ಪೊಗಾದಿರೆಲೋ ರಂಗಾ.. - The Indic Lyrics Database

ಪೊಗಾದಿರೆಲೋ ರಂಗಾ..

गीतकार - Purandara Dasa | गायक - S. Janaki | संगीत - G. K. Venkatesh | फ़िल्म - Haalu Jenu | वर्ष - 1982

Song link

View in Roman

ಪೊಗಾದಿರೆಲೋ ರಂಗಾ..

ಪೊಗಾದಿರೆಲೋ ರಂಗಾ..
ಬಾಗಿಲಿಂದಾಚೆ
ಪೊಗಾದಿರೆಲೊ ರಂಗ
ಭಾಗವತರು ಕಂಡು
ಭಾಗವತರು ಕಂಡು
ಎತ್ತಿಕೊಂಡೋಯ್ವರು ರಂಗ
ಪೊಗಾದಿರೆಲೊ ರಂಗ

ಸುರಮುನಿಗಳು ತಮ್ಮ ಹೃದಯ ಕಮಲದಲ್ಲಿ
ಸುರಮುನಿಗಳು ತಮ್ಮ ಹೃದಯ ಕಮಲದಲ್ಲಿ
ಪರಮಾತ್ಮನ ಕಾಣದೆ ಅರಸುವರು..
ಧೋರಕಧ ವಸ್ತುವು ಧೋರಕೀತು ತಮಗೆಂದು
ಧೋರಕಧ ವಸ್ತುವು ಧೋರಕೀತು ತಮಗೆಂದು
ಹರುಷದಿಂದಲಿ ನಿನ್ನ ಕರದೆತ್ತಿ ಕೊಂಬುವರು
ಪೊಗಾದಿರೆಲೊ ರಂಗ

ಅಗಣಿತ ಗುಣ ನಿನ್ನ ಜಗದ ನಾರಿಯರೆಲ್ಲಾ
ಅಗಣಿತ ಗುಣ ನಿನ್ನ ಜಗದ ನಾರಿಯರೆಲ್ಲಾ
ಹಗೆಯಾಗಿ ನುಡಿದರು ಗೋಪಾಲನೆ
ಮಗುಗಳ ಮಾಣಿಕ್ಯ ತಗಳಿತು ಕರಕೆಂದು
ವೇಗದಿಂದಲಿ ಬಂದು ಬಿಗಿದಪ್ಪಿ ಕೊಂಬುವರು
ಪೊಗಾದಿರೆಲೊ ರಂಗ

ದಿಟ್ಟ ನಾರಿಯರೆಲ್ಲ ಇಷ್ಟವ ಸಲಿಸೆಂದು
ದಿಟ್ಟ ನಾರಿಯರೆಲ್ಲ ಇಷ್ಟವ ಸಲಿಸೆಂದು
ಅಟ್ಟತ್ತಿ ಬೆನ್ನತ್ತಿ ತಿರುಗುವರೋ.. ಊ.. ಓ..
ಅಟ್ಟತ್ತಿ ಬೆನ್ನತ್ತಿ ತಿರುಗುವರೋ..
ಸೃಷ್ಟಿಶ ಪುರಂಧರ ವಿಟ್ಟಲ ರಾಯನೇ
ಸೃಷ್ಟಿಶ ಪುರಂಧರ ವಿಟ್ಟಲ ರಾಯನೇ
ಇಷ್ಟಿಷ್ಟು ಬೆಣ್ಣೆಯಾ.. ಕೊಟ್ಟೇನೋ ರಂಗಯ್ಯ

ಪೊಗಾದಿರೆಲೊ ರಂಗ
ಬಾಗಿಲಿಂದಾಚೆಗೆ ಪೊಗಾದಿರೆಲೊ ರಂಗ