ಸ್ಮರಿಸುವೆ ನಾ ನಿಮ್ಮ ಚರಣ ಕಮಲ - The Indic Lyrics Database

ಸ್ಮರಿಸುವೆ ನಾ ನಿಮ್ಮ ಚರಣ ಕಮಲ

गीतकार - Gopala Dasaru | गायक - | संगीत - Gopala Dasaru | फ़िल्म - Devotional / Dasara Padagalu | वर्ष - 1985

Song link

View in Roman

ಸ್ಮರಿಸುವೆ ನಾ ನಿಮ್ಮ ಚರಣ ಕಮಲ ಗುರು ವಿಜಯರಾಯ
ಶರಣಜನಪ್ರಿಯ ಪರಮ ಕರುಣಾನಿಧಿ ವಿಜಯರಾಯ

ಜನ್ಮರಾಬ್ಯವು ನಿಮ್ಮ ಗುಣಕರ್ಮಗಳೆಲ್ಲ ವಿಜಯರಾಯರು
ಇನ್ನು ನಾ ವರ್ಣಿಸಲೇಷ್ಟರವನು ಗುರು ವಿಜಯರಾಯ

ದಿವಿಜರ ವೇಷದಿಂದವನಿಯೊಳುದುಸಿದ್ಯೋ ವಿಜಯರಾಯ
ದಿವಿಜರಿಂದಲಿ ಪ್ರತಿದಿವಸ ಬಿಡದಲಿದ್ಯೋ ವಿಜಯರಾಯ

ಭಾಗವತ ಧರ್ಮವಾಹಿಸಿ ತ್ರಿರಾವರ್ತಿ ವಿಜಯರಾಯ
ಬಗೀರಥಿಯ ಚನ್ನಗಿ ಸೇವಿಸಿದ್ಯೋ ವಿಜಯರಾಯ

ಕಂಚಿ ಕಾಳಹಸ್ತಿ ಶ್ರೀರಂಗ ಸೇತು ಯಾತ್ರೆ ವಿಜಯರಾಯ
ಪಂಚವರವು ಸಂಚಾರಿಸಿ ಸೇವಿಸಿದಯ್ಯ ವಿಜಯರಾಯರು

ಮರಿಯದೆಯಿಲ್ಲದೆ ವರಗಿರಿಯಾತ್ರೆಯ ವಿಜಯರಾಯ
ಪರಿಪರಿಕ್ಷೇತ್ರಕ್ಕೆ ಪೋಗಿ ಪೂಜಿಸಿದಯ್ಯ ವಿಜಯರಾಯ

ಮಹಿಯಲ್ಲಿ ತಿರುಗಿ ಸರ್ವ ಕ್ಷೇತ್ರಾದಿ ವಿಜಯರಾಯರು
ವಹಿಸಿದಸತ್ವ ವೈಷ್ಣವ ಸಿದ್ಧಾಂತ ವಿಜಯರಾಯ

ಗುರುಪದೇಶಕನಾಗಿ ವ್ಯಾಸಕಾಶಿಯಲ್ಲೀದ್ಯೋ ವಿಜಯರಾಯ
ದುಯೋನಿಯಲ್ಲಿ ಬಂದ ವಂಶ ಉದ್ಧಾರಿಸಿದ್ಯೋ ವಿಜಯರಾಯ

ಸ್ವಚ್ಛವಾಗಿ ಗಮ್ಗತಿರಾ ವಸಮಾದಿ ವಿಜಯರಾಯ
ಹೆಚ್ಚದ ಪರ್ವಣಿಯೊಳು ಮತ್ಸ್ಯೊದರಿತೋರ್ದೆ ವಿಜಯರಾಯ

ತುಂಗಾತಿರದಿ ಕುಳಿತು ಗಂಗೆ ಪೆಚ್ಚಿಸಿದ ವಿಜಯರಾಯ
ಅಂಗದ ಮುಸುಕಿಲಿ ಪಾಂಡುರಂಗಣ್ಣ ಕಂಡ್ಯೋ ವಿಜಯರಾಯ

ಮಧ್ವಮತದ ಸಾರ ಕವನಾದಿ ರಚಿಸಿದ್ಯೋ ವಿಜಯರಾಯ
ಅದ್ವೈತ ಸಿದ್ಧಾಂತಬದ್ಧವೇನಿಸಿದ್ಯೋ ವಿಜಯರಾಯ

ಸುದ್ಧ ತತ್ವಸಾರ ಸುಳಾದಿ ಪದಮಾಡಿ ವಿಜಯರಾಯ
ಹೃದಯದಿ ಧಿಮಿಕೇಂದು ಹರಿಯ ಕುಣಿಸಿದ್ಯೋ ವಿಜಯರಾಯ

ಸದಾಚರಸಂಪತ್ತು ಮಧುಕರವೃತ್ತಿಯು ವಿಜಯರಾಯ
ಕಾಡಣ್ಣ ಉಂಡರಿಯಾರು ಶಿಷ್ಯಜನಸಂಗ ವಿಜಯರಾಯರು

ಬಕ್ತರ ಅಪಮೃತ್ಯುಬಿಡಿಸಿ ಆಯುವಿತ್ತೆ ವಿಜಯರಾಯ
ಪ್ರತ್ಯಕ್ಷ್ಯವಲ್ಲವೇ ಮನವೇ ಇದಕೆ ಸಾಕ್ಷಿ ವಿಜಯರಾಯರು

ನಿತ್ಯಣ್ಣ ಪುತ್ರೋತ್ಸವಗಳು ಬ್ರುತ್ಯರಿಗೆ ವಿಜಯರಾಯರು
ಮತ್ತೇ ಧರ್ಮ ಮುಮ್ಜಿ ಮದುವೆಗಳ ಮಾಡಿಸಿದ್ಯೋ ವಿಜಯರಾಯ

ಬಕ್ತಜನರಿಗೆ ತತ್ವ ಉಪದೇಶವ ಮಡಿ ವಿಜಯರಾಯ
ಹೃತ್ಕಮಲಾದಿ ಹರಿಯ ತಿಳಿಸಿ ಸದ್ಗತಿಗಬಯ ಇತ್ತ್ಯೋನಿ ವಿಜಯರಾಯ