ನನಗೇಳದೆ ನನ್ನ ಕೇಳದೆ - The Indic Lyrics Database

ನನಗೇಳದೆ ನನ್ನ ಕೇಳದೆ

गीतकार - Nischal S. Dambekodi | गायक - Gurukiran, Ananya Bhat | संगीत - Ritvik Muralidhar | फ़िल्म - Sankashta Kara Ganapathi | वर्ष - 2018

Song link

View in Roman

ನನಗೇಳದೆ ನನ್ನ ಕೇಳದೆ
ಈ ನನ್ನೆದೆ ಪ್ರೀತಿಯ ಹಿಂದೆ
ನೀನಿಲ್ಲದೇ ನಗುವೆಲ್ಲಿದೆ
ಜೊತೆ ಬರುತಿದೆ ಯೇಕಾಂತ ಒಂದೆ
ಕಣ್ಣ ಕದಲಿನ ಆಳದಲಿ ಕನಸಿದು ಮುಳುಗಡೆ
ದೂರವಿದ್ದರು ನಿನ್ನ ಬಯಸುವೆ ಈ ನೋವ ನಾ ತಾಳಲಾರೆ

ನಾ ಗಮನಸದ ನೋವೊಂದು ಉದ್ಭವ ಯೆದೆಯಲಿ
ಈ ಕಾಯಿಗೆ ಕಾರಣವ ಹೇಗೇ ನಾ ಹೇಳಲಿ

ಗುಣಮಾಡಿಸೋ ನಗುವನ್ನು ಸಿಂಪಡಿಸಿ ನೀ ಉಳಿಸಿಕೋ
ಉಸಿರಾಗಿ ಈ ಹೃದಯ ಮಿಡಿವಂತೆ ನೀ ತುಂಬಿಕೋ

ನೀನು ಜೊತೆ ಬೇಡವೆಂದು ಇರಲು
ಬಾನಿನಲಿ ಚಂದ್ರನಿರದ ಇರಲು
ನೀನು ಇರದಿರೆ ಬೇಸರ ನಂಗಂತು ದಿನವು

ಕಾಲ ಜಾರೋ ಈ ಒಲವಿನಲಿ ಬೇಕಂತ ಧುಮುಕಿ
ನಾನು ಚಾರಣವ ಮಾಡಿದೆನು ಕಾಲು ದಾರಿ ಹುಡುಕು

ಪ್ರೀತಿ ಶುರುವಾದಾಗ ನಾ
ಪ್ರೀತಿ ಮುಗಿದ್ ಹೋಗೋ ಸಮಯ
ಕಂಗಾಲು ನಾ ಕೈಯ್ಯರೆ ಕಳೆದಂತೆ ನಾ

ಇರಿಸೋ ಮುನಿಸೋ ಉಸಿರೆ ಕ್ಷಮಿಸು
ಕನಸೋ ಮನಸೋ ಮರು ಪಾವತೀಸು
ನಾನಿದ್ದು ಇರದಂಥ ಕ್ಷಣವನ್ನು ಸಂಭಾವಿಸು

ನನಗೇಳದೆ ನನ್ನ ಕೇಳದೆ
ಈ ನನ್ನೆದೆ ಪ್ರೀತಿಯ ಹಿಂದೆ