ಆಸೆ ಹೇಳುವಾಸೆ - The Indic Lyrics Database

ಆಸೆ ಹೇಳುವಾಸೆ

गीतकार - Chi. Udaya Shankar | गायक - Rajkumar, P. Susheela, S. Janaki | संगीत - G. K. Venkatesh | फ़िल्म - Huliya Haalina Mevu | वर्ष - 1979

Song link

View in Roman

ಆಸೆ ಹೇಳುವಾಸೆ
ಆಸೆ ಹೇಳುವಾಸೆ
ಹೇಳಲಾರೆ ನಾನು ತಾಳಲಾರೆ
ನನ್ನಾ ಇನಿಯನಾತ.. ಈ ಕೆನ್ನೆಗೆ

ಆಸೆ ಹೇಳುವಾಸೆ
ಆಸೆ ಹೇಳುವಾಸೆ
ಹೇಳಲಾರೆ ನಾನು ತಾಳಲಾರೆ
ನನ್ನ ನಲ್ಲನಾಟ.. ಚೆಂದುತಿಯನು

ಅಂದು ಯಾರಿಲ್ಲ
ಅಂದು ಯಾರಿಲ್ಲ ಇರುಳಲೈ ಮಲಗಲು
ನಾ ಹೋದೆನು..
ಬೀಸೊ ತಂಗಾಳಿ ತಂಪನು ತರದಿರೆ
ನಾ ಸೋತೇನು.. ನಾ ಸೋತೇನು..

ಎನೋ ಬೇಕೆಂಬಾ
ಎನೋ ಬೇಕೆಂಬ ಬಯಕೆಯ ಬಿಸಿಯಲಿ
ನಾ ಬೆಂಡೆನು..
ನನ್ನ ಕಣ್ಣಲ್ಲೇ ಕರಗಿದ ಇನ್ಯಾನ
ಬಾ ಎಂದೇನು ಹೋಯಿ ಬಾ ಎಂದೇನು

ಓಡಿ ಬಂದನು ಎದುರಲ್ಲಿ ನಿಂತನು
ಆಸೆ ಅರಿತೇನು ಬಾ ನಲ್ಲೆ ಅಂದನು
ಬೇಡ ಎಂದರೇ..
ನಾ ಬಿಡುವೆನೆ ನಿನ್ನನು

ಆಸೆ ಹೇಳುವಾಸೆ
ಆಸೆ ಹೇಳುವಾಸೆ
ಹೇಳಲಾರೆ ನಾನು ತಾಳಲಾರೆ
ನನ್ನ ನಲ್ಲನಾಟ.. ಚೆಂದುತಿಯನು

ಬೇಕು ಬೇಕೆಂಬ ಆತುರ ಕಾತುರ
ನಾ ತಾಳದೇ..
ಬೇಡ ಬೇಡವೆಂದು ನುಡಿಯುತ ಸನಿಹಕೆ
ನಾ ಜಾರಿದೇ.. ಹೋಯಿ ನಾ ಜಾರಿದೇ

ನನ್ನ ತೋಳಿಂದ ಬಲಸುತ ಅಮುಕಲು ಹನ್ನಾದೆನು
ಇನ್ನು ಬೇಕೆಂಬ ಆಸೆಯ ಅಮಲಲಿ
ಬೆಂಡಾದೆನು.. ಬೆಂದಾದೆನು
ನೋಟ ತುತಿಯಲಿ ಅವನಾಟ ನಡುವಲಿ
ಮಿಂಚು ಮೈಯಲಿ ಹಿತವಾದ ನೋವಲಿ
ಅವನಾ ಸೇರಿದೆ..
ನೀ ಸ್ವರ್ಗವ ತೋರಿದೆ

ಆಸೆ ಹೇಳುವಾಸೆ
ಆಸೆ ಹೇಳುವಾಸೆ
ಹೇಳಲಾರೆ ನಾನು ತಾಳಲಾರೆ
ನನ್ನಾ ಇನಿಯನಾತ.. ಈ ಕೆನ್ನೆಗೆ