ಧರಣಿ - The Indic Lyrics Database

ಧರಣಿ

गीतकार - Dr. V Nagendraprasad | गायक - Pancham Jeeva, Santhosh Venky, Aniruddha Sastry, Madhwesh Baradwaj, Vihan, Khushala, Lakshmi Vijay, Meghana Kulkarni, Pooja Rao, Archana & Prarthana | संगीत - V Harikrishna | फ़िल्म - Kranti | वर्ष - 2022

Song link

View in Roman

ಧರಣಿ ಮಂಡಲ ಮದ್ಯದಲಿ
ಮೆರೆವ ಕನ್ನಡ ದೇಶದಲಿ
ಮೊಳಗೋ ಕಹಳೆ
ಧನಿ ಕೇಳಿ ಬೆಚ್ಚೋ ಗಗನ

ಕಪಟ ಇಲ್ಲದ ಊರಿನಲ್ಲಿ
ಕರುಣೆ ತುಂಬಿದ ನಾಡಿನಲ್ಲಿ
ದಿನವು ಕ್ಷಣವೂ
ರಣ ಕಲಿಗಳಿಲ್ಲಿ ಜನನ

ಕನ್ನಡದಲಿ ಉಸಿರಾಡುವುದೆನ್ನೆದೆ..
ಕನ್ನಡ ಉಳಿದು ಬೇರೆ ಏನಿದೆ?
ತಿರುಗೋ ಭೂಮಿಗೆ ಗೊತ್ತು
ಕನ್ನಡಕಿರುವ ಗತ್ತು
ಕ್ರಾಂತಿಗೆ ತಿಲಕವನಿಟ್ಟ
ನಾಡು ನಮ್ಮದು

ತಾಯಿಯ ಕೂಗಿಗೆ ಬಂದೆನು ಇಲ್ಲಿಗೆ

ಧರಣಿ ಮಂಡಲ ಮದ್ಯದಲಿ
ಮೆರೆವ ಕನ್ನಡ ದೇಶದಲಿ
ಮೊಳಗೋ ಕಹಳೆ
ಧನಿ ಕೇಳಿ ಬೆಚ್ಚೋ ಗಗನ

ಕಪಟ ಇಲ್ಲದ ಊರಿನಲ್ಲಿ
ಕರುಣೆ ತುಂಬಿದ ನಾಡಿನಲ್ಲಿ
ದಿನವು ಕ್ಷಣವೂ
ರಣ ಕಲಿಗಳಿಲ್ಲಿ ಜನನ

ಗಗನದೊಳು ಪಡಪಡಿಸೋ ಭಾಷೆಯ ಬಾವುಟ ನಮ್ದೇನೆ
ಧರೆಯೊಳಗೆ ಘಮಘಮಿಸೋ ಗಂಧದ ಗುಡಿಯು ನಮ್ದೇನೆ
ಕಪ್ಪು ಮಣ್ಣ ಭೂಮಿ ನಿಂದೆ ಕನ್ನಡಿಗ
ಸ್ವಾಮಿ ಆಂಜನೇಯ ನಮ್ಮ ಕನ್ನಡಿಗ
ಯುವನರ ತಡೆದು ನೆತ್ತರ ಬಸಿದ
ಒನಕೆಯ ಹಿಡಿದು ತಲೆಗಳ ಕಡಿದ
ವಿಶ್ವದ ಲಿಪಿಗಳ ರಾಣಿ
ಅಮೃತ ಉಣಿಸುವ ಮಾಣಿ
ಮಂತ್ತ್ರಾಕ್ಷತೆಯ ಭರಣಿ ನನ್ನ ಕನ್ನಡ

 

ಕನ್ನಡ ತಾಯಿಗೆ ಜನ್ಮವೇ ಚಿರಋಣಿ..

ಧರಣಿ ಮಂಡಲ ಮದ್ಯದಲಿ
ಮೆರೆವ ಕನ್ನಡ ದೇಶದಲಿ
ಮೊಳಗೋ ಕಹಳೆ
ಧನಿ ಕೇಳಿ ಬೆಚ್ಚೋ ಗಗನ

ಕಪಟ ಇಲ್ಲದ ಊರಿನಲ್ಲಿ
ಕರುಣೆ ತುಂಬಿದ ನಾಡಿನಲ್ಲಿ
ದಿನವು ಕ್ಷಣವೂ
ರಣ ಕಲಿಗಳಿಲ್ಲಿ ಜನನ

ನೀಲಿ ಸಿದ್ದಪ್ಪಾಜಿ ಸ್ವಾಮಿ ಬನ್ಯೋ ಬನ್ಯೋ
ಮಂತೆದ ಲಿಂಗಯ್ಯ ಬನ್ಯೋ..
ಸಿದ್ದಾರೂಢ ಸ್ವಾಮಿ
ಸ್ವಾಮಿ ಮಹಾನತಜ್ಜ
ಎಲ್ಲವ್ವ ನಿಂಗ್ ನಾಲ್ಕು ಧೋ..

ಕಾವೇರ ಸ್ವಾಭಿಮಾನ ಮಹದಾಯಿ ಗುಣಗಾನ
ಗಡಿ ನಾಡು ನಮ್ಮ ಪ್ರಾಣ.. ಕೇಳು
ವೀರತ್ವ ಬಾಳಿನಲ್ಲಿ ಸಾಮರ್ಥ್ಯ ತೋಳಿನಲಿ
ಪ್ರಾಚೀನ ನಾವೇ ಇಲ್ಲಿ..
ಧೈರ್ಯದ ಬಟ್ಟಲು ಧರ್ಮದ ತೊಟ್ಟಿಲು..