ದಯವಿರಲಿ ದಯವಿರಲಿ ದಾಮೋದರ - The Indic Lyrics Database

ದಯವಿರಲಿ ದಯವಿರಲಿ ದಾಮೋದರ

गीतकार - | गायक - | संगीत - | फ़िल्म - | वर्ष - 2016

Song link

View in Roman

ದಯವಿರಲಿ ದಯವಿರಲಿ ದಾಮೋದರ
ದಯವಿರಲಿ ದಯವಿರಲಿ ದಾಮೋದರ ।।
ಸಾಯವಾಗಿ ಬಿಡದೆನ್ನ
ಸಾಯವಾಗಿ ಬಿಡದೆನ್ನ ಸಾಕುವ ಶ್ರೀ ಕೃಷ್ಣ
ದಯವಿರಲಿ ದಯವಿರಲಿ ದಾಮೋದರ
ದಯವಿರಲಿ ದಯವಿರಲಿ ದಾಮೋದರ ।।

ಹೋಗಿ ಬರುವೆನಯ್ಯ ಹೋದ ಹಾಗೆಲ್ಲ ನಾ
ಸಾಗುವವನಲ್ಲನಾ ನಿನ್ನ ಬಿಟ್ಟು
ಸಾಗುವವನಲ್ಲನಾ ನಿನ್ನ ಬಿಟ್ಟು
ತೂಗಿ ತೊಟ್ಟಿಲು ಕೊನೆಗೆ ಸ್ಥಳದಲ್ಲಿ ನಿಲುವಂತೆ
ತೂಗಿ ತೊಟ್ಟಿಲು ಕೊನೆಗೆ ಸ್ಥಳದಲ್ಲಿ ನಿಲುವಂತೆ
ಹ್ಯಾಗೆ ನೀ ನಡೆದಂತೆ ಹಾಗೆ ನಾ ನಾಡಕೊಂಬೆ ಸ್ವಾಮಿ
ಹ್ಯಾಗೆ ನೀ ನಡೆದಂತೆ ಹಾಗೆ ನಾ ನಾಡಕೊಂಬೆ ಸ್ವಾಮಿ..
ದಯವಿರಲಿ ದಯವಿರಲಿ ದಾಮೋದರ
ದಯವಿರಲಿ ದಯವಿರಲಿ ದಾಮೋದರ.. ದಾಮೋದರ..

ಇದ್ದಲ್ಲೇ ಎನ್ನನು ಉದ್ಧಾರಿಪುವ ಶಕ್ತಿ
ಆಸಾಧ್ಯ ನಿನಗೆಂದು ಬಂದವನಲ್ಲವೋ
ಆಸಾಧ್ಯ ನಿನಗೆಂದು ಬಂದವನಲ್ಲವೋ
ನಡ್ಯಾಡಿ ಕ್ಷೇತ್ರ ಮೂರ್ತಿಗಳಳ್ಳಿ
ನಿಜ ಜ್ಞಾನ ವೃದ್ಧ ಜನರನು ಹುಡುಕಿ
ನಿನ್ನ ತಿಳಿಯಾಳು ಬಂದೆ
ನಡ್ಯಾಡಿ ಕ್ಷೇತ್ರ ಮೂರ್ತಿಗಳಳ್ಳಿ
ನಿಜ ಜ್ಞಾನ ವೃದ್ಧ ಜನರನು ಹುಡುಕಿ
ನಿನ್ನ ತಿಳಿಯಾಳು ಬಂದೆ
ದಯವಿರಲಿ ದಯವಿರಲಿ ದಾಮೋದರ ।।
ದಯವಿರಲಿ ದಯವಿರಲಿ ದಾಮೋದರ ।।