ತಾಳಿ ಕಟ್ಟುವ ಶುಭ ವೇಲೆ - The Indic Lyrics Database

ತಾಳಿ ಕಟ್ಟುವ ಶುಭ ವೇಲೆ

गीतकार - Chi. Udaya Shankar | गायक - S. P. Balasubrahmanyam | संगीत - M. S. Viswanathan | फ़िल्म - Benkiyalli Aralida Hoovu | वर्ष - 1983

Song link

View in Roman

ತಾಳಿ ಕಟ್ಟುವ ಶುಭ ವೇಲೆ
ಕೈಯ್ಯಲ್ಲಿ ಹೂವಿನ ಮಾಲೆ
ಹೆ ಹೆ ಹೆ ಆಹಾ ಹಾ
ಹ್ಮ್ ಹ್ಮ್ ಹ್ಮ್ ರಾ ರಾ
ತಾಳಿ ಕಟ್ಟುವ ಶುಭ ವೇಲೆ
ಕೈಯ್ಯಲ್ಲಿ ಹೂವಿನ ಮಾಲೆ
ಯಾರಿಗೆ ಯಾರೆಡ್ನು ವಿಧಿ ಬರೆದಿರುವ ಯೆಂದೋ |2|

ತಾಳಿ ಕಟ್ಟುವ ಶುಭ ವೇಲೆ
ಕೈಯ್ಯಲ್ಲಿ ಹೂವಿನ ಮಾಲೆ

ನಾನೊಬ್ಬ ವಿಕಟ ಕವಿ
ಕೇಳಿ ಒಂದು ಕಥೆ
ಒಂದು ದೊಡ್ಡ ಕಾಡು
ಅಲ್ಲಿ ಒಂದು ದೊಡ್ಡ ಆಳದ ಮರ

ಅಕ್ಕ ತಂಗಿ ಗಿಣಿಗಳು
ಎರಡು ಪಕ್ಕಡಿ ಕುಳಿತಿರಲು
ರೆಕ್ಕೆಯ ಬಡಿಯುತ ಹಾರುತ
ಬಂದವು ಗಿಳಿಗಳು ಇನ್ನಾರಡು

ಅವರದು ಗಂಡು ಗಿಣಿಗಳು

ತಂಗಿಯ ಅಂದ ಕಂಡ ಗಿಣಿಗಳು
ಪ್ರೀತಿಯ ತೋರುತಿರೆ
ಒಂದನು ಕಂಡು ಹೆಣ್ಣರಗಿಣಿಯು
ಆಸೆಯ ಕೇಳುತಿರೆ

ಮನಸ್ಸು ಒಂದಾಯಿತು ಒಲವು ಅರಿಯಿತು
ಚಿನ್ನ ರನ್ನ ನೀನೆ ನನ್ನ ಪ್ರಾಣ

ತಾಳಿ ಕಟ್ಟುವ ಶುಭ ವೇಲೆ
ಕೈಯ್ಯಲ್ಲಿ ಹೂವಿನ ಮಾಲೆ

ತಾಳವು ಮೇಳವು ಮಂಗಳ
ವಾದ್ಯವು ಕಾಡಲಿ ತುಂಬಿತಮ್ಮ
ತಾಳವು ಮೇಳವು ಮಂಗಳ
ವಾದ್ಯವು ಕಾಡಲಿ ತುಂಬಿತಮ್ಮ
ಪುಷ್ಪ ವಿಮಾನದಿ ಮದುವೆಯ
ಉಡುಗೋರೆ ಭೂಮಿಗೆ ಇಳಿಯಿತಮ್ಮ

ಅಂದದ ಹೆಣ್ಣಿನ ಚಂದದ
ಬೆರಳು ವೀಣೆಯ ಮೀಟಿತಮ್ಮ
ಸಿಂಗಾರಿ ಧರಿಸಿದ ಬಂಗಾರ
ಗೆಜ್ಜೆಯು ಘಲ ಘಲ ಕುಣಿಯಿತಮ್ಮ

ಕಾಡಲ್ಲಿ ಮೇಯುವ ಗೋವುಗಳೆಲ್ಲ
ಹರಸಿ ಹೋದವಮ್ಮ
ಪುಟಾಣಿ ಮೊಳಗಳು ಕೈಯ್ಯನು
ಕುಲುಕಿ ಶುಭಶಯ ಕೋರಿತಮ್ಮ

ವಿಶ್ ಯು ವಿಶ್ ಯು ಹ್ಯಾಪಿ ಲೈಫ್
ಹ್ಯಾಪಿ ಹ್ಯಾಪಿ ಮ್ಯಾರೀಡ್ ಲೈಫ್

ಜಿಂಕೆಯು ಒಂದು ಸಡಗರದಿಂದ ಮಂತ್ರವ ಹೇಳಿದಮ್ಮ |೨|
ನೂರಾರು ವರುಷ ಬಾಳಿರಿ ಎಂದು ಆನೆಯು ಹಾಡಿತಮ್ಮ

ತಾಳಿ ಕಟ್ಟುವ ಶುಭ ವೇಲೆ
ಕೈಯ್ಯಲ್ಲಿ ಹೂವಿನ ಮಾಲೆ

ಮಾಲೆಯ ಹಾಕಿದ ಗಿಣಿಗಳು
ಅಂದು ಆನಂದ ಹೊಂಡಿತಮ್ಮ
ಮದುವೆಯ ಮಾಡಿದ ಅರಗಿಣಿ
ಮೌನದಿ ದೂರದಿ ನಿಂತಿತಮ್ಮ

ತಪ್ಪಾಗಿ ತಿಳಿದು ಬೆಪ್ಪದ ಗಂಡು ಗಿಣಿ
ಕಣ್ ಕಣ್ ಬಿಟ್ಟಿತಮ್ಮ
ಅದು ತನ್ನಂತೆ ಏಳು ನಡೆಯದು
ಯೆಂಬ ಸತ್ಯವ ಅರಿಯಿತಮ್ಮ

ತಾಳಿ ಕಟ್ಟುವ ಶುಭ ವೇಲೆ
ಕೈಯ್ಯಲ್ಲಿ ಹೂವಿನ ಮಾಲೆ

ಯಾರಿಗೆ ಯಾರೆಡ್ನು ವಿಧಿ ಬರೆದಿರುವ ಯೆಂದೋ

ತಾಳಿ ಕಟ್ಟುವ ಶುಭ ವೇಲೆ
ಕೈಯ್ಯಲ್ಲಿ ಹೂವಿನ ಮಾಲೆ