ಏಕಮ್ಮ ಶೀಲಮ್ಮ - The Indic Lyrics Database

ಏಕಮ್ಮ ಶೀಲಮ್ಮ

गीतकार - M N Vyasa Rao | गायक - Rajkumar Bharathi, S. Janaki | संगीत - L. Vaidyanathan | फ़िल्म - Antharala | वर्ष - 1982

Song link

View in Roman

ಏಕಮ್ಮ ಶೀಲಮ್ಮ ಬಿಂಕ ನನ್ನಲ್ಲಿ
ಬಾರಮ್ಮ ಕೂರಮ್ಮ ನನ್ನ ಕಾರಳ್ಳಿ
ಹಳೆಯ ಆಡ ಈ ಮಾದರಿ ಬೋರೆ-ಯು ನನಗೇ
ಇಲ್ಲಾ ಆಕಾರ ತೋರಿಸು ಇಲ್ಲಾ ನಿನ್ನ ಗಾಡಿಗೆ
ಈ ದೇಹ ನೀ ನೋಡಿ ಹಾರಬೇಡವೆ
ಈ ಜೋಡಿ ಒಂದಾಗಿ ತಾನೆ ಓಡದೆ

ಏಕಮ್ಮ ಶೀಲಮ್ಮ ಬಿಂಕ ನನ್ನಲ್ಲಿ
ಬಾರಮ್ಮ ಕೂರಮ್ಮ ನನ್ನ ಕಾರಳ್ಳಿ

ನಿನ್ನ ಇರಿವ ನೋಟ ನನ್ನೆದೆಯ ಸೀಳಿದೆ
ನಿನ್ನ ಪ್ರೇಮ ಸೆಲೆಯಲ್ಲೇ ಕನಸು ತೆಳಿದೆ
ಚಂದ್ರ ಸೂರ್ಯಕಾಂತಿ ನಿನ್ನಲ್ಲಿ ನೆಲೆಸಿದೆ
ನಿನ್ನ ಮೋಹ ನಗೆಯನ್ನ ಜೀವ ಸೆಲೆದಿದೆ
ಅರೆರೆ ಶೀಲಮ್ಮ ಸನಿಹ ಬಾರಮ್ಮ
ಬಯಕೆ ನೀಗಮ್ಮ ನಗೆಯ ತೋರಮ್ಮ
ಹಗಲಿನಲಿ ಇರುಳಿನಲಿ ನೀನೆ ಕಾಡುವೆ

ಏಕಮ್ಮ ಶೀಲಮ್ಮ ಬಿಂಕ ನನ್ನಲ್ಲಿ
ಬಾರಮ್ಮ ಕೂರಮ್ಮ ನನ್ನ ಕಾರಳ್ಳಿ

ಬಾಳಿನಲ್ಲಿ ನೀನು ದಿಗಂತ ಬೆಳಗಿದೆ
ಹೊಸ ರಾಗ ಚಿಗುರಿ ವಸಂತ ಮೂಡೆ
ನಲುಗದಂತೆ ನಿನ್ನ ನಾನೆಂದು ಕಾಯುವೆ
ನಿನಗಾಗಿ ನಾನಿರುವೆ ನೆರಳಿನಾಸರೆ
ನಾನು ನಿನಗಾಗಿ ನೀನು ನನಗಾಗಿ
ನಾವು ಒಂದಾಗಿ ಬಾಳು ನಮಗಾಗಿ
ನಲಿವಿರಲಿ ನೋವಿರಲಿ ನಾ ನಿನ್ನ ಸೇರುವೆ

ಏಕಮ್ಮ ಶೀಲಮ್ಮ ಬಿಂಕ ನನ್ನಲ್ಲಿ
ಬಾರಮ್ಮ ಕೂರಮ್ಮ ನನ್ನ ಕಾರಳ್ಳಿ

ಹಳೆಯ ಆಡ ಈ ಮಾದರಿ ಬೋರೆ-ಯು ನನಗೇ
ಇಲ್ಲಾ ಆಕಾರ ತೋರಿಸು ಇಲ್ಲಾ ನಿನ್ನ ಗಾಡಿಗೆ
ಈ ದೇಹ ನೀ ನೋಡಿ ಹಾರಬೇಡವೆ
ಈ ಜೋಡಿ ಒಂದಾಗಿ ತಾನೆ ಓಡದೆ