ನೀನಿಲ್ಲದೇ ನನಗೇನಿದೆ - The Indic Lyrics Database

ನೀನಿಲ್ಲದೇ ನನಗೇನಿದೆ

गीतकार - M N Vyasa rao | गायक - Mangala Ravi | संगीत - C Ashwath | फ़िल्म - Album | वर्ष - 1989

Song link

View in Roman

ನೀನಿಲ್ಲದೇ ನನಗೇನಿದೆ

ಮನಸ್ಸೆಲ್ಲಾ ನಿನ್ನಲ್ಲೇ ನೆಲೆಯಾಗಿದೆ 

ಕನಸೆಲ್ಲಾ ಕಣ್ಣಲ್ಲೇ ಸೆರೆಯಾಗಿದೆ 

ನೀನಿಲ್ಲದೇ ನನಗೇನಿದೆ 

ನಿನಗಾಗಿ ಕಾದು ಕಾದು 

ಪರಿತಪಿಸಿ ನೊಂದೇ ನಾನು 

ಕಹಿಯಾದ ವಿರಹದ ನೋವು 

ಹಗಲಿರುಳು ತಂದೇ ನೀನು 

  

ನಿನಗಾಗಿ ಕಾದು ಕಾದು 

ಪರಿತಪಿಸಿ ನೊಂದೇ ನಾನು 

ಕಹಿಯಾದ ವಿರಹದ ನೋವು 

ಹಗಲಿರುಳು ತಂದೇ ನೀನು

ಎದೆಯಾಸೆ ಏನೋ ಎಂದೂ 

ನೀ ಕಾಣದಾದೇ  

ನಿಶೆಯೊಂದೆ ನನ್ನಲ್ಲಿ 

ನೀ ತುಂಬಿದೆ 

ಬೆಳಕೊಂದೆ ನಿನ್ನಿಂದಾ 

ನಾ ಬಯಸಿದೆ

ನೀನಿಲ್ಲದೇ ನನಗೇನಿದೆ 

(ಮ್ಯೂಸಿಕ್)

ಒಲವೆಂಬ ಕಿರಣಾ ಬೀರಿ 

ಒಳಗಿರುವ ಮಣ್ಣ ತೆರೆಸಿ 

ಒಳಗಿರುವ ಎದೆನೆಲದಲ್ಲಿ 

ಭರವಸೆಯ ಜೀವ ಹರಿಸಿ

ಒಲವೆಂಬ ಕಿರಣಾ ಬೀರಿ 

ಒಳಗಿರುವ ಮಣ್ಣ ತೆರೆಸಿ 

ಒಳಗಿರುವ ಎದೆನೆಲದಲ್ಲಿ 

ಭರವಸೆಯ ಜೀವ ಹರಿಸಿ 

ಸೆರೆಯಿಂದ ಬಿಡಿಸಿ ನನ್ನ 

ಆತಂಕ ನೀಗೂ 

ಹೊಸ ಜೀವ ನಿನ್ನಿಂದ 

ನಾ ತಾಳುವೇ 

ಹೊಸ ಲೋಕ ನಿನ್ನಿಂದಾ 

ನಾ ಕಾಣುವೆ 

ನೀನಿಲ್ಲದೇ ನನಗೇನಿದೆ

ಮನಸ್ಸೆಲ್ಲಾ ನಿನ್ನಲ್ಲೇ 

ನೆಲೆಯಾಗಿದೆ 

ಕನಸೆಲ್ಲಾ ಕಣ್ಣಲ್ಲೆ 

ಸೆರೆಯಾಗಿದೆ........