ನೀ ತಂದ ಕಾಣಿಕೆ - The Indic Lyrics Database

ನೀ ತಂದ ಕಾಣಿಕೆ

गीतकार - R. N. Jayagopal | गायक - S. Janaki, P. B. Sreenivas | संगीत - Vijaya Bhaskar | फ़िल्म - Hrudaya Sangama | वर्ष - 1972

Song link

View in Roman

ನೀ ತಂದ ಕಾಣಿಕೆ
ನಗೆ ಹೂವ ಮಾಲಿಕೆ
ನಗೆ ಹೂವ ಮಾಲಿಕೆ
ನಾ ತಂದ ಕಾಣಿಕೆ
ಅನುರಾಗ ಮಾಲಿಕೆ
ಅದಕಿಲ್ಲ ಹೋಲಿಕೆ

ನೀ ತಂದ ಕಾಣಿಕೆ
ನಗೆ ಹೂವ ಮಾಲಿಕೆ
ನಗೆ ಹೂವ ಮಾಲಿಕೆ
ನಾ ತಂದ ಕಾಣಿಕೆ
ಅನುರಾಗ ಮಾಲಿಕೆ
ಅದಕಿಲ್ಲ ಹೋಲಿಕೆ

ಕಣ್ಣಲ್ಲೇ ಬರೆದೆ ಒಲವಿನ ಪೀಠಿಕೆ
ಪೂರೈಸ ಬಂದೆ ಮನಸಿನ ಬೇಡಿಕೆ
ಕಣ್ಣಲ್ಲೇ ಬರೆದೆ ಒಲವಿನ ಪೀಠಿಕೆ
ಪೂರೈಸ ಬಂದೆ ಮನಸಿನ ಬೇಡಿಕೆ

ಮೈ ಮರೆತು ನಿಂತೇ ಆ ನಿನ್ನ ನೋಟಕೆ
ಮೈ ಮರೆತು ನಿಂತೇ ಆ ನಿನ್ನ ನೋಟಕೆ
ನಾ ಹಾದಿ ಕುಣಿದೆ ನಿನ್ನೆಡೆ ತಾಳಕೆ

ಆ ಆ ಆ ಆ ಹಾಆಆ

ನೀ ತಂದ ಕಾಣಿಕೆ
ನಗೆ ಹೂವ ಮಾಲಿಕೆ
ನಗೆ ಹೂವ ಮಾಲಿಕೆ
ನಾ ತಂದ ಕಾಣಿಕೆ
ಅನುರಾಗ ಮಾಲಿಕೆ
ಅದಕಿಲ್ಲ ಹೋಲಿಕೆ

ಕರೆದೆ ನನ್ನ ಕನಸಿನ ತೀರಕೆ
ಆಸೆಯ ಹೂಗಳು ಅರಳಿಹ ತೋಟಕೆ
ಈ ಬಾಳ ಗುಡಿಗೆ ನೀನಾದೆ ದೀಪಿಕೆ
ಬೆಳಕಾಗಿ ನಿಂದೆ ನೀ ಯೆನ್ನ ಜೀವಕೆ

ನೀ ತಂದ ಕಾಣಿಕೆ
ನಗೆ ಹೂವ ಮಾಲಿಕೆ
ನಗೆ ಹೂವ ಮಾಲಿಕೆ
ನಾ ತಂದ ಕಾಣಿಕೆ
ಅನುರಾಗ ಮಾಲಿಕೆ
ಅದಕಿಲ್ಲ ಹೋಲಿಕೆ