ಪ್ರೇಮದ ಗೀತೆಯ ಹಾಡುವ - The Indic Lyrics Database

ಪ್ರೇಮದ ಗೀತೆಯ ಹಾಡುವ

गीतकार - Chi. Udaya Shankar | गायक - Vani Jairam | संगीत - M. S. Viswanathan | फ़िल्म - Benkiyalli Aralida Hoovu | वर्ष - 1983

Song link

View in Roman

ಪ್ರೇಮದ ಗೀತೆಯ ಹಾಡುವ ಕಾಲ ಮುಗಿದಾಯ್ತು
ಜೋಗುಳ ಹಾಡುವ ಕಾಲವು ಹತ್ತೀರ ಬಂದಾಯ್ತು
ಪ್ರೇಮದ ಗೀತೆಯ ಹಾಡುವ ಕಾಲ ಮುಗಿದಾಯ್ತು
ಜೋಗುಳ ಹಾಡುವ ಕಾಲವು ಹತ್ತೀರ ಬಂದಾಯ್ತು

ಆಹಾ ಹಾಹಾ ಹೋ ಲಾಲಿ ಲಾಲಿ ಹಾಡು ಲಾಲಿ ಲಾಲಿ |2|

ಪ್ರೇಮದ ಗೀತೆಯ ಹಾಡುವ ಕಾಲ ಮುಗಿದಾಯ್ತು
ಜೋಗುಳ ಹಾಡುವ ಕಾಲವು ಹತ್ತೀರ ಬಂದಾಯ್ತು

ಅಮವಾಸ್ಯೆಯ ಇರುಳಲಿ ಚಂದ್ರನ ತಂದಂತೆ
ನಿನ್ನೀ ಬಾಳಲ್ಲಿ ಚೆಲ್ಲಿದೆ ಅವನು ಚಂದ್ರಿಕೆ
ಅಮವಾಸ್ಯೆಯ ಇರುಳಲಿ ಚಂದ್ರನ ತಂದಂತೆ
ನಿನ್ನೀ ಬಾಳಲ್ಲಿ ಚೆಲ್ಲಿದೆ ಅವನು ಚಂದ್ರಿಕೆ

ಅರಿಶಿನ ಕುಂಕುಮ ಭಾಗ್ಯವ ನಿನಗೆ ನೀಡಿದಾ
ಸಾರಸವನಾಡುವ ನೆಪದಲಿ ಮಡಿಲ ತುಂಬಿದ

ಆಹಾ ಹಾಹಾ ಲಾಲಿ ಲಾಲಿ ಹಾಡು ಲಾಲಿ ಲಾಲಿ |2|

ಪ್ರೇಮದ ಗೀತೆಯ ಹಾಡುವ ಕಾಲ ಮುಗಿದಾಯ್ತು
ಜೋಗುಳ ಹಾಡುವ ಕಾಲವು ಹತ್ತೀರ ಬಂದಾಯ್ತು

ನನ್ನ ಕಂಗಳು ಸಾವಿರ ಕನಸ ಕಂಡವು
ನಿನ್ನ ಬಾಳಲಿ ಆ ಕನಸು ನನಸಾದವು
ದೊರೆಯಿತು ತಂಗಿ ನಿನಗೆ ಬಯಸದ ಭಾಗ್ಯವು
ನಿನ್ನೀ ನಗುವೆ ನನ್ನ ಬದುಕಿನ ದೀಪವು

ಆಹಾ ಹಾಹಾ ಲಾಲಿ ಲಾಲಿ ಹಾಡು ಲಾಲಿ ಲಾಲಿ |2|

ಶಿವನು ಪಾರ್ವತಿ ಕೈಲಾಸದಲ್ಲಿ ಇರಬೇಕು
ಅವರಾನಂದದ ಸಾಕ್ಷಿಗೆ ಷಣ್ಮುಕ ಬರಬೇಕು
ಶಿವನು ಪಾರ್ವತಿ ಕೈಲಾಸದಲ್ಲಿ ಇರಬೇಕು
ಅವರಾನಂದದ ಸಾಕ್ಷಿಗೆ ಷಣ್ಮುಕ ಬರಬೇಕು

ಗಂಗೆಯು ಶಿವನ ಜೋಡಿಯ ಸ್ನೇಹ ಬಿಡಬೇಕು
ಜಾರುತ ದೂರಕೆ ಶಾಂತಿಯ ಅರಸುತಲಿರಬೇಕು

ಆಹಾ ಹಾಹಾ ಲಾಲಿ ಲಾಲಿ ಹಾಡು ಲಾಲಿ ಲಾಲಿ |2|