಖುಷಿಗಳ ನೀಡಿ
ಸುಂದರ ಕಥೆಗಳು ಹೇಳುತಾ
ನಿದಿರೆ ಮಾಡಿಸುವ
ಹಿಂತಿರುಗಿ ಹೋಗದಂತೆ ನನ್ನ
ಈ ತೋಳಲ್ಲಿ ಬಂಧಿಸುವೆ

ಮೀನುಗೊ ಚುಕ್ಕಿಗಳನ್ನು
ಹಿಡಿದು ಬೊಗಸೆಯಲ್ಲಿ
ತರುವ ನಿನ್ನ ಅಪ್ಪಯ್ಯ

ಮುಡಿಯುವೆನು ಮುಡಿಯೊಳಗೆ ಮಿನುಗುವ ತಾರೆ
ನಡೆಯುವೆನು ಅವನ ಜೊತೆ ನೋಡಲಿ ಊರೇ
ಕಂದ ಕಂದ ನೀನೇ ಚಂದ ಅಂತ ಅಂತಾನೆ
ನಿನ್ನ ಕೂಡಿ ಕಣ್ಣ ಮುಚ್ಚೇ ಆಟ ಆಡ್ತಾನೆ