ಸಲಾಂ ಸೋಲ್ಜರ್! - The Indic Lyrics Database

ಸಲಾಂ ಸೋಲ್ಜರ್!

गीतकार - Chethan Kumar | गायक - Sanjith Hegde, Charan Raj | संगीत - Charan Raj | फ़िल्म - James | वर्ष - 2022

Song link

View in Roman

ರಣ ರಣ ರಣ ರಣಕಲಿಯೋ
ಯುದ್ಧ ಭೂಮಿಗೆ ಇವ ಕಳೆಯೋ
ಧಗ ಧಗ ಧಗ ಧಗ ಉರಿಯೋ
ಸೂರ್ಯನೇ ಸುಡೋ ಉಸಿರೋ

ರಣ ರಣ ಕಲಿ ರಣಕಲಿಯೋ
ಇಡಿ ದೇಶವೇ ನಿನ್ನ ಮನೆಯೋ
ಧಡ ಧಡ ಧಡ ಧಡ ದಡೆಯೋ
ನಿನ್ನ ತ್ಯಾಗಕೆಂದು ನಾವು ರುಣಿಯೋ

ಆ ಸಿಡಿಲು ಮಳೆಯೇ ಬಂದರು
ಸಾಗರವೇ ಉಕ್ಕಿ ಹರಿದರು
ಎದುರಾಳಿ ಎದುರಿಗೆ ನಿಂತರು
ನೀ ಮುನ್ನುಗ್ಗಿ ದೇಶನ ಕಾಯುವೆ

ಜನ ಗಣ ಮನ ಎದೆಯಲ್ಲಿದೆ ಒಹೋ
ಬಲಿದಾನಕುನು ನೀನು ರೆಡಿ ಒಹೋ
ಮಣ್ಣುಕೂಡ ನಿನ್ನ ನೆನೆಯುತ್ತೇ ಒಹೋ
ಎಂದೆಂದೂ ನಿಂಗೆ ಜೈ ಹೋ

ಸಲಾಂ ಸೋಲ್ಜರ್!
ನೀನಿದ್ರೆ ಇಲ್ಲ ಡೇಂಜರ್
ಸಲಾಂ ಸೋಲ್ಜರ್!
ನೀ ದೇಶಕ್ಕೆನೆ ಪವರ್
ಸಲಾಂ ಸೋಲ್ಜರ್!
ನಿನ್ ಹೆಸರಲಿಹುದು ಫೈರ್
ಸಲಾಂ ಸೋಲ್ಜರ್!
ಎಂದೆಂದೂ ನೀನೆ ಸೇವಿಯರ್

 

ಗಟ್ಟಿ ಗುಂಡಿಗೆ ಒಹೋ ಶಿಸ್ತು ನಡಿಗೆ
ದೇಶ ಕಾಯುವೆ ನೀ ಕೊನೆಯವರೆಗೆ
ದಿನ ನಡುಕ ಆ ವೈರಿ ಪಡೆಗೆ
ನಿನ್ನ ಎದೆಯಲ್ಲಿ ಭಯವಿಲ್ಲ ರಣರೋಚಕ

ನಿನ್ನ ನೆರಳೆ ಧೈರ್ಯ ನಮಗೆ ಕೇಳೋ
ನಿನ್ನ ಹೆಸರೇ ಹೆಮ್ಮೆ ನಮಗೆ
ನಿನ್ನ ಸೇವೆ ಶ್ರೇಷ್ಠ ನಮಗೆ
ಗಡಿಯಲ್ಲಿ ಸಿಡಿದೇಳುವ ಸೈನಿಕ

ದಿನ ದಿನವು ಹೋರಾಟ
ಬಂದೂಕಿನ ಒಡನಾಟ
ಹೊಸ ಸಮರದ ಸೆಣಸಾಟ
ಒಹ್ ನೀನು ಧೈರ್ಯದ ಸಾಮ್ರಾಟ

ಹೆತ್ತವರ ಬಿಟ್ಟಿರುವೆ ಬಯಕೆಗಳ ತೊರೆದಿರುವೆ
ದೃಡವಾಗಿ ನಿಂತಿರುವೆ
ನೀ ದೇಶಕೆ ಮುಡಿಪಾಗಿ ಇರುವೆ
ಸೋಲ್ಜರ್ ಸೋಲ್ಜರ್ ಈ ಕೇಸರಿ ಬಿಳಿ ಹಸಿರು
ನಿನ್ ಎದೆಯ ಪ್ರತಿ ಉಸಿರು
ಅಜರಾಮರ ನಿನ್ನ ಹೆಸರು
ಹೇಯ್ ನಿನಗೆ ಸಾಟಿ ಯಾರೋ?

ದಿನ ದಿನ ದಿನ ದುಡಿವೆ ನೀನು ಒಹೋ
ಕ್ಷಣ ಪ್ರತಿ ಕ್ಷಣ ರಭಸದಲಿ ಒಹೋ
ಕಣ ಕಣದಲ್ಲೂ ದೇಶಪ್ರೇಮ ಒಹೋ
ಎಂದೆಂದೂ ನಿಂಗೆ ಜೈ ಹೋ

ಸಲಾಂ ಸೋಲ್ಜರ್!
ನೀನಿದ್ರೆ ಇಲ್ಲ ಡೇಂಜರ್
ಸಲಾಂ ಸೋಲ್ಜರ್!
ನೀ ದೇಶಕ್ಕೆನೆ ಪವರ್
ಸಲಾಂ ಸೋಲ್ಜರ್!
ನಿನ್ ಹೆಸರಲಿಹುದು ಫೈರ್
ಸಲಾಂ ಸೋಲ್ಜರ್!
ಎಂದೆಂದೂ ನೀನೆ ಸೇವಿಯರ್