ನಂಗನ್ಸಿದ್ದು - The Indic Lyrics Database

ನಂಗನ್ಸಿದ್ದು

गीतकार - Rahul Dit-O and DJ Lethal A. | गायक - Rahul Dit-O | संगीत - Rahul Dit-O | फ़िल्म - Album | वर्ष - 2020

Song link

View in Roman

ಓ..ಓಹ್..ಓಹ್…
ಸೈಕ್ ಬೀಟ್ ಮಗಾ…
ಆ.
ಇದೇ ಖುಷೀಲಿ ಎರಡು ಲೈನ್ ಹೇಳ್ತೀನಿ, ದುಡ್ ಬೇಡ ಫ್ರೀ ಆಗಿ ತಗಾ.
ಸಾಕ್ ಹೇಳ್ ಮಗಾ…
ಕುರಿಗಳ ಸಂತೇಲಿ ಕಣ್ ಬಿಡ್ಕೊಂಡ್ ಮಾಡಿದ್ ನಿದ್ದೆ…
ದಿನವಿಡಿ ಒಬ್ಬೊಬ್ಬರಿಗೆ ಒಂದ್ ಒಂದ್ ತರಹ ತಲೆ ನೋವು ಇದ್ದಿದ್ದಿದ್ದೇ…

ಕೆಲವರಿಗೆ ತಿಳುವಳಿಕೆ ಇಲ್ಲ ಯಾವ್ ಯಾವ್ದೋ ಪದಬಳಕೆ
ಸದೆಗಳಿಗೆ ಚೆನ್ನಾಗ್ ಗೊತ್ತು ಕಿವಿ ಮೇಲೆ ಕಲರ್ ಕಲರ್ ದಾಸವಾಳ ಮಡಗದಕ್ಕೆ…

ನಮಗೇನುಕ್ಕೆ, ಹಂಗಂತ ಸುಮ್ನಿದ್ರೆ ಬದಲಾವಣೆ ನೀವ್ ತರೋದ್ ಇನ್ ಎಂಗೆ.?
ಸರಿ ಮಾಡೋಕೆ… ಕರಿ ನೋಡಕ್ಕೆ… ಹೇಳ್ಕೊಡ್ತೀವಿ Rap ಮಾಡೋದೇ ಹಿಂಗೆ…

ತಲೆ ಬುಡ ಗೊತ್ತಿಲ್ಲ ಅಂದರೂ… ಬಾಯಿಗ್ ಬಂದಿದ್ ಏನೋ ಒಂದು ಬರದ್ ಹೇಳೋದಲ್ಲ ಮಗಾ rap
ಚೆಲ್ಲೋದಕ್ಕೆ ಹಣ ಇದ್ದರೂ… ಕೊಂಡುಕೊಳ್ಳೋಕೆ ಆಗೋದಿಲ್ಲ ಬ್ಲಡ್ ಅಲ್ಲೇ ಬರಬೇಕು ಸ್ವಾಗ್

ಸಿಗುತಾರೆ ಶೋಕಿ ಮಾಡೋರು..
ಬರಿ ನೇಮ್ ಫೇಮ್ ಸ್ಟಾರ್ ಗೋಸ್ಕರ ಮಾಡಿಕೊಂಡು ಕ್ರ್ಯಾಪ್…
ತಲೆ ಮೇಲೆ ತಲೆ ಬಿದ್ದರೂ ಕಾಪಿ ಮಾಡಬೇಡ ನನ್ ಸ್ಟೈಲ್ ಸೂಟ್ ಆಗೋದಿಲ್ಲ…
ಮಗಾ ಸಾಂಗ್…

ಊರ್ ತುಂಬಾ rappers ಇದ್ರೇನಂತೆ ಮಗಾ.. ನೀನ್ ಕಲಿಬೇಕು ಫರ್ಸ್ಟು ಬೇಸಿಕ್ಸ್…
ಈಗ್ ತಾನೆ ಬ್ಯಾಟ್ ಹಿಡಿದಿದ್ದೀಯಾ ಮಗಾ.. ಬಾಲ್ ಬಂದ್ಮೇಲೆ ನೀ ಹೊಡಿಬೇಕ್ ಸಿಕ್ಸ್…
ಇಲ್ಲಿ ಟ್ಯಾಲೆಂಟ್ ಇರೋರೇ ಲಾಟರಿ ಹೊಡಿತಾವ್ರೆ ಮಾಡಕ್ಗೊತ್ತಿಲ್ಲದೇ ಗಿಮಿಕ್ಸ್..
ಇಲ್ದೇ ಇರೋ ಅವ್ರು ಎಲ್ಲಾ ಕಡೆ ಮೇರಿತಾವ್ರೆ ಮಾಡಿಕೊಂಡು ಬರಿ ಚೀಪ್ ಟ್ರಿಕ್ಸ್…

ಇಲ್ಲಿ Rap ಅಂದ್ರೆ ಬರಿ ರೈಮಿಂಗ್ ಅಲ್ಲ ಮಗಾ..
ಕ್ಯಾಪ್ಷನ್ ಆಗ್ಬಿಟ್ರೆ ನೀನ್ ಕಿಂಗ್ ಅಲ್ಲ ಮಗಾ..
ಹೇಳೋದ್ ಇದ್ದಿದ್ದಿಂಗ್ ಮಗಾ..
ಎದ್ದು ಬಂದು ಎದೆಗೆ ಒದ್ದಂಗೆ ಮಗಾ.. ಮಿಲಿಯನ್ ಫೇಕ್ ವ್ಯೂಸ್ ತಿಂಗಳೇ… ಕಾಪಿ ಕಟ್ ಪೇಸ್ಟ್ ಎಲ್ಲಿ ನಂಗೆ ಗೊತ್ತಲೇ…
ಮಾಡೋದು ಫಿಲ್ಮ್ ಬರೀ ಶಿಟ್ ಪಾಪ್ ಅಲ್ಲೇ…
ಹೇಳ್ಕೋ Rapper ಅಂತ ಸೈಕಲ್ ಗ್ಯಾಪ್ ಅಲ್ಲೇ…

ನಂಗನ್ಸಿದ್ದು
ಹೇಳ್ತೀನಿ ಯಾರ ಮುಖ ಮೂತಿ ನೋಡದೆ…
ನಂಗನ್ಸಿದ್ದು
ಹಾಡುತ್ತೀನಿ ಒಂದು ಚೂರು ಫಿಲ್ಟರ್ ಇಲ್ಲದೇ…
ನಂಗನ್ಸಿದ್ದು
ಕೇಳುತ್ತೀನಿ ಯಾವ ಸೈಡಿಗ್ ಕಿವಿ ಕೊಡದೇ…
ನಂಗನ್ಸಿದ್ದು
ಮಾಡುತ್ತೀನಿ ಯಾರ ಹತ್ರ ಕಣಿ ಕೇಳದೇ…
ನಂಗನ್ಸಿದ್ದು
ಇದೇ ಇದೇ ಇದೇ ಇದೇ ತಗೋ…
ನಂಗನ್ಸಿದ್ದು
ಇದೇ ಇದೇ ಇದೇ ಇದೇ ತಗೋ…
ನಂಗನ್ಸಿದ್ದು
ಇದೇ ಇದೇ ಇದೇ ಇದೇ ತಗೋ…
ನಂಗನ್ಸಿದ್ದು
ಇದೇ ಇದೇ ಇದೇ ಇದೇ

 

ಲೋ ತಿಳ್ಕೊಳೋ…
Rapper ಅಂತ ಹೇಳ್ಕೊಳ್ಳೋರೆಲ್ಲ Rapper ಆಗೋದಿಲ್ಲ ಲೋ… ಕೇಳಿಸ್ಕೊಳ್ಳೋ… ನಿನ್ ಹತ್ತಿರ ಟ್ಯಾಲೆಂಟ್ ಇದ್ದರೂ ಕಲ್ಚರ್ ಅಂತೂ ಕೆಡಿಸ್ಕೋಬೇಡ ಥೂ… ಹೇಳ್ಕೊಡ್ತಿನೋ.. Rap ಅಲ್ಲಿ ನಾನೇ ಡೋಪು… ಬೇರೆಯವ್ರು ತೋಪು ಅಂತಾನೋ..
ವೇಯ್ಟ್ ಮಾಡೋಲೋ… ಕನ್ನಡ ಹಿಪ್ ಹಾಪ್ ಇನ್ನೂ ಮೇನ್ ಸ್ಟ್ರೀಮ್ ಗೆ ಕಾಲಿಟ್ಟಿಲ್ಲ…

ಸಾಹಿತ್ಯ ಸಂಹಾರ ಮಾಡಂಗಿದ್ರೂ, ಮಗಾ ನಾನ್ ಅಲ್ಲ ಕನ್ನಡ ಪಂಡಿತ… ಅಂತ ಸಿಂಪಲ್ ಆಗಿ ಹಾಡಿದ್ರೂ ಕಂಗಾಲ್ ಆಗ್ಹೋಗ್ತಾರೆ ನನ್ ನೋಡಿ ಉರ್ಕೊಳ್ಳೋದ್ ಖಂಡಿತ…

ನೋಡು ಖಂಡಿಸ್ತ್ಯಾ…
ಇಲ್ಲ ದಂಡುಸ್ತ್ಯಾ…
ನಿನ್ನ ಕಿತ್ತೋದ್ ವಾದನ ಮಂಡುಸ್ತ್ಯಾ…

ಹಿಂದೆ ಹಂಗ್ ಇರ್ತೀಯಾ..
ಮುಂದೆ ಹಿಂಗ್ ಇರ್ತೀಯಾ…
ಚೆನ್ನಾಗಿ ಇರೋ ಇಬ್ರು ಮಧ್ಯೆ ತಂದ್ ಇಡ್ತೀಯಾ…

ನಿಯತ್ತಿಗೆ ಇಲ್ಲಿ ಇಲ್ಲ ಕಾಲ ಅನ್ನೋವ್ರೇ ಯಾವತ್ತೂ ನಿಯತ್ತಾಗಿ ಇರೋದಿಲ್ಲ… ಸರಿ ಇವತ್ತಿಗೆ ಇಷ್ಟೇನೇ ಸಾಕು ಅನ್ನೋವ್ರು ನಾಳೆ, ನಾಡಿದ್ ಸಿಕ್ಕಿದ್ರೆ ಬಿಡೋದಿಲ್ಲ…
ಇಲ್ಲಿ ಮೂರ್ ಹೊತ್ತಿನ್ ತುತ್ತಿಗೆ ಕಲೇನೇ ನಂಬಿರೋ ಕುತ್ತಿಗೆ ಕುಯ್ಯೋದೇನು ಹೊಸದಲ್ಲ…
ನರಿ ಬುದ್ಧಿ ಇರೋರ್ ಬೇಳೆ ಕಾಳು ಬೇಯೋದಿಲ್ಲಿ…
ಯಾವ ನನ್ ಮಗಾ ಸಾಚಾ ಅಲ್ಲ…

ಇಲ್ಲಿ ಪರಿಶ್ರಮ ಯಾರು ಪಡದೆನೇ ದಡ ಸೇರಬೇಕ್ ಅಂತಾರೆ ಈಜದೇನೇ… ಆಳ ಅಂತರಾಳ ಚೂರು ಗೊತ್ತಿಲ್ಲದೇನೇ…
ಅನ್ಕೋಬೇಡ ಧುಮುಕುದ್ರೆ ತೇಲುತ್ತೇನೆ ಕಷ್ಟ ಪಡೋವ್ನು ಯಾವನ್ ಎಲ್ಲೋ ಇರುತ್ತಾರೆ…
ಓಸಿ ಕ್ರೆಡಿಟ್ ತಗೋಲೋನೇ ಟ್ರೆಂಡ್ ತಾನೆ…
ಬಡ್ಡಿ ಮಗಾ ಶೋಕಿ ಮಾಡು ಅಂತಾನೆ.. ಬಿಟ್ಟಿ ಪಬ್ಲಿಸಿಟಿ ಗಳಿಗಂತಾನೆ…

ಬೆಳೆಯೋವಾಗ ಎಲ್ಲ ಆರ್ಟಿಸ್ಟ್ ಗಳದ್ದುನೂ ಒಂದೇ ಇಲ್ಲಿ ನಾಯಿ ಪಾಡುಗಳು…
ತೆವಳೋ ದಾರಿಯಲ್ಲಿ ಇರ್ತಾವೆ ನಮ್ಮನ್ನ ತುಳಿಯೋಕೆ ಸಾವಿರ ಕಾಲ್ಗಳು…
ನಾನ್ ಹೇಳೋದ್ ಏನ್ ಅಂದ್ರೆ ತಪ್ಪಿಲ್ಲ ನಿಯತ್ತಾಗಿ ಮಾಡೋದ್ ಯಾವ್ದೇ ಪ್ರಯತ್ನ…
ಗೊತ್ತಿಲ್ಲ ಅಂದ್ರೂನೂ ಗೊತ್ತಿದೆ ಅಂತ ಬಿಲ್ಡಪ್ ಏನ್ ಇದೆ ಪ್ರಯೋಜನ

ನಂಗನ್ಸಿದ್ದು
ಹೇಳ್ತೀನಿ ಯಾರ ಮುಖ ಮೂತಿ ನೋಡದೆ…
ನಂಗನ್ಸಿದ್ದು
ಹಾಡುತ್ತೀನಿ ಒಂದು ಚೂರು ಫಿಲ್ಟರ್ ಇಲ್ಲದೇ…
ನಂಗನ್ಸಿದ್ದು
ಕೇಳುತ್ತೀನಿ ಯಾವ ಸೈಡಿಗ್ ಕಿವಿ ಕೊಡದೇ…
ನಂಗನ್ಸಿದ್ದು
ಮಾಡುತ್ತೀನಿ ಯಾರ ಹತ್ರ ಕಣಿ ಕೇಳದೇ…
ನಂಗನ್ಸಿದ್ದು
ಇದೇ ಇದೇ ಇದೇ ಇದೇ ತಗೋ…
ನಂಗನ್ಸಿದ್ದು
ಇದೇ ಇದೇ ಇದೇ ಇದೇ ತಗೋ…
ನಂಗನ್ಸಿದ್ದು
ಇದೇ ಇದೇ ಇದೇ ಇದೇ ತಗೋ…
ನಂಗನ್ಸಿದ್ದು
ಇದೇ ಇದೇ ಇದೇ ಇದೇ ತಗೋ…