ಎಂಥಾ ಮರುಳಯ್ಯ ಇದು - The Indic Lyrics Database

ಎಂಥಾ ಮರುಳಯ್ಯ ಇದು

गीतकार - Lakshminarayana Bhat | गायक - S. P. Balasubrahmanyam | संगीत - C. Ashwath | फ़िल्म - Spandana | वर्ष - 1978

Song link

View in Roman

ಎಂಥಾ ಮರುಳಯ್ಯ ಇದು ಎಂಥಾ ಮರುಳು
ಬೆಳಗಿನ ಹಿಮದಂತೆ ಹರಿವ ನೆರಳು..
ತಾಳ ತಾಳ ಮಿನುಗಿ ಸೋಕಲು ಕರಗಿ
ತಾಳ ತಾಳ ಮಿನುಗಿ ಸೋಕಲು ಕರಗಿ
ಹರಿವುದು ಈ ಬಾಳಿನೆಲ್ಲ ತಿರುಳು
ಹರಿವುದು ಈ ಬಾಳಿನೆಲ್ಲ ತಿರುಳು

ಎಂಥಾ ಮರುಳಯ್ಯ ಇದು ಎಂಥಾ ಮರುಳು..

ಹರಿಯುವ ನೀರಿಗೆ ಯಾವ ಹೊಳೆ
ಹಾರುವ ಹಕ್ಕಿಗೆ ಎಲ್ಲಿ ಮನೆ
ಹರಿಯುವ ನೀರಿಗೆ ಯಾವ ಹೊಳೆ
ಹಾರುವ ಹಕ್ಕಿಗೆ ಎಲ್ಲಿ ಮನೆ
ಬಾಳಿನ ಕದಲಿನಾ..
ಬಾಳಿನ ಕದಲಿನ ತೇರೆಗಳ ಸೀಳಿ
ತಳುಪುವುದಾಚೆಯ ಧಡದಾ ಕೊನೆ
ತಳುಪುವುದಾಚೆಯ ಧಡದಾ ಕೊನೆ

ಎಂಥಾ ಮರುಳಯ್ಯ ಇದು ಎಂಥಾ ಮರುಳು..

ಸಂಜೆಯ ನೇಸರ ಬಣ್ಣದ ನೀಲಿ
ನೀರಲಿ ಹಾರುತ ಬೆಳ್ಳಕಿ ತೇಲಿ
ಸಂಜೆಯ ನೇಸರ ಬಣ್ಣದ ನೀಲಿ
ನೀರಲಿ ಹಾರುತ ಬೆಳ್ಳಕಿ ತೇಲಿ
ಕಡಲಿಗೆ ಸಾಲಾಗಿ..ಈ..
ಕಡಲಿಗೆ ಸಾಲಾಗಿ ಮೂಡುತ ಮುಳುಗುತ
ಬೆನ್ನಟ್ಟಿ ಸಾಗುವ ತೇರೆಗಳ ಹಾಡು
ಸೃಷ್ಟಿಯ ಸುಂದರ ಸುಳ್ಳಿನ ಮಾಲೆ
ಸೃಷ್ಟಿಯ ಸುಂದರ ಸುಳ್ಳಿನ ಮಾಲೆ

ಎಂಥಾ ಮರುಳಯ್ಯ ಇದು ಎಂಥಾ ಮರುಳು..
ಬೆಳಗಿನ ಹಿಮದಂತೆ ಹರಿವ ನೆರಳು..
ತಾಳ ತಾಳ ಮಿನುಗಿ ಸೋಕಲು ಕರಗಿ
ತಾಳ ತಾಳ ಮಿನುಗಿ.. ಸೋಕಲು ಕರಗಿ
ಹರಿವುದು ಈ ಬಾಳಿನೆಲ್ಲ ತಿರುಳು
ಹರಿವುದು ಈ ಬಾಳಿನೆಲ್ಲ ತಿರುಳು
ಎಂಥಾ ಮರುಳಯ್ಯ ಇದು ಎಂಥಾ ಮರುಳು..
ಆಆ... ಹ್ಹಾ...