ನಾಟ್ಯರಾಣಿ ಶಾಂತಲೆ - The Indic Lyrics Database

ನಾಟ್ಯರಾಣಿ ಶಾಂತಲೆ

गीतकार - V. Nagendra Prasad | गायक - Supriya Lohith | संगीत - Hemant Kumar | फ़िल्म - Aduva Gombe | वर्ष - 2018

Song link

View in Roman

ಧಿನಕ್ ಧಿನಕ್ ಥಾಕಾ ಧಿನಕ್ ಧಿನಕ್ ಥಾಕಾ ಥಾ ಧಿನ್ ಥಾ |2|

ನಾಟ್ಯರಾಣಿ ಶಾಂತಲೆ
ಭಾವ ಭಂಗಿ ತೋರಲೆ
ಕುಡಿ ನೋಟಡಿ ನುಡಿ ಆಡುವ
ಈ ನರ್ತನ ವೈಭವ
ಸರಗಡಿ ಸೆರೆ ಮಾಡುವ
ಈ ಹೆಜ್ಜೆಯ ಚಂದಮಾ

ವೈಯ್ಯಾರ ನೋಡೋ ಕಣ್ಣು
ಅಪಚಾರ ಮಾಡೋ ಕಣ್ಣು
ಕಳೆಯನ್ನು ನೋಡೋದೇ ಇಲ್ಲಾ
ವರದನ ಕೇಳೋದಿಲ್ಲ
ಅವಮಾನ ಸಹಿಸೋದಿಲ್ಲ
ನಾಟ್ಯಕ್ಕೆ ಧರ್ಮ ಯೇನಿಲ್ಲ
ಮಾನಸ ನಗಿಸೋ ಕುಣಿಸೋ
ಕಲೆಯ ಸೊಗಸ ನಲಿಸೊ

ನಾಟ್ಯರಾಣಿ ಶಾಂತಲೆ
ಭಾವ ಭಂಗಿ ತೋರಲೆ

ಈ ಪಾದ ತಾನಾಗಿ
ಧೀಮಿತ ತಾಳ ಹಾಕಿದೆ
ಈ ಭಾವ ಆವರಿಸಿ
ಮಧುರ ನಾ ಮಡಿದೆ
ಕಲಾವತಿ ಕಲಾವಿಧೆ
ಕಾವೇರಿ ದೇವಾಲಯವು
ಸುನಾದದ ವಿಚಾರದಿ
ಆ ಶಾರದೆ ರೂಪವು
ವಿಲಾಸವ ವಿನೋದದಿ
ಕಳೆಯೊಂದು ದೈವತ್ವ ದೈವತ್ವ

ನಾಟ್ಯರಾಣಿ ಶಾಂತಲೆ
ಕುಡಿ ನೋಟಡಿ ನುಡಿ ಆಡುವ
ಈ ನರ್ತನ ವೈಭವ
ಈ ಹೆಜ್ಜೆಯ ಚಂದಮಾ