ಸೇವಂತಿಯೇ - The Indic Lyrics Database

ಸೇವಂತಿಯೇ

गीतकार - S. Narayan | गायक - S.P. Balasubrahmanyam | संगीत - V. Manohar | फ़िल्म - Suryavamsha | वर्ष - 1999

Song link

View in Roman

ಸೇವಂತಿಯೇ


ಸೇವಂತಿಯೇ ಸೇವಂತಿಯೇ
ನನ್ನಾಸೆ ಅಲೆಯಲ್ಲಿ ಘಮ್ಮಂತಿಯೇ


ಸೇವಂತಿಯೇ ( ಓ ಓ )
ಸೇವಂತಿಯೇ (ಓ ಓ )
ನನ್ನಾಸೆ ಅಲೆಯಲ್ಲಿ ಘಮ್ಮಂತಿಯೇ


ಮಲ್ಲಿಗೆಗಿಂತ ಬಲು ಅಂದ ನೀನು
ಶ್ರೀಗಂಧಕ್ಕಿಂತ ಸೌಗಂಧ ನೀನು
ಜನ್ಮ ಜನ್ಮದ ಪ್ರೀತಿಗೆ ನನ್ನ ಮೆಚ್ಚಿನ ಹಾಡಿದು
ಜನ್ಮ ಜನ್ಮದ ಪ್ರೀತಿಗೆ ನನ್ನ ಮೆಚ್ಚಿನ ಹಾಡಿದು
ಸೇವಂತಿಯೇ ( ಓ ಓ )
ಸೇವಂತಿಯೇ ( ಓ ಓ )
ನನ್ನಾಸೆ ಅಲೆಯಲ್ಲಿ ಘಮ್ಮಂತಿಯೇ


(ಪಪಪ
ಮಮಮ)


ಮಲ್ಲಿಗೆ ಮಂಟಪವ ನನ್ನ ಮನಸಲ್ಲಿ ಕಟ್ಟಿಸುವೆ
ಅಂದದ ಸಿರಿದೇವಿಯ ಅಲ್ಲಿ ಬಚ್ಚಿಟ್ಟು ಪೂಜಿಸುವೆ
ಭುವಿಯ ಹಸಿರಿನಂತೆ ಈ ಪಾದದಡಿಗೆ ಇರುವೆ
ಮಳೆಯ ಮೊಡದಂತೆ ಆ ಸುಡುವ ಬಿಸಿಲಾ ತಡೆವೆ
ಬಾಳಾ ತುಂಬ ನಾ ಬರುವೆ
ಹಸ್ತಕೆ ರೇಖೆಯ ಹಾಗಿರುವೆ
ಚಂದ ಚಂದದ ಸೇವಂತಿಯಾ ಅಂದಕೆ ಕಾವಲು ನಾನಿರುವೆ
 
ಸೇವಂತಿಯೇ ( ಓ ಓ )
ಸೇವಂತಿಯೇ ( ಓ ಓ )
ನನ್ನಾಸೆ ಅಲೆಯಲ್ಲಿ ಘಮ್ಮಂತಿಯೇ

(ಓ ಓ ಓ ಓ ಆ ಆ ಆ ಆ )


ಕಾಲ್ಗೆಜ್ಜೆ ನಾದದಲೀ ಈ ನನ್ನ ಗುಂಡಿಗೆ ಗೂಡು ಇದೆ
ಕೈಬಳೆ ಸದ್ದಿನಲೀ ನನ್ನ ಅಸೆಯ ಬುತ್ತಿ ಇದೆ
ಸಿಂಧೂರ ಬಿಂದಿಗೆಯಲ್ಲಿ ನಾ ಜೀವವ ತುಂಬಿದೆ ಅಲ್ಲಿ
ನೀನಿಟ್ಟ ಕಾಡಿಗೆಯಲ್ಲಿ ( ಓ ಓ )
ನಾನಿಟ್ಟೆ ಪ್ರೀತಿಯ ಬಳ್ಳಿ
ನನ್ನ ಬಣ್ಣದ ಮನಸಿನಲಿ ನಿನ್ನ ಚಿತ್ರವ ಕೆತ್ತಿಸುವೆ
ಯಾರು ಇಲ್ಲದ ಆ ಊರಲಿ ನಾನೇ ನಿನ್ನವನಾಗಿರುವೆ
 
ಸೇವಂತಿಯೇ ( ಓ ಓ )
ಸೇವಂತಿಯೇ ( ಓ ಓ )
ನನ್ನಾಸೆ ಅಲೆಯಲ್ಲಿ ಘಮ್ಮಂತಿಯೇ
ಮಲ್ಲಿಗೆಗಿಂತ ಬಲು ಅಂದ ನೀನು
ಶ್ರೀಗಂಧಕ್ಕಿಂತ ಸೌಗಂಧ ನೀನು
ಜನ್ಮ ಜನ್ಮದ ಪ್ರೀತಿಗೆ ನನ್ನ ಮೆಚ್ಚಿನ ಹಾಡಿದು