ಸುವ್ವಿ ಸುವ್ವಿ ಸುವ್ವಾಲೆ - The Indic Lyrics Database

ಸುವ್ವಿ ಸುವ್ವಿ ಸುವ್ವಾಲೆ

गीतकार - S. Narayan | गायक - L. N. Shastri | संगीत - K. Kalyan | फ़िल्म - Thayi Kotta Seere | वर्ष - 1997

Song link

View in Roman

ಸುವ್ವಿ ಸುವ್ವಿ ಸುವ್ವಾಲೆ ಸುವ್ವಿ ಸುವ್ವಾಲೆ |2|
ಹೇ ಸುವ್ವಿ ಸುವ್ವಾಲೆ ಸುವ್ವಿ ಸುವ್ವಾಲೆ
ಸುವ್ವಾಲೆ ಸುವ್ವಾಲೆ ಸುವ್ವಿ ಸುವ್ವಾಲೆ

ಓಹೋ ಹೂ ಓ ಹೂ ಓಹೋ ಓಓ ಓಹೋ ಹೋ

ಸಂಪಿಗೆ ಸಂಪಿಗೆ ಸಂಪಿಗೆ
ಸಕ್ಕರೆ ತುಂಬಿದ ಬಿಂದಿಗೆ
ಈ ಹೊಂಗೆಯ ತೇರು ನಮ್ ಗಿರಿಜೆಗೆ ಸೂರು
ಈ ಮಣ್ಣಿನ ಹಸಿರೆ ಇವಳಂದಕೆ ನೀನು
ಮಿಂಚಿ ಮಿನುಗೊ ಇವಳೆ ಹುಣ್ಣಿಮೆ

ಸಂಪಿಗೆ ಸಂಪಿಗೆ ಸಂಪಿಗೆ
ಸಕ್ಕರೆ ತುಂಬಿದ ಬಿಂದಿಗೆ

ಸುವ್ವಿ ಸುವ್ವಿ ಸುವ್ವಾಲೆ ಸುವ್ವಿ ಸುವ್ವಾಲೆ
ಲಾ ಲಾ ಲಾಲಾ ಲಾಲಾ ಲಾಲಾ ಲಾ ಲಾ ಲಾಲಾ ಲಾಲಾ ಲಾಲಾ

ಯಾವನಪ್ಪ ರೂಪ ಕೊಟ್ಟೋನು
ಕಣ್ಣ ಮೈಗೆ ದೀಪ ಇಟ್ಟೊನು

ನಾಚಿಕೇನ ಬಾಚಿಕೊಟ್ಟ ರೂಪವಂತೇ
ಪ್ರಾಯ ಬಂದು ಅಪ್ಪಿಕೊಂಡ ಅಂದವಂತೆ
ಯವ್ವಿ ಯವ್ವಿ

ಅರೆರೆ ಬಾಯಿ ಬಿಟ್ಟಾಗ ಮುತ್ತು ಮಿಂಚ್ಯಾವೆ
ನೀ ನಕ್ಕಾಗ ಬೆಳ್ಳಿ ಮೂಡ್ಯಾವೆ
ಬಾಳೆ ತೆಂಗೆಲ್ಲ ಸುವ್ವಾಲಿ ಹಾಡ್ಯಾವೇ
ಊರ ತುಂಬೆಲ್ಲಾ ರಂಗೋಲಿ ಚೆಲ್ಲ್ಯಾವೆ
ಅರಿಶಿನ ಮೈಯಿನ ಅಂಗದೊಳೆ
ತಾವರೆ ನಾಚುವ ಬಣ್ಣದೊಳೆ

ಸಂಪಿಗೆ ಸಂಪಿಗೆ ಸಂಪಿಗೆ
ಸಕ್ಕರೆ ತುಂಬಿದ ಬಿಂದಿಗೆ
ಈ ಹೊಂಗೆಯ ತೇರು ನಮ್ ಗಿರಿಜೆಗೆ ಸೂರು
ಈ ಮಣ್ಣಿನ ಹಸಿರೆ ಇವಳಂದಕೆ ನೀನು
ಮಿಂಚಿ ಮಿನುಗೊ ಇವಳೆ ಹುಣ್ಣಿಮೆ

ಝುಂ ಝಂ ಝಂ ಚಕ್ಕಾ ಚಾ ಝಂ ಝಂ ಝಂ ಚಕ್ಕಾ ಚಾ

ಗಂಧವ ತೇದು ಕೆನ್ನೆಗೆ ನೀರು ಹಾಕುವ ಬನ್ನಿರೆ
ಆರತಿ ಮಾಡಿ ದೃಷ್ಟಿಯ ತೀಡಿ ಈ ಕೂಸನು ತಣ್ಣೀರೆ
ಹಸುರು ಬಾಳೆಯ ತೊಡಿಸಿರೆ ಮೊಗ್ಗಿನ ದಿಂಡ ಮುಡಿಸಿರೆ
ಜರಿಯ ಲಂಗವ ಉಡಿಸಿರೆ ಸಿರಿಯ ಸುರಿದು ಹರಸಿರೆ
ಜೇನಿನ ಔತನ ಗಿರಿಜೆಗೆಲ್ಲ ಹೊಸತಾನ

ಸಂಪಿಗೆ ಸಂಪಿಗೆ ಸಂಪಿಗೆ
ಸಕ್ಕರೆ ತುಂಬಿದ ಬಿಂದಿಗೆ
ಈ ಹೊಂಗೆಯ ತೇರು ನಮ್ ಗಿರಿಜೆಗೆ ಸೂರು
ಈ ಮಣ್ಣಿನ ಹಸಿರೆ ಇವಳಂದಕೆ ನೀನು
ಮಿಂಚಿ ಮಿನುಗೊ ಇವಳೆ ಹುಣ್ಣಿಮೆ