ನಾ ನಿನ್ನ ಆಸೆ ಕಂಡೆ - The Indic Lyrics Database

ನಾ ನಿನ್ನ ಆಸೆ ಕಂಡೆ

गीतकार - Chi. Udaya Shankar | गायक - Rajkumar, S. Janaki | संगीत - Upendra Kumar | फ़िल्म - Ravi Chandra | वर्ष - 1980

Song link

View in Roman

ಕಂಗಳಲಿ ಪ್ರಾಣದ ಹಣತೆ ಬೆಳಗಿರಲಿ
ನಿನ್ನದರ ಪ್ರೇಮದ ಕವಿತೆ ಹಾದಿಗಳು
ನಿನ್ನೊಲವ ನಾ ಕಂಡು ಸೋತು ಹೊಗಿರಾಳು

ನಾ ನಿನ್ನ ಆಸೆ ಕಂಡೆ ಬೆರಗಾಗಿ ಮೂಕಳಾದೆ
ನಾ ನಿನ್ನ ಆಸೆ ಕಂಡೆ ಬೆರಗಾಗಿ ಮೂಕಳಾದೆ
ನಾನೇನು ಹಾಡಲೀಗ
ನಾನೇನು ಹಾಡಲೀಗ
ನೀ ಹೇಳು ಪ್ರಿಯಾ ಈಗ
ನಾ ನಿನ್ನ ಆಸೆ ಕಂಡೆ ಬೆರಗಾಗಿ ಮೂಕಳಾದೆ ನಾಟ್ಯವನ್ನು
ನಾ ನಿನ್ನ ಆಸೆ ಕಂಡೆ ಬೆರಗಾಗಿ ಮೂಕಳಾದೆ

ಹೂವಿಗೆ ಗಂಧವನ್ನು ನಾ ಚೆಲ್ಲ ಬೇಕು
ನವಿಲಿಗೆ ನಾಟ್ಯವನ್ನು ನಾ ಕಲಿಸಬೇಕು
ಕೋಗಿಲೆಗೆ ಹಾಡೆಂದು ಕೋಗಿಲೆಗೆ ಹಾಡೆಂದು ನಾ ಹೇಳಬೇಕು

ನಾ ನಿನ್ನ ನುಡಿಯ ಕೇಳಿ ಬೆರಗಾಗಿ ಮೂಕನಾದೆ
ನಾನೇನು ಮಾಡಲೀಗ
ನಾನೇನು ಮಾಡಲೀಗ
ನೀ ಹೇಳೆ ಪ್ರಿಯಾ ಈಗ
ನಾ ನಿನ್ನ ನುಡಿಯ ಕೇಳಿ ಬೆರಗಾಗಿ ಮೂಕನಾದೆ

ವೀಣೆಯು ಆದರೇ ನೀ
ವೀಣೆಯು ಆದರೇ ನೀ
ವೈಯಾನಿಕಾ ಪ್ರಿಯಾ ನೀನು
ಗಾಯಕಿ ಆದರೆ ನಾ ಗಾನವು ಪ್ರಿಯ ನೀನು
ನುಡಿಸಲು ನಾ ನುಡಿವೇ ನಡೆಯಲು ನಾ ನಡೆವೆ
ನಿನ್ನಾನೆ ನಲ್ಲಾ

ನಾ ನಿನ್ನ ಆಸೆ ಕಂಡೆ ಬೆರಗಾಗಿ ಮೂಕಳಾದೆ
ನಾ ನಿನ್ನ ಆಸೆ ಕಂಡೆ ಬೆರಗಾಗಿ ಮೂಕಳಾದೆ

ವೀಣೆಯು ನೀನಲ್ಲ ವೈಯಾನಿಕನು ನಾನಲ್ಲ
ವಾನಿಗೆ ವೀಣೆಯನು ಕಲಿಸುವರು ಯಾರು ಇಲ್ಲ
ಕುಣಿಸುವೆ ಕಂಗಳಲೆ ತಣಿಸುವೆ ಮಾತಿನಲೆ
ಕುಣಿಸುವೆ ಕಂಗಳಲೆ ತಣಿಸುವೆ ಮಾತಿನಲೆ
ಅಂಥಾ ಜಾನೇ ನೀನೇ

ನಾ ನಿನ್ನ ಆಸೆ ಕಂಡೆ ಬೆರಗಾಗಿ ಮೂಕಳಾದೆ
ನಾ ನಿನ್ನ ನುಡಿಯ ಕೇಳಿ ಬೆರಗಾಗಿ ಮೂಕನಾದೆ
ನಾನೇನು ಮಾಡಲೀಗ
ನಾನೇನು ಹಾಡಲೀಗ
ನೀ ಹೇಳೆ ಪ್ರಿಯಾ ಈಗ
ನೀ ಹೇಳು ಪ್ರಿಯಾ ಈಗ