ಹೊಸ ಬಾಳು ನಿನ್ನಿಂದ - The Indic Lyrics Database

ಹೊಸ ಬಾಳು ನಿನ್ನಿಂದ

गीतकार - Chi. Udayashankar | गायक - S. Janaki | संगीत - Rajan-Nagendra | फ़िल्म - Auto Raaja | वर्ष - 1980

Song link

View in Roman

ಹೊಸ ಬಾಳು ನಿನ್ನಿಂದ
ಹೊಸ ಬಾಳು ನಿನ್ನಿಂದ
ನೀ ತಂದೇ ಆನಂದ
ನಿನ್ನ ನಾ ನೋಡಲು
ಹೋ ನಿನ್ನ ನಾ ಸೇರಲು
ತನುವು ಹೂವಾಯ್ತು ಮನವು ಜೇನಾಯ್ತು
ತನುವು ಹೂವಾಯ್ತು ಮನವು ಜೇನಾಯ್ತು

ಹೊಸ ಬಾಳು ನಿನ್ನಿಂದ
ನೀ ತಂದೇ ಆನಂದ
ನಿನ್ನ ನಾ ನೋಡಲು
ಹೋ ನಿನ್ನ ನಾ ಸೇರಲು

ನಿನ್ನ ನಾ ಮೆಚ್ಚಿ ನನ್ನ ನೀ ಮೆಚ್ಚಿ
ಪ್ರೀತಿಯಿಂದ ಮನಸು ಬಿಚ್ಚಿ ಮಾತನಾಡಿ
ನೀನೆ ನನ್ನ ಜೋಡಿ ಯೆಂದು ಕೈ ನೀಡಿ ಸಂಗಾತಿ ಯಾದೆನು

ನಿನ್ನ ಸ್ನೇಹಕ್ಕೆ ನಿನ್ನ ಪ್ರೇಮಕ್ಕೆ ಯೆಂದು ನಾನು
ಸೋತು ಹೋದೆ ಮುದ್ದು ನಲ್ಲ
ನಿನ್ನ ಮಾತಲ್ಲಿ ಕಣ್ಣ ಮಿಂಚಲ್ಲಿ ನೀರಾಗಿ ಹೋದೆನು
ನೀರಾಗಿ ಹೋದೆನು

ಹೊಸ ಬಾಳು ನಿನ್ನಿಂದ
ನೀ ತಂದೇ ಆನಂದ
ನಿನ್ನ ನಾ ನೋಡಲು ಹೋ ನಿನ್ನ ನಾ ಸೇರಲು

ನೋಟ ಒಂದಾಗಿ ಆಸೆ ಒಂದಾಗಿ ನಿನ್ನ ನನ್ನ
ಮನಸು ಮನಸು ಬೆರತು ಹೋಗಿ
ಬಯಕೆ ಹೂವಾಗಿ ಪ್ರೀತಿ ಹನ್ನಾಗಿ ಒಂದಾಗಿ ಹೋದೆವು

ಮಾತು ಬಂಗಾರ ಗುಣವು ಬಂಗಾರ
ನನ್ನ ರಾಜ ನನ್ನ ಬಾಳ ಬಂಗಾರ
ನೀನು ನನ್ನಂತೆ ನಾನು ನಿನ್ನಂತೆ
ನೀ ನಾನಾ ಜೀವವು
ನೀ ನಾನಾ ಜೀವವು

ಹೊಸ ಬಾಳು ನಿನ್ನಿಂದ
ನೀ ತಂದೇ ಆನಂದ
ನಿನ್ನ ನಾ ನೋಡಲು
ಹೋ ನಿನ್ನ ನಾ ಸೇರಲು
ತನುವು ಹೂವಾಯ್ತು ಮನವು ಜೇನಾಯ್ತು
ತನುವು ಹೂವಾಯ್ತು ಮನವು ಜೇನಾಯ್ತು

ಹೊಸ ಬಾಳು ನಿನ್ನಿಂದ
ನೀ ತಂದೇ ಆನಂದ
ನಿನ್ನ ನಾ ನೋಡಲು
ಹೋ ನಿನ್ನ ನಾ ಸೇರಲು