ಆಡಿಸಿ ನೋಡು ಬೀಳಿಸಿ ನೋಡು - The Indic Lyrics Database

ಆಡಿಸಿ ನೋಡು ಬೀಳಿಸಿ ನೋಡು

गीतकार - Chi. Udaya Shankar | गायक - P. B. Sreenivas | संगीत - G. K. Venkatesh | फ़िल्म - Kasturi Nivasa | वर्ष - 1971

Song link

View in Roman

ಆಡಿಸಿ ನೋಡು ಬೀಳಿಸಿ ನೋಡು
ಉರುಳಿ ಹೋಗದು
ಆಡಿಸಿ ನೋಡು ಬೀಳಿಸಿ ನೋಡು
ಉರುಳಿ ಹೋಗದು
ಎನೆ ಬರಲಿ ಯಾರಿಗು ಸೋತು
ತಲೆಯ ಬಾಗಡು
ಎಂಡಿಗೂ ನಾನು ಹೀಗೇ ಇರುವೆ
ಎಂದು ನಗುವುದು ಹೀಗೇ ನಗುತಲಿರುವುದು
ಆಡಿಸಿ ನೋಡು ಬೀಳಿಸಿ ನೋಡು
ಉರುಳಿ ಹೋಗದು

ಗುಡಿಸಾಲೆ ಆಗಲಿ ಅರಮನೆ ಆಗಲಿ
ಆಟ ನಿಲ್ಲದು
ಹಿರಿಯರೇ ಇರಲಿ ಕಿರಿಯರೇ ಬರಲಿ
ಬೇಡ ತೋರಡು
ಕಷ್ಟವೋ ಸುಖವೋ ಅಳುಕಡೆ ಆದಿ
ತೂಗುತಿರುವುದು ತೂಗುತಿರುವುದು
ಆಡಿಸಿ ನೋಡು ಬೀಳಿಸಿ ನೋಡು ಉರುಳಿ ಹೋಗದು

ಮೈಯನೆ ಹಿಂದಿ ನೊಂದರು ಕಬ್ಬು
ಸಿಹಿಯ ಕೊಡುವುದು
ತೇಗುತಲಿದ್ದರು ಗಂಧದ ಪರಿಮಳ
ತುಂಬಿ ಬರುವುದು
ತಾನೆ ಊರಿದರು ದೀಪವು ಮನೆಗೆ ಬೆಳಕ ತರುವುದು
ದೀಪ ಬೆಳಕ ತಾರುವುದು
ಆಡಿಸಿ ನೋಡು ಬೀಳಿಸಿ ನೋಡು ಉರುಳಿ ಹೋಗದು

ಆಡಿಸುವಾತನ ಕೈ ಚಳಕದಲಿ ಎಲ್ಲ ಅಡಗಿದೆ
ಆತನ ಕರುಣೆಯೆ ಜೀವವ ತುಂಬಿ ಕುಣಿಸಿ ನಲಿಸಿದೆ
ಆ ಕೈ ಸೊತ್ತರೆ ಬೊಂಬೆಯ ಕಥೆಯು ಕೊನೆಯಾಗುವುದು..
ಕೊನೆಯಾಗುವುದು

ಆಡಿಸಿ ನೋಡು ಬೀಳಿಸಿ ನೋಡು
ಉರುಳಿ ಹೋಗದು
ಎನೆ ಬರಲಿ ಯಾರಿಗು ಸೋತು
ತಲೆಯ ಬಗದು
ಎಂದಿಗು ನಾನು ಹೀಗೇ ಇರುವೆ
ಎಂದು ನಗುವುದು ಹೀಗೇ ನಗುತಲಿರುವುದು
ಆಡಿಸಿ ನೋಡು ಬೀಳಿಸಿ ನೋಡು
ಉರುಳಿ ಹೋಗದು