ನೀಡು ಶಿವ ನೀಡದಿರು ಶಿವ - The Indic Lyrics Database

ನೀಡು ಶಿವ ನೀಡದಿರು ಶಿವ

गीतकार - Hamsalekha | गायक - K. S. Chithra | संगीत - Hamsalekha | फ़िल्म - Sangeetha Sagara Ganayogi Panchakshara Gavai | वर्ष - 1995

Song link

View in Roman

ಮ್.. ಮ್.. ಮ್..

ನೀಡು ಶಿವ ನೀಡದಿರು ಶಿವ
ನೀಡು ಶಿವ ನೀಡದಿರು ಶಿವ
ಬಾಗುವುದು ನನ್ನ ಕಾಯ
ಬಾಗುವುದು ನನ್ನ ಕಾಯ

ನೀಡು ಶಿವ ನೀಡದಿರು ಶಿವ
ಬಾಗುವುದು ನನ್ನ ಕಾಯ
ನೀಡು ಶಿವ ನೀಡದಿರು ಶಿವ
ಬಾಗುವುದು ನನ್ನ ಕಾಯ
ನಾನೇಕೆ ಅಂಜಲಿ ನೀ ನನ್ನ ಅಂಬಲಿ
ನೀಡು ಶಿವ ನೀಡದಿರು ಶಿವ
ಬಾಗುವುದು ನನ್ನ ಕಾಯ..

ಶೃಂಗಾರಾ ಕೃತಕಾ ಬಂಗಾರ ಕ್ಷಣಿಕಾ
ಬಾಳಲ್ಲಿ ಬಡಿವಾರವೇಕೆ?
ಶೃಂಗಾರಾ ಕೃತಕಾ ಬಂಗಾರ ಕ್ಷಣಿಕಾ
ಬಾಳಲ್ಲಿ ಬಡಿವಾರವೇಕೆ?
ನೀ ನಿಂತ ಕಾಯ.. ಆಆ..
ನೀ ನಿಂತ ಕಾಯ ನಿನ್ನ ಕೈಲೇ ಮಾಯಾ
ಆಗೋದು ಹೋಗೋದು ನಾ ಕಾಣೆನೆ

ನೀಡು ಶಿವ ನೀಡದಿರು ಶಿವ
ಬಾಗುವುದು ನನ್ನ ಕಾಯ
ನಾನೇಕೆ ಅಂಜಲಿ
ನೀ ನನ್ನ ಅಂಬಲಿ
ನೀಡು ಶಿವ ನೀಡದಿರು ಶಿವ
ಬಾಗುವುದು ನನ್ನ ಕಾಯ..

ಮಾಳಿಗೆ ಕೊಟ್ಟರು ಮರದಡಿಯೇ ಇಟ್ಟರು
ನಾನಂತು ನಿನ್ನನ್ನಲಾರೆ
ಮಾಳಿಗೆ ಕೊಟ್ಟರು ಮರದಡಿಯೇ ಇಟ್ಟರು
ನಾನಂತು ನಿನ್ನನ್ನಲಾರೆ
ಸಾರಂಗ ಮನಕೆ ಆ...
ಸಾರಂಗ ಮನಕೆ ನೂರಾರು ಬೇಕೆ
ಮುಂದಿಟ್ಟು ಉಣಿಸೋದು ನಾ ಕಾಣೆನೆ

ನೀಡು ಶಿವ ನೀಡದಿರು ಶಿವ
ಬಾಗುವುದು ನನ್ನ ಕಾಯ
ನಾನೇಕೆ ಅಂಜಲಿ
ನೀ ನನ್ನ ಅಂಬಲಿ
ನೀಡು ಶಿವ ನೀಡದಿರು ಶಿವಾ..
ಬಾಗುವುದು ನನ್ನ ಕಾಯ..
ಬಾಗುವುದು ನನ್ನ ಕಾಯ..
ಬಾಗುವುದು ನನ್ನ ಕಾಯ..ಆ..