ಮುದ್ದದೆಂದಿದೆ ಮಲ್ಲಿಗೆ ಹೂ - The Indic Lyrics Database

ಮುದ್ದದೆಂದಿದೆ ಮಲ್ಲಿಗೆ ಹೂ

गीतकार - Hamsalekha | गायक - S. P. Balasubrahmanyam, K. S. Chithra | संगीत - Hamsalekha | फ़िल्म - Gadibidi Ganda | वर्ष - 1993

Song link

View in Roman

ಮುದ್ದದೆಂದಿದೆ ಮಲ್ಲಿಗೆ ಹೂ
ಮಾನಸಿ ಎಂದಿದೆ ಸಂಪಿಗೆ ಹೂ
ಮಲ್ಲಿಗೆಯಾ.. ಮೊದಲು ಸಂಪಿಗೆಯಾ..
ಸಂಪಿಗೆಯಾ.. ಮೊದಲು ಮಲ್ಲಿಗೆಯಾ..

ಮುದ್ದದೆಂದಿದೆ ಮಲ್ಲಿಗೆ ಹೂ
ಮಾನಸಿ ಎಂದಿದೆ ಸಂಪಿಗೆ ಹೂ
ಇಡಬೇಕೋ ಮನಸು ಕೊಡಬೇಕೋ
ಕೊಡಬೇಕೋ ಮನಸು ಇಡಬೇಕೋ

ಆ.. ಆಆ.. ಆಆ..

ಮುಡಿಯಲಿ ಮಲ್ಲಿಗೆಯ ಮುಡಿದವಳ
ಮೊದಲು ಮೂಡಬೇಕು..
ಮಡದಿಗೆ ಪ್ರತಿ ದಿನವೂ ಮೊದಲಿರುಳಿರಬೇಕು

ಮನಸಿನ ಮಧುವಿನ ಮಹಾಲೋಲಗೆ
ಮದನ ಮಣಿಯಬೇಕು
ಸುರತಿಯ ಪರಮಾನ್ನ
ಹಿತ ಮಿತವಿರಬೇಕು..

ವಿರಹ ಬಾಧೆ ದಹಿಸುವಾಗ
ಬಾಲ ಬೋಧೆ ಯೇಕೆ
ಪ್ರಣಯ ನದಿಯೇ ತುಳುಕುವಾಗ
ಮದನ ಮಲೆಯು ಬೇಕೆ
ಹಿಡಿದುಕೋ ಮೆಲ್ಲಗೆ
ತಡೆದುಕೋ ಮಲ್ಲಿಗೆ
ಹರೆಯ ನೆರೆಯ ತಡೆಯೋ ಇನಿಯ

ಮುದ್ದದೆಂದಿದೆ ಮಲ್ಲಿಗೆ ಹೂ
ಮಾನಸಿ ಎಂದಿದೆ ಸಂಪಿಗೆ ಹೂ
ಮಲ್ಲಿಗೆಯಾ.. ಮೊದಲು ಸಂಪಿಗೆಯಾ..
ಸಂಪಿಗೆಯಾ.. ಮೊದಲು ಮಲ್ಲಿಗೆಯಾ..

ಮುದ್ದದೆಂದಿದೆ ಮಲ್ಲಿಗೆ ಹೂ
ಮಾನಸಿ ಎಂದಿದೆ ಸಂಪಿಗೆ ಹೂ
ಇಡಬೇಕೋ.. ಮನಸು ಕೊಡಬೇಕೋ..
ಕೊಡಬೇಕೋ.. ಮನಸು ಇಡಬೇಕೋ..

ಆಆ.. ಅ.. ಅ..

ಘಮ ಘಮ ಸಂಪಿಗೆಯ ಸುಮತಿಯನು
ಕೆಣಕಿ ಕಾಯಿಸದಿರು..
ಕುಸುಮದ ಎದೆಯೊಳಗೆ
ಪ್ರಳಯವ ತಾರದಿರು..

ಹಿಡಿಯಲಿ ಹಿಡಿಯುವ ನಡುವಿನಲಿ
ಬಳುಕಿ ಬೆಯಿಸದಿರು..
ತುಂಬಿದ ನಿಶೆ ಒಳಗೆ
ಚಂದ್ರನ ಕೂಗದಿರು

ಎದೆಯಾ ಸೇರಾಗ ಮೋಡದಲ್ಲಿ ನೀನೆ ಚಂದ್ರನೀಗ
ಹೃದಯ ಮೇರು ಗಿರಿಗಳಲ್ಲಿ ಕರಗಬೇಕು ಈಗ
ಬಾಲಸಿಕೊ ಕಂಪಿಗೆ
ಸಾಹಿಸಿಕೋ ಸಂಪಿಗೆ
ಹರೆಯ ಹೊರೆಯಾ ಇಳಿಸೋ ಇನಿಯ

ಮುದ್ದದೆಂದಿದೆ ಮಲ್ಲಿಗೆ ಹೂ
ಮಾನಸಿ ಎಂದಿದೆ ಸಂಪಿಗೆ ಹೂ
ಮಲ್ಲಿಗೆಯ ಮೊದಲು ಸಂಪಿಗೆಯ..
ಸಂಪಿಗೆಯ ಮೊದಲು ಮಲ್ಲಿಗೆಯ..

ಮುದ್ದದೆಂದಿದೆ ಮಲ್ಲಿಗೆ ಹೂ
ಮಾನಸಿ ಎಂದಿದೆ ಸಂಪಿಗೆ ಹೂ
ಇಡಬೇಕೋ ಮನಸು ಕೊಡಬೇಕೋ
ಕೊಡಬೇಕೋ ಮನಸು ಇಡಬೇಕೋ