ನಲಿವ ಗುಲಾಬಿ ಹೂವೇ ಮುಗಿಲ - The Indic Lyrics Database

ನಲಿವ ಗುಲಾಬಿ ಹೂವೇ ಮುಗಿಲ

गीतकार - Chi. Udayashankar | गायक - S. P. Balasubrahmanyam | संगीत - Rajan-Nagendra | फ़िल्म - Auto Raaja | वर्ष - 1980

Song link

View in Roman

ನಲಿವ ಗುಲಾಬಿ ಹೂವೇ ಮುಗಿಲ ಮೇಲೇರಿ ನಗುವೆ
ನಲಿವ ಗುಲಾಬಿ ಹೂವೇ ಮುಗಿಲ ಮೇಲೇರಿ ನಗುವೆ
ನಿನಗೆ ನನ್ನಲ್ಲಿ ಒಲವೂ ಅರಿಯೆ ನನ್ನಲ್ಲಿ ಚಲವೂ
ನಲಿವ ಗುಲಾಬಿ ಹೂವೆ
ಒಲವೂ ಚಲವೂ ಒಲವೂ ಚಲವೂ

ಸುಳಿದೇ ತಂಗಾಳಿಯಂತೆ ನುಡಿದೆ ಸಂಗೀತದಂತೆ
ಸುಳಿದೇ ತಂಗಾಳಿಯಂತೆ ನುಡಿದೆ ಸಂಗೀತದಂತೆ
ಒಲವಿನ ಬಾಳೆಯಲಿ ಸೆಲೆಯುತ ಕುಣಿದೆ
ಸೊಗಸಾಗಿ ಹಿತವಾಗಿ

ಮನವ ನೀ ಸೇರಲೆಂದೇ ಬಯಕೆ ನೂರಾರು ತಂದೆ
ಬಯಸದೆ ಬಲಿಯಲಿ ಸುಳಿಯುತ ಒಲಿದೆ
ಇಂದೇಕೆ ದೂರಾದೆ
ಬಯಸದೆ ಬಲಿಯಲಿ ಸುಳಿಯುತ ಒಲಿದೆ
ಇಂದೇಕೆ ದೂರದೆ ಹೀಗೇಕೆ ಮರೆಯಾದೆ

ನಲಿವ ಗುಲಾಬಿ ಹೂವೇ ಮುಗಿಲ ಮೇಲೇರಿ ನಗುವೆ
ನಿನಗೆ ನನ್ನಲ್ಲಿ ಒಲವೂ ಅರಿಯೆ ನನ್ನಲ್ಲಿ ಚಲವೂ
ನಲಿವ ಗುಲಾಬಿ ಹೂವೆ
ಒಲವೂ ಚಲವೂ ಒಲವೂ ಚಲವೂ

ಸುಮವೇ ನೀ ಬಾಡದಂತೆ ಬಿಸಿಲಾ ನೀ ನೋಡದಂತೆ
ಸುಮವೇ ನೀ ಬಾಡದಂತೆ ಬಿಸಿಲಾ ನೀ ನೋಡದಂತೆ
ನೆರಳಲಿ ಸುಖದಲಿ ನಗುತಿರು ಚೆಲುವೆ
ಎಂದೆಂದು ಎಂದೆಂದು

ಇರು ನೀ ಹಾಯಾಗಿ ಹೀಗೇ ಇರಲಿ ನನಗೆಲ್ಲ ಬೇಗ
ಕನಸಲಿ ನೋಡಿದ ಸಿರಿಯನು ಮರೆವೆ
ನಿನಗಾಗಿ ನನಗಾಗಿ
ಕನಸಲಿ ನೋಡಿದ ಸಿರಿಯನು ಮರೆವೆ
ನಿನಗಾಗಿ ನನಗಾಗಿ
ನಿನಗಾಗಿ ನನಗಾಗಿ

ನಲಿವ ಗುಲಾಬಿ ಹೂವೇ ಮುಗಿಲ ಮೇಲೇರಿ ನಗುವೆ
ನಿನಗೆ ನನ್ನಲ್ಲಿ ಒಲವೂ ಅರಿಯೆ ನನ್ನಲ್ಲಿ ಚಲವೂ
ನಲಿವ ಗುಲಾಬಿ ಹೂವೆ
ಒಲವೂ ಚಲವೂ ಒಲವೂ ಚಲವೂ
ನಲಿವ ಗುಲಾಬಿ ಹೂವೆ