ಬರೀ ಮೂರೇ ದಿನದ - The Indic Lyrics Database

ಬರೀ ಮೂರೇ ದಿನದ

गीतकार - K. Naveen Kumar | गायक - Chethan Kumar | संगीत - Veer Samarth | फ़िल्म - Double Engine | वर्ष - 2018

Song link

View in Roman

ಊರು ಸಿಕ್ಕುವುದೆನು ದಾರಿ ತಪ್ಪಿರುವಾಗ
ಅಡ್ಡಾ ದಾರಿ ಹಿಡಿದಿರುವಾಗ
ಕಲ್ಲು ಮುಳ್ಳು ಸಿಗಬಾರದೆಂದರೇನು

ಬರೀ ಮೂರೇ ದಿನದ ಬಾಳು
ನಾನಾ ತರ ನಾಟಕವೇಕೋ
ಬರೀ ಮೂರೇ ಹೊತ್ತಿನ ಕೂಳು
ಮುನ್ನೂರು ವೇಷಗಳೇಕೋ

ಬಾಳು ಎತ್ತರ ಬೆಳೆಯಾಳು ಮರವು
ಕೆಳಗಿಳಿಯಲೇ ಬೇಕೋ ಬೇರು
ಬಾಳಲ್ಲಿ ಚಿಗುರಲು ಹಸಿರು
ನೀ ಸುರಿಸಲೇ ಬೇಕೋ ಬೇವರು
ಗೆದ್ದೋರ ಮಾತ್ರ ನೀನು ನೋಡುತಾ
ನಿಯತ್ತ ದಾರಿ ಸೇರ ಬೇಡವೋ
ಸೋಥೋರ ಮಾತು ಕೇಳೋ
ಸೋಥೋರ ಮಾತ ಕೇಳೋ ಸರಿ ದಾರಿಯಲ್ಲಿ ಹೋಗೋ
ಸೋಥೋರ ಮಾತ ಕೇಳೋ ಸರಿ ದಾರಿಯಲ್ಲಿ ಹೋಗೋ

ಬರೀ ಮೂರೇ ದಿನದ ಬಾಳು
ನಾನಾ ತರ ನಾಟಕವೇಕೋ
ಬರೀ ಮೂರೇ ಹೊತ್ತಿನ ಕೂಳು
ಮುನ್ನೂರು ವೇಷಗಳೇಕೋ

ಬೇಗ ಬೇಗ ಬೆಳೆಯೋ ಆಸೆಲಿ
ತೀರ ಆಲ ಸೇರುವ ಮಂದಿ ಇಲ್ಲಿ
ವರುಷದಲಿ ಎಲ್ಲ ಕಾಲ
ತಂಗಾಳಿಯೇ ಬೀಡು ಯೆಂದು

ಮುದಿಯಾಗಿ ಮಾಗಿದ ಹಣ್ಣು
ಮನ್ನನ್ನೆ ನೋಡುವುದೆಂದು
ಯೆಲ್ಲಿದ್ದಾರೂನು ಹೆಗಿದ್ದಾರೂನು
ಮರಿಬೇಡ ​​ದೇಹ ಮಣ್ಣಿಗೆ

ಮಣ್ಣಿನಿಂದಲೇ ಅಣ್ಣಾ
ಮಣ್ಣಿನಿಂದಲೇ ಚಿನ್ನಾ
ಮಣ್ಣಾಗಿ ಹೋಗೋ ಮುನ್ನಾ
ಮನಗಾನೋ ಈ ಸತ್ಯನಾ

ಬರೀ ಮೂರೇ ದಿನದ ಬಾಳು
ನಾನಾ ತರ ನಾಟಕವೇಕೋ
ಬರೀ ಮೂರೇ ಹೊತ್ತಿನ ಕೂಳು
ಮುನ್ನೂರು ವೇಷಗಳೇಕೋ

ಬೇರೆ ಯೇನೋ ಪಡೆಯೋ ಆಸೆಲಿ
ಇದ್ದುದ್ದೆಲ್ಲ ಕಳೆವ ಮಂದಿ ಇಲ್ಲಿ
ಹೇಳಿದರೇ ಒಳ್ಳೇಯದನ್ನು ಯೆಂದೆಂದು ಕೆಳದ ಜನರು
ಒಳ್ಳೇಯದೆ ಮಾಡು ಎಂದು ಆ ದೇವರ ದಿನ ಬೇಡುವರು

ಯೆಲ್ಲೆಲ್ಲೋ ಅಲೆದು ಯೇನೆನೋ ಆಗಿ ಪರದಾತ ಪಟ್ಟ ಮೇಲೆ
ತಿಳಿಯೋಡು ಜೀವನ ಸತ್ಯ
ತಿಳಿಯೋದು ಜೀವನ ಸತ್ಯ ಅದನಾಳವಡಿಸಿಕೋ ನೀ ನಿತ್ಯ
ತಿಳಿಯೋದು ಜೀವನ ಸತ್ಯ ಅದನಾಳವಡಿಸಿಕೋ ನೀ ನಿತ್ಯ

ಬರೀ ಮೂರೇ ದಿನದ ಬಾಳು
ನಾನಾ ತರ ನಾಟಕವೇಕೋ
ಬರೀ ಮೂರೇ ಹೊತ್ತಿನ ಕೂಳು
ಮುನ್ನೂರು ವೇಷಗಳೇಕೋ