ನೀನಲ್ಲವೇ.. - The Indic Lyrics Database

ನೀನಲ್ಲವೇ..

गीतकार - Raghavendra Kamath | गायक - Nakul Abhyankar | संगीत - Darling Krishna | फ़िल्म - Love Mocktail | वर्ष - 2022

Song link

View in Roman

ಉಸಿರಲ್ಲಿರೋ ಜೀವಂತಿಕೆ ನೀನಲ್ಲವೇ
ಹೆಸರಲ್ಲಿರೋ ಶ್ರೀಮಂತಿಕೆ ನೀನಲ್ಲವೇ
ಎದೆ ಆಳುವ.. ಧೀಮಂತಿಕೆ ನೀನಲ್ಲವೇ
ನಿಜ ಪ್ರೇಮದ ಆ ನಂಬಿಕೆ ನೀನಲ್ಲವೇ
ಓ.. ದೇವತೆ.. ನೀನಲ್ಲವೇ..
ನೀನಲ್ಲವೇ..

 

ಏಕಾಂತದ ಸಾಂಗತ್ಯಕೆ ಸಂಗಾತಿಯು
ನೀನಲ್ಲವೇ..
ನನ್ನುಸಿರಲಿ ಹರಿದಾಡುವ ಸಂಪ್ರೀತಿಯು
ನೀನಲ್ಲವೇ..
ಸೌಂದರ್ಯದ ಗುಣಗಾನವು ನೀನಲ್ಲವೇ
ಆಂತರ್ಯದ ಅಭಿಮಾನವು ನೀನಲ್ಲವೇ
ಓ.. ದೇವತೆ.. ನೀನಲ್ಲವೇ
ನೀನಲ್ಲವೇ..