ಧರಣಿ ಮಂಡಲ ಮಧ್ಯದೊಳಗೆ - The Indic Lyrics Database

ಧರಣಿ ಮಂಡಲ ಮಧ್ಯದೊಳಗೆ

गीतकार - Folk song | गायक - P. B. Sreenivas, B. K. Sumithra | संगीत - Bhaskar Chandavarkar | फ़िल्म - Tabbaliyu Neenade Magane | वर्ष - 1977

Song link

View in Roman

ಧರಣಿ ಮಂಡಲ ಮಧ್ಯದೊಳಗೆ
ಮೆರೆಯುತಿಹ ಕರ್ಣಾಟ ದೇಶದಿ ಇರುವ
ಕಾಳಿಂಗನೆಂಬ ಗೊಲ್ಲನ ಪರಿಯನೆಂತು ಪೇಳ್ವೆನು

ಉದಯ ಕಾಲದೊಳೆದ್ದು ಗೊಲ್ಲನು
ನದಿಯ ಸ್ನಾನವ ಮಾಡಿಕೊಂಡು
ಮುದದಿ ತಿಲಕವ ಹಣೆಯಲಿಟ್ಟು
ಚದುರ ಶಿಕೇಯನು ಹಾಕಿದ

ಎಲೆಯ ಮಾವಿನ ಮರದ ಕೆಲಗೆ
ಕೊಳಲನೊಡುತ ಗೊಲ್ಲ ಗೌಡನು
ಬಲಸಿ ನಿಂದಿಹ ತುರುಗಲನ್ನು
ಬಾಳಿಗೆ ಕರೆದನು ಹರುಷದಿ

ಗಂಗೆ ಬಾರೆ ಗೌರಿ ಬಾರೆ
ತುಂಗಭದ್ರೆ ತಾಯಿ ಬಾರೆ
ಪುಣ್ಯಕೋಟಿಯು ನೀನು ಬಾರೆ
ಎಂದು ಗೊಲ್ಲನು ಕರೆದನು

ಗೊಲ್ಲ ಕರೆದ ಧನಿಯ ಕೇಳಿ
ಎಲ್ಲಾ ಹಸುಗಳು ಬಂದು ನಿಂತೂ
ಚೆಲ್ಲಿ ಸೂಸಿ ಹಾಲು ಕರೆಯಾಲು
ಅಲ್ಲಿ ತುಂಬಿತು ಬಿಂದಿಗೆ

ಸತ್ಯವೇ ಭಗವಂತನೆಂದ ಪುಣ್ಯಕೋಟಿಯ ಕಥೆಯಿದು

ಹಬ್ಬಿದ ಮ್ಯಾಲೆ ಮಧ್ಯದೊಳಗೆ
ಅರ್ಭೂತನು ನೆಂಬ ವ್ಯಾಘ್ರನು
ಅಬ್ಬರಿಸಿ ಹಸಿಹಸಿದು ಬೆಟ್ಟದ
ಕಿಬ್ಬಿಯೊಳು ತಾನಿರ್ದನು

ಸಿಡಿದು ರೋಷದಿ ಮೊರೆಯುತ ಹುಲಿ
ಗುಡುಗುಡಿಸಿ ಭೋರಿದುತ ಛಂಗನೆ
ತುಡುಕಲೆರಗಿದ ರಭಸಕಂಜಿ
ಚೇದರಿ ಹೋದವು ಹಸುಗಳು