ಅಣ್ಣ ತಂಗಿಯರ ಈ ಬಂಧ - The Indic Lyrics Database

ಅಣ್ಣ ತಂಗಿಯರ ಈ ಬಂಧ

गीतकार - Hamsalekha | गायक - S P Balasubramanyam | संगीत - Hamsalekha | फ़िल्म - Anna Tangi | वर्ष - 2005

Song link

View in Roman

ಅಣ್ಣ ತಂಗಿಯರ ಈ ಬಂಧ

ಜನುಮ ಜನುಮಗಳ ಅನುಬಂಧ

ಅಣ್ಣ ತಂಗಿಯರ ಈ ಬಂಧ

ಜನುಮ ಜನುಮಗಳ ಅನುಬಂಧ

ಜೀವಕ್ಕೆ ಕೊರಳು

ದೇಹಕ್ಕೆ ನೆರಳು

ನಾವಾಗಲೆಂದು ಹರಸುತಿದೆ

ಈ ರಕ್ಷಾ..ಬಂಧನ

ಅಣ್ಣ ತಂಗಿಯರ ಈ ಬಂಧ

ಜನುಮ ಜನುಮಗಳ ಅನುಬಂಧ

ಅಣ್ಣ ತಂಗಿಯರ ಈ ಬಂಧ

ಜನುಮ ಜನುಮಗಳ ಅನುಬಂಧ

ಜೀವಕ್ಕೆ ಕೊರಳು

ದೇಹಕ್ಕೆ ನೆರಳು

ನಾವಾಗಲೆಂದು ಹರಸುತಿದೆ

ಈ ರಕ್ಷಾ..ಬಂಧನ

(ಮ್ಯೂಸಿಕ್)

ನೀ ಹುಟ್ಟಿದ ಶುಭಾದಿನವೇ

ಈ ರಾಖಿ ಹಬ್ಬ ಬಂದಿತ್ತು

ಸೋದರಿಕೆಯೊಂದು ವರವೆಂದು

ಈ ರಾಖಿ ಸಾಕ್ಷಿ ಹೇಳಿತ್ತು

ತಂಗಿಯೂ ಹುಟ್ಟಿದಾಕ್ಷಣ

ಅಣ್ಣನ ಪದವಿ ಹುಟ್ಟಿತು

ತಂಗಿಯೂ ಹುಟ್ಟಿದಾಕ್ಷಣ

ಅಣ್ಣನ ಪದವಿ ಹುಟ್ಟಿತು

ಗಂಡಿಗೆ ಗೌರವದ ಗರೀ ಏರಿತು

ಮುದ್ದಾಗಿ ನೀನು ಅಣ್ಣ ಅಣ್ಣ

ಅನ್ನೋದೇ ನನಗೆ ಓಂಕಾರ

ನನ್ನ ಆಯುವೆಲ್ಲ ನಿನಗಾಗಿ ತಾನೆ

ಧಿರ್ಘಾಯುಷ್ಮಾನ ಭವ..

ಅಣ್ಣ ತಂಗಿಯರ ಈ ಬಂಧ

ಜನುಮ ಜನುಮಗಳ ಅನುಬಂಧ

ಅಣ್ಣ ತಂಗಿಯರ ಈ ಬಂಧ

ಜನುಮ ಜನುಮಗಳ ಅನುಬಂಧ

ಜೀವಕ್ಕೆ ಕೊರಳು

ದೇಹಕ್ಕೆ ನೆರಳು

ನಾವಾಗಲೆಂದು ಹರಸುತಿದೆ

ಈ ರಕ್ಷಾ… ಬಂಧನ

(ಮ್ಯೂಸಿಕ್)

ದೇವರುಗಳೆಲ್ಲ ಧರೆಗಿಳಿದು

ಉಡಿತುಂಬಾ ವರವ ತುಂಬಿದರು

ಈ ಅಣ್ಣನೆಂಬ ವರಸಾಕು

ನಾ ಅಲ್ಲೇ ಇರುವೆ ಕೈಮುಗಿದು

ಅಣ್ಣ ಅನ್ನೋ ಕೂಗಲಿ

ಎಲ್ಲ ದೇವರಿರುವರು

ಅಣ್ಣ ಅನ್ನೋ ಕೂಗಲಿ

ಎಲ್ಲ ದೇವರಿರುವರು

ಜನುಮಕೆ ಒಬ್ಬಣ್ಣಾ ಸಾಕೆನುವರು

ತವರಾಗೆ ನೀನು ತಂಗಿ ತಂಗಿ

ಅನ್ನೋದೇ ನನಗೆ ಶ್ರೀರಕ್ಷೆ

ಎದೆಯಾದೆ ನೀನು ಹೆಗಲಾದೆ ನೀನು

ಬ್ರಾತೃದೇವೋ ಭವ

ಅಣ್ಣ ತಂಗಿಯರ ಈ ಬಂಧ

ಜನುಮ ಜನುಮಗಳ ಅನುಬಂಧ

ಅಣ್ಣ ತಂಗಿಯರ ಈ ಬಂಧ

ಜನುಮ ಜನುಮಗಳ ಅನುಬಂಧ

ಜೀವಕ್ಕೆ ಕೊರಳು

ದೇಹಕ್ಕೆ ನೆರಳು

ನಾವಾಗಲೆಂದು ಹರಸುತಿದೆ

ಈ ರಕ್ಷಾ… ಬಂಧನ