ಕಾಣದ ಕಡಲಿಗೆ ಹಂಬಲಿಸಿದೆ ಮನ - The Indic Lyrics Database

ಕಾಣದ ಕಡಲಿಗೆ ಹಂಬಲಿಸಿದೆ ಮನ

गीतकार - G. S. Shivarudrappa | गायक - C. Ashwath | संगीत - C. Ashwath | फ़िल्म - Kannada Bhavageethegalu | वर्ष - 2016

Song link

View in Roman

ಕಾಣದ ಕಡಲಿಗೆ ಹಂಬಲಿಸಿದೆ ಮನ
ಕಾಣದ ಕಡಲಿಗೆ.. ಹಂಬಲಿಸಿದೆ ಮನ..
ಕಾಣ ಬಲ್ಲೆನೆ ಒಂದು ದಿನಾ
ಕಡಲನು ಕೂಡ ಬಲ್ಲೆನೆ ಒಂದು ದಿನಾ

ಕಾಣಬಲ್ಲೆನೆ ಒಂದು ದಿನಾ..
ಕಡಲನು.. ಕೂಡಬಲ್ಲೆನೆ ಒಂದು ದಿನಾ

ಕನ್ನಡ ಕಡಲಿಗೆ.. ಹಂಬಲಿಸಿದೆ ಮನ..

ಕಾಣದ ಕಡಲಿನ ಮೋರೆತದ ಜೋಗುಳ
ಒಳಗಿವಿಗಿಂದು ಕೇಳುತಿದೆ
ನನ್ನ ಕಲ್ಪನೆಯು ತನ್ನ ಕಡಲನೆ
ಚಿತ್ರಿಸಿ ಚಿಂತಿಸಿ ಸುಯ್ಯುತಿದೆ

ಕಾಣದ ಕಡಲಿನ ಮೋರೆತದ ಜೋಗುಳ
ಒಳಗಿವಿಗೆಂದು ಕೇಳುತಿದೆ
ನನ್ನ ಕಲ್ಪನೆಯು ತನ್ನ ಕಡಲನೆ
ಚಿತ್ರಿಸಿ ಚಿಂತಿಸಿ ಸುಯ್ಯುತಿದೆ
ಎಲ್ಲಿರುವುದೋ ಅದು.. ಎಂಥಿರುವುದೋ ಅದು..
ನೋಡ ಬಲ್ಲೆನೆ ಒಂದು ದಿನಾ
ಕಡಲನು ಕೂಡ ಬಲ್ಲೆನೆ ಒಂದು ದಿನಾ

ಕಾಣದ ಕಡಲಿಗೆ.. ಹಂಬಲಿಸಿದೆ ಮನ..

ಸಾವಿರ ಹೊಳೆಗಳು ತುಂಬಿ ಹರಿದರು
ಒಂದೇ ಸಮನಾಗಿಹುದಂತೆ
ಸುನೀಲ ವಿಸ್ತಾರ ತರಂಗ ಶೋಭಿತಾ
ಗಂಭೀರಾಂಭೂಧಿ ತಾನಂತೇ

ಸಾವಿರ ಹೊಳೆಗಳು ತುಂಬಿ ಹರಿದರು
ಒಂದೇ ಸಮನಾಗಿಹುದಂತೆ
ಸುನೀಲ ವಿಸ್ತಾರ ತರಂಗ ಶೋಭಿತಾ
ಗಂಭೀರಾಂಭುಧಿ ತಾನಂತೇ..
ಮುನ್ನೂರಂತೆ…
ಅಪರಾವಂತೆ...
ಕಾಣ ಬಲ್ಲೆನೆ ಒಂದು ದಿನಾ
ಅದರೊಲು ಕರಗಲಾರೆನೆ ಒಂದು ದಿನ

ಕಾಣದ ಕಡಲಿಗೆ ಹಂಬಲಿಸಿದೆ ಮನ

ಜಟಿಲ ಕಾನನದ ಕುಟಿಲ ಪಥಗಳಲಿ
ಹರಿವ ತೋರು ನಾನು..
ಎಂಡಿಗಡರು ಕಾಣದ ಕಡಲಿಗೆ ಸೇರ ಬಲ್ಲೆನೆನು

ಜಟಿಲ ಕಾನನದ ಕುಟಿಲ ಪಥಗಳಲಿ
ಹರಿವ ತೋರು ನಾನು..
ಎಂಡಿಗಡರು ಕಾಣದ ಕಡಲಿಗೆ ಸೇರಬಲ್ಲೆನೆನು
ಸೇರಬಹುದೇ ನಾನು..
ಕಡಲ ನೀಲಿಯೊಳು ಕರಗಬಹುದೆ ನಾನು..
ಕರಗಬಹುದೆ ನಾನು..
ಕರಗಬಹುದೆ ನಾನು..