ಮೋಡ ಮೊದಲಾಗಿಯೆ - The Indic Lyrics Database

ಮೋಡ ಮೊದಲಾಗಿಯೆ

गीतकार - Nischal S. Dambekodi, Madan Bellisalu | गायक - Deepak Doddera, Eesha Suchi | संगीत - Ritvik Muralidhar | फ़िल्म - Sankashta Kara Ganapathi | वर्ष - 2018

Song link

View in Roman

ಮೋಡ ಮೊದಲಾಗಿಯೆ ಬೆರಳನು ತಾಕಿದೆ
ಪರಿಚಯವಿಲ್ಲದ ಒಲವ ನೆರಳು
ಕಚಗುಳಿ ನೀಡಿದೆ ಖುಷಿಯನು ತಂದಿದೆ
ಕರೆದರೂ ಸುಮ್ಮನೆ ನೀನಾದೆ ಹೆಸರು
ತಾನಾಗಿ ತಾ ಓದುತಿದೆ ಬೇಡವೆಂದರೂ ಹೃದಯ
ಬಿದ್ದರೂ ಹೇಳದೆ ಮಾಡಿಕೊಂಡಿದೆ ಪ್ರಾಯ
ವಾಸಿಯಾಗದ ಗಾಯ

ತಯಾರಿ ನಡೆದಿದೆ ಮೆಲ್ಲನೆ
ಕಣ್ಣಲ್ಲಿ ಕಣ್ಣಿಟ್ಟು ನಾ ನೋಡಲು
ಸವಾರಿ ಹೊರತಿದೆ ಒಮ್ಮೆಲೆ
ಬೇರೇನೋ ಮಾತಾಡು
ವಿಲಾಸ ಮರೆತೇನು ಈಗಲೇ
ಯಾಕಿಷ್ಟು ಚಂದನೋ ಈ ಕೈಲೇ
ವಿಶೇಷ ಎನಿಸುವ ಕಲ್ಪನೆ
ಮೂಡೋದು ನಿನ್ನಿಂದಾನೆ
ವಿವರಿಸಲಾರೆ ನಾನೇನು
ಹಾಯಾದ ಮೌನನೇ ಸಾಕಿನ್ನು
ಕನಸಲೂ ಕೂಡ ನಿನ್ನಿಂದ
ಯಾಮರಿದೆ ನನ್ನೆದೆ
ಕಾಪಾಡಿಕೋ ನನ್ನಾನೇ

ಮೋಡ ಮೊದಲಾಗಿಯೆ ಬೆರಳನು ತಾಕಿದೆ
ಪರಿಚಯವಿಲ್ಲದ ಒಲವ ನೆರಳು
ಕಚಗುಳಿ ನೀಡಿದೆ ಖುಷಿಯನು ತಂದಿದೆ
ಕರೆದರೂ ಸುಮ್ಮನೆ ನೀನಾದೆ ಹೆಸರು
ತಾನಾಗಿ ತಾ ಓದುತಿದೆ ಬೇಡವೆಂದರೂ ಹೃದಯ
ಬಿದ್ದರೂ ಹೇಳದೆ ಮಾಡಿಕೊಂಡಿದೆ ಪ್ರಾಯ
ವಾಸಿಯಾಗದ ಗಾಯ