ಪುಷ್ಪವತಿ - The Indic Lyrics Database

ಪುಷ್ಪವತಿ

गीतकार - Yogaraj Bhat | गायक - Aishwarya Rangarajan, V Harikrishna | संगीत - V Harikrishna | फ़िल्म - Kranti | वर्ष - 2023

Song link

View in Roman

ಲೇಲ್ಯಾಂಡು ಗಾಡಿ ಹತಿ
ಬಂತೊಂದು ಕಲಾಕೃತಿ
ಸರ್ವಾಂಗ ನರಂ ಐತಿ
ಸೌಂದರ್ಯ ಗರಂ ಐತಿ
ಹೈಕ್ಲಾಸು ಹಂಸ ನಡಿಗಿ
ಹಲ್ಲಂಡೆ ವಂಶ ಬೆಡಗಿ
ಸುತ್ತಳತಿ ಮಸರು ಗಡಿಗಿ
ಸವಿನಂತಿ ಕೇಳ ಹುಡುಗಿ
ಸೊಂಟ ಸುಮಕ ಯಾಕ ಬಿಡತಿ?

ಶೇಕ್ ಇಟ್ ಪುಷ್ಪವತಿ! X3

ನಿಮ ನೋಡಾಕ ಬಂದೆನಿ ಭಾವಾ
ನನ ಶಿಷ್ಟರ್ ಬಾಯ್ ಫ್ರೆಂಡ್ ನೀವಾ
ಗ್ಯಾಪ್ಯಾಕ ಇಟ್ಕೊಂತೀರಿ
ಆತ್ಯಾಕ ನಿಂತ್ಕೊವಲ್ಲರಿ
ಗಿಫ್ಟ್ ಕೊಡ್ರಿ ಒಂದು ಸತಿ..

ಶೇಕ್ ಇಟ್ ಪುಷ್ಪವತಿ! X3

ತಟಗು ಕೊಬ್ರಿ ಎಣ್ಣಿ
ತಲಿಗಿ ತಟ್ಟೋವ್ರು ಬೇಕಾಗೈತಿ
ಹೀಟಾಗೈತಿ
ಉಭಯ ಕುಸುಲೋಪ್ರಿ
ಒಟ್ಟಿಕೂತ್ಕೊಂಡು ಮಾತಾಡೋವ್ರು
ಬೇಕಾಗೈತಿ ಬೇಕಾಗೈತಿ

ಆ ಟೈಪು ಆವ್ಹಾನ ಕೊಡಬ್ಯಾಡ್ರಿ
ನಮಗ್ ಏಕ್ದಮ್ಮು ಏರತೈತಿ ಧಡಕನ್ನು
ನಮ್ದು ಏನ ಇದ್ರು ಮನಿ ಊಟ
ತಿನ್ನಂಗಿಲ್ಲಾ ಹೊರಗ ಗುಲಕನ್ನು

ನಾ ಪುಷ್ಪವತಿ
ನೋ ಅನಬ್ಯಾಡ್ರಿ ನೋವಾಕೈತಿ

ಯಸ್ ಅಂದ್ರು ತ್ರಾಸಕೈತಿ
ನೋ ಅಂದ್ರು ತ್ರಾಸಕೈತಿ
ಬ್ಯಾಕು ಬಳುಕು ಯಾಕೆ ಬಿಡುತಿ, ಯಾಕೆ ಬಿಡುತಿ..

 

ಶೇಕ್ ಇಟ್ ಪುಷ್ಪವತಿ! X3

ಅಕ್ಕನ ರವಿಕಿ ತೊಟ್ಟಾಗೆಲ್ಲ
ನೀವ ನೆನಪಾಕ್ಕಿರಿ ಭಾವಾ
ಬೇಕು ಪಿಂಕು ಆಗೊಕ್ಕೆನಿ
ತಡಕೊಳ್ಳದೆ ಇಲ್ಲ ಜೀವ

ಬುಲ್ ಬುಲ್ಲು ಬರತಾಳ
ಬಾಯಿತುಂಬ ಬೈತಾಳ
ನಿಂಗೆರಡು ಬಿಡ್ತಾಳ
ನನ್ನ ಎಳ್ಕೊಂಡು ಹೋಗ್ತಾಳ
ಎದೆ ಹತ್ರ ಯಾಕ ಬರ್ತಿ
ಏದು ಉಸಿರು ಯಾಕ ಬಿಡ್ತಿ
ತಲಿ ಹತ್ರ ಯಾಕ ಜಿಗಿತಿ
ಕಿವಿ ಹತ್ರ ಯಾಕ ನಗತಿ
ಬಾಡಿ ಬಳುಕು ಯಾಕ ಬಿಡತಿ, ಯಾಕ ಬಿಡತಿ

ಶೇಕ್ ಇಟ್ ಪುಷ್ಪವತಿ! X3