ದುಡ್ಡು ಕೊಟ್ಟರೆ ಬೇಕಾದ್ದು ಸಿಗುತೈತೆ - The Indic Lyrics Database

ದುಡ್ಡು ಕೊಟ್ಟರೆ ಬೇಕಾದ್ದು ಸಿಗುತೈತೆ

गीतकार - Janapada | गायक - Various | संगीत - Janapada | फ़िल्म - Folk / Janapada | वर्ष - 2000

Song link

View in Roman

ದುಡ್ಡು ಕೊಟ್ಟರೆ ಬೇಕಾದ್ದು ಸಿಗುತೈತೆ ಈ ಜಗದಲಿ ಕಣೋ..
ಹಡೆದ ತಾಯಿಯನು ಕಳಕೊಂಡ ಮ್ಯಾಲ ಮತ್ತೆ ಸಿಗುವಳೆನೋ..
ತಮ್ಮ ಮಾರಲಿ ಬರುವಲೇನೋ
ತಮ್ಮ ಮಾರಲಿ ಬರುವಲೇನೋ

ದುಡ್ಡು ಕೊಟ್ಟರೆ ಬೇಕಾದ್ದು ಶಿಗುತೈತೀಂತಿ
ಈ ಜಗದಲಿ ಕಣೋ..
ಹಡೆದ ತಾಯಿಯನು ಕಳಕೊಂಡ ಮ್ಯಾಲ
ಮತ್ತೆ ಶಿಗುವಲೇನೋ..
ತಮ್ಮ ಮಾರಲಿ ಬರುವಲೇನೋ
ತಮ್ಮ ಮಾರಲಿ ಬರುವಲೇನೋ

ಒಂಬತ್ತು ತಿಂಗಳೂ ಸಂಕಟ ನೀಡಿ ಹೊಟ್ಯಾಗ ಬೆಳೆದಲ್ಲೋ
ಹುಟ್ಟಿ ಬರುವ ಮುನ್ನ ಜೀವಕ್ಕೆ ಎಷ್ಟೋ ಕಷ್ಟ ಕೊಟ್ಟಿಯಲ್ಲೋ
ಒಂಬತ್ತು ತಿಂಗಳೂ ಸಂಕಟ ನೀಡಿ ಹೊಟ್ಯಾಗ ಬೆಳೆದಲ್ಲೋ
ಹುಟ್ಟಿ ಬರುವ ಮುನ್ನ ಜೀವಕ್ಕ ಎಷ್ಟೋ ಕಷ್ಟ ಕೊಟ್ಟಿಯಲ್ಲೋ
ಬರುವ ಕಷ್ಟಗಳ ಸಹಿಸಿದ ತಾಯಿ ನಿನ್ನ ನಂಬಿತಲ್ಲೋ
ಬರುವ ಕಷ್ಟಗಳ ಸಹಿಸಿದ ತಾಯಿ ನಿನ್ನ ನಂಬಿತಲ್ಲೋ
ತಾನು ಕೊರಗಿ ನಿನ್ನ ಕೋಣ ಬೆಳಸಿದಂಗ ಬೆಳಸಿ ಬಿಟ್ಟಳಲ್ಲೋ..
ಒಬ್ಬ ಮಗ ನೀ ಆಸಾರದಿ ಅಂಥ ತಾಯಿ ತಿಳಿದಾಳಲ್ಲೋ
ಜೀವ ಇಟ್ಟಿತು ನೀನ ಮ್ಯಾಲೋ

ದುಡ್ಡು ಕೊಟ್ಟರೆ ಬೇಕಾದ್ದು ಸಿಗುತೈತಿ ಈ ಜಗದಲಿ ಕಾಣೋ..
ಹಡೆದ ತಾಯಿಯನು ಕಳಕೊಂಡ ಮ್ಯಾಲ ಮತ್ತೆ ಸಿಗುವಳೆನೋ..
ತಮ್ಮ ಮಾರಲಿ ಬರುವಲೇನೋ
ತಮ್ಮ ಮಾರಲಿ ಬರುವಲೇನೋ

ಕೂಲಿ ನಲಿ ಮಾಡಿ ಶಾಲೆ ಕಲಿಸಿದಳು ಜಾಣನಾಗಲೆಂತ
ಚಿನ್ನದಂಥಾ ಒಂದೂ ಹೆಣ್ಣು ನೋಡ್ಯಾಳು  ನಿನ್ನಾ ಮಧುವಿಗಂತ 
ಕೂಲಿ ನಲಿ ಮಾಡಿ ಶಾಲೆ ಕಲಿಸಿದಳು ಜಾಣನಾಗಲೆಂತ
ಚಿನ್ನದಂಥಾ ಒಂದೂ ಹೆಣ್ಣು ನೋಡ್ಯಾಳು  ನಿನ್ನಾ ಮಧುವಿಗಂತ 
ಸಾಲ ಶೂಲ ಮಾಡಿ ಮಧುವಿ ಮಾಡಿದಳು ಬಲ್ಲಿ ಹಬ್ಬಲೆಂತ
ಸಾಲ ಶೂಲ ಮಾಡಿ ಮಧುವಿ ಮಾಡಿದಳು ಬಲ್ಲಿ ಹಬ್ಬಲೆಂತ
ಮೊಮ್ಮಕ್ಕಳನ್ನು ಎತ್ತಿ ಆಡಿಸುವ ಚಿಂತನೆಯೊಳಗೆ ಇತ್ತ
ಮುಪ್ಪಿನ ತಾಯಿ ಏನೆನೋ ಕನಸ ಕಟಕೊಂಡು ಕುಂತಿತ್ತಾ
ಕನಸೌ ಕನಸಾಗಿ ಉಳಿತಾ

ದುಡ್ಡು ಕೊಟ್ಟರೆ ಬೇಕಾದ್ದು ಶಿಗುತೈತೆ
ಈ ಜಗದಲಿ ಕಣೋ..
ಹಡೆದ ತಾಯಿಯನು ಕಳಕೊಂಡ ಮ್ಯಾಲ
ಮತ್ತೆ ಸಿಗುವಳೆನೋ..
ತಮ್ಮ ಮಾರಲಿ ಬರುವಲೇನೋ
ತಮ್ಮ ಮಾರಲಿ ಬರುವಲೇನೋ

ಮಗಳಿಂಗಿಂತ ಹೆಚ್ಚಿನ ಪ್ರೀತಿಲಿ ಸೊಸೆನ ಕಂಡಲ್ಲ
ಸೊಕ್ಕಿನ ಸೊಸೆಯು ತಾಯಿಯ ಹಾಂಗ ನೋಡಿ ಕೊಲ್ಲಲಿಲ್ಲ
ಮಗಳಿಂಗಿಂತ ಹೆಚ್ಚಿನ ಪ್ರೀತಿಲಿ ಸೋಸಿನ ಕಂಡಲ್ಲ
ಸೊಕ್ಕಿನ ಸೊಸೆಯು ತಾಯಿಯ ಹಾಂಗ ನೋಡಿ ಕೊಲ್ಲಲಿಲ್ಲ
ಸೋತ ಶರೀರಕ ಸುಖವೆಂಬುದು ಈ ಸೋಸಿಯು ನೀಡಲಿಲ್ಲ
ಸೋತ ಶರೀರಕ ಸುಖವೆಂಬುದು ಈ ಸೊಸೆಯು ನೀಡಲಿಲ್ಲ
ಉಂದು ಬಿಟ್ಟಿರುವ ಎಂಜಲ ಕೂಲ ತಾಯಿಗಾಕ್ಯಲಲ್ಲ..
ಮಗನ ಮೋಹಕ ಹಲಸಿದ ಕೂಲ ತಾಯಿ ತಿಂದಲ್ಲ
ಅದನು ಯಾರಿಗೆಲ್ಲ

ದುಡ್ಡು ಕೊಟ್ಟರೆ ಬೇಕಾದ್ದು ಸಿಗುತೈತೆ
ಈ ಜಗದಲಿ ಕಣೋ..
ಹಡೆದ ತಾಯಿಯನು ಕಳಕೊಂಡ ಮ್ಯಾಲ
ಮತ್ತೆ ಸಿಗುವಳೆನೋ..
ತಮ್ಮ ಮಾರಲಿ ಬರುವಲೇನೋ
ತಮ್ಮ ಮಾರಲಿ ಬರುವಲೇನೋ

ಉಪವಾಸ ವನವಾಸ ಹನ್ನದ ಮುದುಕಿ ಎಷ್ಟಂತ ಇರತಾಳೋ
ಹಸಿವು ತಾಳದೆ ಮತ್ತೊಬ್ಬರಲ್ಲಿ ಬೇಡಿ ತಿನ್ನುತಾಳೋ
ಉಪವಾಸ ವನವಾಸ ಹನ್ನದ ಮುದುಕಿ ಎಷ್ಟಂತ ಇರುತಾಳೋ
ಹಸಿವು ತಾಳದೆ ಮತ್ತೊಬ್ಬರಲ್ಲಿ ಬೇಡಿ ತಿನ್ನುತಾಳೋ
ಇಷ್ಟೇ ಇದ್ದದ್ದು ಸೊಕ್ಕಿನ ಸೊಸೆಯು ದೊಡ್ಡದು ಮಾಡ್ಯಾಳೋ
ಇಷ್ಟೇ ಇದ್ದದ್ದು ಸೊಕ್ಕಿನ ಸೊಸೆಯು ದೊಡ್ಡದು ಮಾಡ್ಯಾಳೋ
ಅವಮಾನ ನಮಗಂತ ತನ್ನ ಮನೆಯಿಂದ ಹೊರಗೆ ಹಾಕ್ಯಾಳು..
ಮಗನಿಗೆಳೆದರೆ ನೋವು ಆ ಜೀವಕ ಎಂದು ತಿಳಿದಾಳು
ತಾಯಿ ನಿನ್ನಿಂದ ದೂರಾಳು

ದುಡ್ಡು ಕೊಟ್ಟರೆ ಬೇಕಾದ್ದು ಸಿಗುತೈತೆ ಈ ಜಗದಲಿ ಕಣೋ..
ಹಡೆದ ತಾಯಿಯನು ಕಳಕೊಂಡ ಮ್ಯಾಲ ಮತ್ತೆ ಸಿಗುವಳೆನೋ..
ತಮ್ಮ ಮಾರಲಿ ಬರುವಲೇನೋ
ತಮ್ಮ ಮಾರಲಿ ಬರುವಲೇನೋ

ಮಗಾ ಇದ್ದರು ಹಡೆದ ತಾಯಿ ಪರದೇಶಿ ಆಗಿಹಳು
ಅಲ್ಲಿ ಇಲ್ಲಿ ತಾ ಬಿಕ್ಷೆಯ ಬೇಡಿ ದಿನಗಲ ಕಲಿತಳು
ಮಗಾ ಇದ್ದಾರು ಹಡೆದ ತಾಯಿ ಪರದೇಶಿ ಆಗಿಹಳು
ಅಲ್ಲಿ ಇಲ್ಲಿ ತಾ ಬಿಕ್ಷೆಯ ಬೇಡಿ ದಿನಗಲ ಕಲಿತಳು
ಬಂದ ನೋವುಗಳ ಸಹಿಸುತ ಮಗನ ಚಿಂತನೆ ಮಾಡುತಾಳು
ಬಂದ ನೋವುಗಳ ಸಹಿಸುತ ಮಗನ ಚಿಂತನೆ ಮಾಡುತಾಳು
ಕಣ್ಣು ಕಾಣಲಿಲ್ಲ ಕಿವಿಯು ಕೇಳಲಿಲ್ಲ ಎಷ್ಟು ದಿನ ಇರುತಾಳು
ನನ್ನ ಮಗನಿಗೆ ಚೆನ್ನಾಗಿ ಇದು ಅಂತ ಮಹಾಂತನ ಬೇಡ್ಯಾಳು
ತಾಯಿ ಬೀಡ್ಯಾಗ ಸತ್ತಳು

ದುಡ್ಡು ಕೊಟ್ಟರೆ ಬೇಕಾದ್ದು ಸಿಗುತೈತಿ ಈ ಜಗದಲಿ ಕಾಣೋ..
ಹಡೆದ ತಾಯಿಯನು ಕಳಕೊಂಡ ಮ್ಯಾಲ ಮತ್ತೆ ಸಿಗುವಳೆನೋ..
ತಮ್ಮ ಮರಳಿ ಬರುವಲೆನೊ |೬|