ರಮಣ ಅವತಾರ ರಘುಕುಲ - The Indic Lyrics Database

ರಮಣ ಅವತಾರ ರಘುಕುಲ

गीतकार - K. R. Seetharama Sastry | गायक - S. Govindarajan | संगीत - R Sudarsanam, R Govardhanam | फ़िल्म - Bhookailasa | वर्ष - 1958

Song link

View in Roman

ದ್ವಾರಪಾಲರ ಮರಳಿ ಬಲಿಗೊಯ್ವ ಕೃಪೆಯೋ ।।
ಜಾರಥನ ಸಾಡೆ ಬಡಿವ ಸಂಭ್ರಮದ ನೆಪವೋ..ಊ..
ರಮಣ ಅವತಾರ..
ರಘುಕುಲ ಸೋಮನ ಅವತಾರ..

ರಮಣ ಅವತಾರ ರಘುಕುಲ ಸೋಮನ ಅವತಾರ
ರಮಣ ಅವತಾರ ರಘುಕುಲ ಸೋಮನ ಅವತಾರ
ನಿರುಪಮ ಸಂಯಮ ಜೀವನ ಸಾರ ಹರಿಯುವುದು ಭೂಮಿಯ ಭಾರ..
ರಮಣ ಅವತಾರ..

ದಾಶರತಿಯ ದಿವ್ಯಾತ್ಮವ ತಲೆವ
ಕೌಸಲ್ಯೆಯಾ ಬಸಿರೆನಿತು ಪುನೀತ
ಲೇಸಿಗರೈ ಸಹಜಾತರು ಮೂವರು
ಲೇಸಿಗರೈ ಸಹಜಾತರು ಮೂವರು
ಲಕ್ಷ್ಮಣ ಶತ್ರುಘ್ನ ಭರತ..

ರಮಣ ಅವತಾರ
ರಘುಕುಲ ಸೋಮನ ಅವತಾರ

ತ್ರಿಭುವನ ಪಾಳಗೆ ನೇಪ ಮಾತ್ರಾ
ವರಗುರು ವಿಶ್ವಾಮಿತ್ರ..

ತ್ರಿಭುವನ ಪಾಳಗೆ ನೇಪ ಮಾತ್ರಾ
ವರ ಗುರು ವಿಶ್ವಾಮಿತ್ರ..
ಅಭಯ ಅಹಲ್ಯೆಗೆ ನೀಡುವ ಪಾತ್ರ
ಅಭಯ ಅಹಲ್ಯೆಗೆ ನೀಡುವ ಪಾತ್ರ
ಧರಿಸುವ ಹರಿಸುವ ಗಾಯ..

ರಮಣ ಅವತಾರ.. ರಘುಕುಲ ಸೋಮನ ಅವತಾರ

ಧನುವೋ ಜನಕನ ಮಮತೆಯ ಕುಡಿಯೋ ।।
ಸೀತ್ಯ ಕನ್ಯಾ ಸಂಕಲೆಯೋ ।।
ಧನುಜರ ಕನಸಿನ ಸುಖ ಗೋಪುರವೋ
ಧನುಜರ ಕನಸಿನ ಸುಖ ಗೋಪುರವೋ
ಮುರಿವುದು ಮಿಥಿಲ ನಗರದಲ್ಲಿ

ರಮಣ ಅವತಾರ ರಘುಕುಲ ಸೋಮನ ಅವತಾರ

ಕಪಟ ನಾಟಕ ಪಟ್ಟಾಭಿಷೇಕ..
ಉಪತಲ ತಾತ್ಕಾಲಿಕ ಶೋಕ ।।
ಭೀಕರ ಕಾನನ ವಾಸದ ಕುಹಕ ।।
ಲೋಕೋಧರದ ಮೊದಲಲಂಕಾ

ಭರತಗೆ ಪಾದುಕೆ ನೀಡುವ ವೇಷ
ಭರತಗೆ ಪಾದುಕೆ ನೀಡುವ ವೇಷ
ಗುರುಜನ ಭಕ್ತಿಯ ಆದೇಶ
ನರಲೋಕಕೆ ನವನಿಧಿ ಸಂತೋಷ
ನರಲೋಕಕೆ ನವನಿಧಿ ಸಂತೋಷ
ಭಾರವಶೆ ನೀಡುವ ಸಂದೇಶ

ರಮಣ ಅವತಾರ
ರಘುಕುಲ ಸೋಮನ ಅವತಾರ

ಆಹಾ ನೋಡದೋ ಹೊನ್ನಿನ ಜಿಂಕೆ..

ಆಹಾ ನೋಡದೋ ಹೊನ್ನಿನ ಜಿಂಕೆ..
ಹಾಲಗುವುದಯ್ಯೋ ಲಂಕೆ..
ಹೆಣ್ಣಿದು ಶಿವನುರಿಗಣ್ಣೋ ಮಂಕೆ
ಮನ್ನಾಗುವೆ ನೀ ನಿಶ್ಯಂಕೆ..

ಶರಣು ಶರಣು ಭಗವತ್ತೋತ್ತಮ
ಕನ್ನಡದ ಕುಲಪುಂಗವ ಹನುಮ
ಶರಣು ಶರಣು ಭಗವತ್ತೋತ್ತಮ
ಕನ್ನಡದ ಕುಲಪುಂಗವ ಹನುಮ
ಮುದ್ರಿಕೆಯಲ್ಲಿದು ಸೋಹಂ ಬ್ರಹ್ಮ
ಮುದ್ರಿಕೆಯಲ್ಲಿದು ಸೋಹಂ ಬ್ರಹ್ಮ
ಎಂಬುವ ಸತ್ಯವ ತಿಳಿಸಮ್ಮ
ಎಂಬುವ ಸತ್ಯವ ತಿಳಿಸಮ್ಮ..

ರಾಮ ರಾಮ ಜಯ ರಾಮ ರಾಮ ಜಯ
ರಾಮ ರಾಮ ರಘು ಕುಲ ಸೋಮಾ ॥
ಸೀತೆಯ ಚಿಂತೆಗೆ ಪೂರ್ಣ ವೀರಮ
ಲಂಕೇಯ ವೈಭವ ನಿರ್ನಾಮ..

ಅಯ್ಯೋ ದಾನವ ಭಕ್ತಾಗ್ರೇಸರ
ಆಗಲಿ ನಿನ್ನಿ ಕಥೆ ಅಮರ
ಮೇರೆಯಲಿ ಈ ಶುಭ ತತ್ವಾ ವಿಚಾರ ॥
ಪರಸತಿ ಬಯಕೇಯ ಸಂಹಾರ

ರಮಣ ಅವತಾರ ರಘುಕುಲ ಸೋಮನ ಅವತಾರ.. |2|