ಮಳೇ ಹನಿಯು ನದಿಯ - The Indic Lyrics Database

ಮಳೇ ಹನಿಯು ನದಿಯ

गीतकार - V. Nagendra Prasad | गायक - Manoj Vasishta | संगीत - B. R. Surendra Nath | फ़िल्म - Kinaare | वर्ष - 2018

Song link

View in Roman

ಮಳೇ ಹನಿಯು ನದಿಯ ಸೇರಿ
ನದಿಯೊಂದು ಕಡಲ ಸೇರಿ
ಅನುಬಂಧ ಹೇಗೋ ಕಾಣೆ ಮೂಡಿತು

ಮನಸೊಂದು ಮಾನಸ ಸೇರಿ
ಕನ್ನೆರೆಡು ಕನಸ ಮೇರಿ
ಹೊಸದೊಂದು ಭಾವಗೀತೆ ಹಾಡಿತು

ಹೆಸರೇನು ಇಡಬೇಕೋ ಬೆರೆತಿರುವ ಜೋಡಿಗೆ
ಹೆಸರೇಕೆ ಇಡಬೇಕೋ ಪರಶಿವನ ಮೋದಿಗೆ

ಕದಲಿನ ನೀರ ರಂಗು ನೋಡಿ ಪ್ರಶ್ನೆ ಬರಬಹುದಾ
ಈ ಹುಡುಗನ ಮೌನ ಇವಳ ಮೌನ ಖಾಲಿ ಕಾಗಡ

ಸ್ನೇಹವೆನ್ನಲೇನು ಹೇಳು
ಪ್ರೇಮವೆನ್ನಬೇಕೆ ಹೇಳು
ಯೆಲ್ಲವನ್ನು ಮೀರಿ ಬೆಳೆದಿದೆ

ಒಂದೂ ಸನ್ನೆ ಒಂದು ಮಾತು
ಒಂದು ರೆಂಬೆಯಲ್ಲಿ ಕೂತ್ತು
ಯಾವ ಸೂಜಿಗಲ್ಲು ಸೇರಿದೆ

ಹೊಸದಾದ ಚರಿತೆನೋ ಹಿತವಾಯಿತು ಆಶ್ರಯ
ನಾವಿರದ ಕವಿತೇನೋ ಶುಭವಾದ ಆಶಯ

ಅಭಿರುಚಿ ಸೇರಿ ಜೋಡಿಯಾದ ಜೀವ ಜೀವನ
ತಂಗಾಳಿ ಬೀಸಿ ಬಂದ ಹಾಗೆ ತಂಪು ಭವಾನೆ

ಯೆಲ್ಲೋ ಇದ್ದ ಹೂವು ಒಂದು
ಯೆಲ್ಲೋ ಇದ್ದ ನೂಲು ಸೇರಿ
ಹಾರವಾಯಿತಿಂದು ಕಂಡೆಯಾ

ಹೇಗೋ ಇದ್ದ ಕಲ್ಲು ಒಂದು
ಭಕ್ತಿ ಮಂತ್ರ ಯೆಲ್ಲ ಸೇರಿ
ದೇವರಾಗುವಂತ ವಿಸ್ಮಯ

ಕನಸಲ್ಲೂ ಕೆಡುಕಿಲ್ಲ ಮನಸಂತು ಪಾವನ
ಬಯಸುವುದು ಯೆನಿಲ್ಲ ನಿಸ್ವಾರ್ಥ ಜೀವನ

ನೆರಳಿಗೆ ನೆರಳು ತ್ಯಾಗಿ ಯೇನೋ ಉಲ್ಲಾಸ
ಸಾಗರಕೆ ಯೆಂದು ಕಿನಾರೆ ಮೇಲೆ ತಾನೆ ವಿಶ್ವಾಸ