ನೀ ಬಂದು ನಿಂತಾಗ - The Indic Lyrics Database

ನೀ ಬಂದು ನಿಂತಾಗ

गीतकार - R. N. Jayagopal | गायक - P. Susheela, P. B. Sreenivas | संगीत - G. K. Venkatesh | फ़िल्म - Kasturi Nivasa | वर्ष - 1971

Song link

View in Roman

ನೀ ಬಂದು ನಿಂತಾಗ
ನಿಂತು ನೀ ನಕ್ಕಾಗ
ನಕ್ಕು ನೀ ಸೆಳೆದಾಗ
ಸೋತೆ ನನಗಾ

ನೀ ಬಂದು ನಿಂತಾಗ ಆಹಾ
ನಿಂತು ನೀ ನಕ್ಕಾಗ ಆಹಾ
ನಕ್ಕು ನೀ ಸೆಳೆದಾಗ ಆಹಾ
ಸೋತೇ ನನಗಾ ಆಹಾ..
ಅಹಹಾ ಹ್ಮ್ಮ್

ವಾಸಂತಿ ನಲಿದಾಗ..ಆ..
ವಸಂತಿ ನಲಿದಾಗ ಹಸಿರುಟ್ಟು ನಗುವಾಗ
ವನದೇವಿ ಅಡಿಮೇಲೆ ಅಡಿಯಿಟ್ಟು ನಡೆದೆ
ಮುಗಿಲೊಂದು ಕರೆದಾಗ ನವಿಲೊಂದು ಮೆರೆದಾಗ
ಒಡಲಲ್ಲಿ ಹೊಸದೊಂದು ನವಜೀವ ಬಂದಾಗ
ಕೈ ಕೈ ಸೋಕಾಗ ಮನವೆರೆದು ಬೆರೆತಾಗ
ಮಿಡಿದಂತ ಹೊಸರಾಗ ಅದುವೇ ಅನುರಾಗ... ಬಾರಾ

ಜೆನಂತ ಮಾತಲ್ಲಿ..ಈ..
ಜೆನಂತ ಮಾತಳ್ಳಿ ಕುಡಿಗಣ್ಣ ಸಂಚಳ್ಳಿ
ನಗುವೆಂಬ ಹೂಚೆಲ್ಲಿ ನಿಂತೇ ನೀ ಮನದಲ್ಲಿ
ಎದುರಾದೆ ಹಾಗಲಲ್ಲಿ ಮರೆಯಾದೆ ಇರುಳಲ್ಲಿ
ನೀತಂದ ನೋವಿಗೆ ಕೊನೆಯಲ್ಲಿ ಮೊದಲೆಲ್ಲಿ
ಬಲುದೂರ ​​ನೀ ಹೊಗೇನಾ ತಾಳೆ ಈ ಬೇಗೆ
ಬಾ ಬಾರೆ ಸೆಲ್ಯುವೆ ಬಾರೆ ಒಲವೇ... ಬಾರಾ

ಬಾಳೆಂಬ ಪಥದಲ್ಲಿ..ಈ..

ಬಾಳೆಂಬ ಪಥದಲ್ಲಿ ಒಲವೆಂಬ ರಥದಲ್ಲಿ
ಕನಸೆಲ್ಲಾ ನನಸಾಗಿ ನನಸೆಲ್ಲಾ ಸೊಗಸಾಗಿ
ಯುಗವೂಂದು ದಿನವಾಗಿ ದಿನವೂ ಕ್ಷಣವಾಗಿ
ನಮ್ಮಾಸೆ ಹೂವಾಗಿ ಇಂಪಾದ ಹಾಡಾಗಿ
ಕಹಿಯಲ್ಲಿ ಸಿಹಿಯಲ್ಲಿ ಮಳೆಯಲ್ಲಿ ಬಿಸಿಲಲ್ಲಿ
ಎಂದೆಂದು ಜೊತೆಯಾಗಿ ನಡೆದೇವಾ ಒಂದಾಗಿ... ಬಾರಾ

ನೀ ಬಂದು ನಿಂತಾಗ
ನಿಂತು ನೀ ನಕ್ಕಾಗ
ನಕ್ಕು ನೀ ಸೆಳೆದಾಗ
ಸೋತೆ ನನಗಾ