ಓ.. ನಿಧಿಮ.. - The Indic Lyrics Database

ಓ.. ನಿಧಿಮ..

गीतकार - Raghavendra Kamath | गायक - Nakul Abhyankar, Rakshita Suresh | संगीत - Nakul Abhyankar | फ़िल्म - Love Mocktail 2 | वर्ष - 2022

Song link

View in Roman

ನೀನೆ ನೀನೆ
ಉಸಿರು ತುಂಬಿದೆ ನನ್ನಲ್ಲಿ
ನೀನೆ ನೀನೆ
ಜೀವ ತುಂಬಿದೆ ಮತ್ತೆ ನೀ ಬಂದು
ಬದಲಾದೆ ನಾನಿಂದು

ನೀನೆ ನೀನೆ
ಆ ನಗು ತುಂಬಿದೆ ನನ್ನಲ್ಲಿ
ನೀನೆ ನೀನೆ
ಗೆಲುವು ತುಂಬಿದೆ ಮತ್ತೆ ನೀ ಬಂದು
ಸಂತೋಷ ಇನ್ನೆಂದು

ನಿನ್ನಿಂದ ಕನಸು
ಮನಸು ಮತ್ತೇರಿ ಚಿತ್ತಾಗಿದೆ
ನಿನ್ನಿಂದ ಕನಸು
ಮನಸು ಹುಚ್ಚೇರಿ ಚಿತ್ತಾಗಿದೆ

ಓ.. ನಿಧಿಮ..
ನನಗೆ ನೀನಿರೆ ಸ್ಪೂರ್ತಿ
ಓ.. ನಿಧಿಮ..
ನನಗೆ ನೀನಿರೆ ಪ್ರೀತಿ
ಓ.. ನಿಧಿಮ..

ನೀನೆ ನೀನೆ
ಉಸಿರು ತುಂಬಿದೆ ನನ್ನಲ್ಲಿ
ನೀನೆ ನೀನೆ
ಜೀವ ತುಂಬಿದೆ ಮತ್ತೆ ನೀ ಬಂದು
ಬದಲಾದೆ ನಾನಿಂದು

 

ನಾನು ನನಗೆ ನೀನೆ
ಸಿಗಲೇ ಬೇಕು ಏನೇ ಆದರು
ಇದಂತು ಎರಡು ಹೃದಯದ ಸ್ಪಂದನ
ನಿನ್ನಯ ಪ್ರೀತಿಗೆ ಸೋತಂತು ಬಂದೇನ

ನಿನ್ನ ಜೊತೆಗೆ ನಾನು
ಇರಲೇ ಬೇಕು ಏನೇ ಆದರು
ಯಾರಿಗೂ ಕಾಣದ ಮಾಯದ ಸೇತುಬಂಧನ
ಹೊಸ ಹೊಸತನ ತರುತಿದೆ ನಮ್ಮ ಮಿಲನ
ಒಂತರ.. ಸುಂದರ..
ಭಾವವು ಮತ್ತೊಮ್ಮೆ ಮನೆ ಮಾಡಿದೆ
ಉತ್ತರ.. ಉತ್ತರ..
ಇದ್ದಾಗ ಹೇಳೋಕೆ ಮನಸಾಗಿದೆ

ಓ.. ನಿಧಿಮ..
ನನಗೆ ನೀನಿರೆ ಸ್ಪೂರ್ತಿ
ಓ.. ನಿಧಿಮ..
ನನಗೆ ನೀನಿರೆ ಪ್ರೀತಿ
ಓ.. ನಿಧಿಮ..

ನೀನೆ ನೀನೆ
ಉಸಿರು ತುಂಬಿದೆ ನನ್ನಲ್ಲಿ
ನೀನೆ ನೀನೆ
ಜೀವ ತುಂಬಿದೆ ಮತ್ತೆ ನೀ ಬಂದು
ಬದಲಾದೆ ನಾನಿಂದು