ರಾಣಿ ಯುವರಾಣಿ - The Indic Lyrics Database

ರಾಣಿ ಯುವರಾಣಿ

गीतकार - V. Nagendra Prasad | गायक - Tippu, Shwetha Prabhu | संगीत - B. R. Surendra Nath | फ़िल्म - Kinaare | वर्ष - 2018

Song link

View in Roman

ಹೇ ಸಜನಾಆಆಆಆಆ ಸಜ್ಞಾಆಆಆಆಆಆಆ

ರಾಣಿ ಯುವರಾಣಿ ಕೇಳೆನ್ನ ಹಾಡನು
ನಿನ್ನ ನೋಡೋ ಆಸೆಲಿ ಬಾಡಿ ಹೋದೆನು
ರಾಜ ಯುವ ರಾಜ ನೋಡೆನ್ನ ಪಾಡನು
ನಿನ್ನ ಸೇರೋ ಆಸೆಲಿ ಕರಗ ಹೋದೆನು

ಚಳಿಗಾಲ ಬಂತು ಇಲ್ಲಿ ಬೇವರೆಕೋ ನನ್ನ ಮೈಲಿ
ಗಲಿಗೆಯು ಯುಗದ ಹಾಗೆ ಕಾಯುತ್ತಿರುವಾಗ

ದಿನವೆಲ್ಲಾ ಕಾಡು ಕಾಡು ಬಯಸುತ್ತದೆ ನಿನ್ನ ಜಾಡು
ಅಂಗಾಂಗದಲ್ಲಿ ಅಬ್ಬ ತುಂಬಾ ಆವೇಗ

ಬೆರೆಯಲಿ ಹರೆಯ ಬೇಸೆಯಲಿ ಹೃದಯ ನಾವು ಹಾಯಗುವ
ಪ್ರಾಣದ ವರವ ಒಲುಮೆಯ ಸ್ವರವ ಹಾದಿ ಒಂದಾಗುವ

ಮದನ ರಾಜ ಮದನ ರಾಣಿ ಹಾಡೋ ಆಲಾಪ
ವಿರಹ ರಾಗ ಸನಿಹ ಯೋಗ ನೀಡೋ ಈ ತಾಪ
ಮದನ ರಾಜ ಮದನ ರಾಣಿ ಹಾಡೋ ಆಲಾಪ
ವಿರಹ ರಾಗ ಸನಿಹ ಯೋಗ ನೀಡೋ ಈ ತಾಪ

ದೇಶ ಸೀಮೆ ದಾತಿ ದೂರಾ
ಸಾಗಿ ಸುಖವಾಗಿ ನೆಲೆಯಾಗುವ

ಗಾಳಿ ಗಂಧ ಕಾವ್ಯ ನಾದ
ಸೇರಿ ಕಲೆತಂತೆ ನಾವಾಗುವ

ಯಾವ ಸೇನೆ ಎದುರಾರೂ ನಿನ್ನ ನಾ ಬಿಡೇನು
ನೀನು ಒಮ್ಮೆ ಮರೆಯಾದರೂ ನಾನು ಸಾಯುವೆನು

ಈ ಜಗದ ಹಂಗೂ ಬೇಕಿಲ್ಲ ನಂಗೂ
ನಾನಿರುವೆ ನಿಂಗೂ ಒಲವೊಂದೆ ಗುಂಗು

ಅಮರವಾದ ಮಧುರವಾದ ಪ್ರೇಮ ಈ ಪ್ರೇಮ
ಹೃದಯ ನೀಡೀ ಹೃದಯ ಕೇಳೋ ಹೋಮ ಈ ಪ್ರೇಮ
ಅಮರವಾದ ಮಧುರವಾದ ಪ್ರೇಮ ಈ ಪ್ರೇಮ
ಹೃದಯ ನೀಡೀ ಹೃದಯ ಕೇಳೋ ಹೋಮ ಈ ಪ್ರೇಮ

ಬೇರೆ ಒಂದು ಲೋಕದಲ್ಲಿ ಯಾವ
ಮನುಜನು ಇರಬಾರದು...!
ಅಲ್ಲಿ ನಾವು ಕೂಡು ಮಾಡಿ ಯಾರಾ
ಕಣ್ಣಿಗೂ ಸಿಗಬಾರದು...!

ಚೈತ್ರ ಒಂದು ಋತುವಾಗಲಿ ಪ್ರೇಮದಾಗಸಕೆ
ಆಸೆ ತಾಳ ಶ್ರುತಿಯಾಗಲಿ ಪ್ರೇಮದಾಗಾರಕೆ

ಈ ನಿನ್ನ ಪ್ರವರ ನೆರಳಾಗೋ ಶಿಖರ...!
ಈ ಜೆನ ಅಧಾರ ಮಧುರಾತಿ ಮಧುರಾ...!

ಚೆಲುವ ನಾನು ಚೆಲುವೆ ನೀನು ನಾಲೆ ನಮ್ಮದೆ
ಸಾರಸ ನೀನು ಸದಾ ನಾನು ಪ್ರೀತಿ ಚಿಮ್ಮಿದೆ
ಚೆಲುವ ನಾನು ಚೆಲುವೆ ನೀನು ನಾಲೆ ನಮ್ಮದೆ
ಸಾರಸ ನೀನು ಸದಾ ನಾನು ಪ್ರೀತಿ ಚಿಮ್ಮಿದೆ