ತೇಗಡ ಮರ ಕಡಿದು - The Indic Lyrics Database

ತೇಗಡ ಮರ ಕಡಿದು

गीतकार - K. Kalyan | गायक - Hariharan | संगीत - Ilaiyaraaja | फ़िल्म - Namma Preethiya Ramu | वर्ष - 2003

Song link

View in Roman

ತೇಗಡ ಮರ ಕಡಿದು
ಗೋವಿನ ತೊಗಲು ಕೊಂಡು
ಮನುಜ ಕಂಡು ಕೊಂಡ
ಡೋಲು ವಾದ್ಯಗಳ

ಹೇ ಸೋಗೆಯ ಮರವ ಕೊಂಡು
ಬಿದಿರು ತಕ್ಕೊಂಡು
ಚಂದಾಗಿ ನಮಗೇ
ತಂದ ಕೊಳಲು ಮೇಳಗಳ

ಜೀವ ಶೃತಿ ಸೇರಲುಬೇಕು
ತಳದಲ್ಲಿ ನಡಿಲೇ ಬೇಕು
ತಪ್ಪಿದರೆ ರಾಗಗಳೆಲ್ಲ ರೋಗ ರೋಗ

ತೇಗಡ ಮರ ಕಡಿದು
ಗೋವಿನ ತೊಗಲು ಕೊಂಡು
ಮನುಜ ಕಂಡು ಕೊಂಡ
ಡೋಲು ವಾದ್ಯಗಳ

ಹೇ ಮದುವೆ ಯೆಂದಾರೆ
ಮಂಗಳ ವಾದ್ಯವು ಬೇಕಲ್ಲ
ಗಟ್ಟಿ ಮೇಲ ಬೇಕಲ್ಲ ಅದು ಒಳ್ಳೆದಲ್ಲವಾ

ದೇವಸ್ಥಾನದಲ್ಲಿ ದೇವರು
ಉತ್ಸವವಾಗಲಿ ತೇರುಗಳು ಸಾಗಲಿ

ವಯಸು ಮಕ್ಕಳು ವಯಸ್ಸಿಗೆ
ಬಂದು ಕೂರಲಿ ಆ ಮನೆಯಲ್ಲಿ
ತಪ್ಪದೆ ಅಲ್ಲಿಯು ತಾಳವು ಮೇಳವು
ಬೇಕಲ್ಲಾ ಇಷ್ಟು ಸಾಕಲ್ಲ

ರಾಜಕೀಯ ಭೇಟಿ ಮುಂಚೆ
ಮೆರವಣಿಗೆ ನಡೆಯುತಿದ್ದರೆ
ಬೇಕಲ್ಲವೇ ತೂರಿ ತುತ್ತೂರಿ
ಶ್ವಾಸವಾ ಮರೆತೋಣಿಗೆ
ಅವನೂರಿಗೆ ಕಲಿಸೋದಕ್ಕೆ
ಇದು ಅಲ್ಲಿಯೂ ಬೇಕಲ್ಲವೇ

ತಂಗಡ ದಕ್ಕುಂ ತಂಗಡ ತಂಗಡ ತಂಗಡ ತೋಂ

|ತೇಗಡ ಮಾರ.....ಕೋಲಲು ಮೇಳಗಳ|

ಹೇ ಮನ್ಸಾರೆ ಮಹಾದೇವಂಗೆ
ಚೆಲ್ಲೋನವ್ವ ಮಲ್ಲಿಗೆಯ
ಚೆಲ್ಲೋನವ್ವ ಮಲ್ಲಿಗೆಯ
ಚೆಲ್ಲಿದರೆ ಮಲ್ಲಿಗೆಯ
ಕೊಡ್ತಾನವ್ವ ಐಸಿರಿಯಾ
ಕೊಡ್ತಾನವ್ವ ಐಸಿರಿಯಾ
ಘಳಿರು ಗೆಜ್ಜೆಯ ಕಟ್ಟಿ
ಹೂ ನಗೆಯ ಕೈಯ್ಯ ತಟ್ಟಿ
ಆದೋಣ ಬನ್ನಿ ಬನ್ನಿ
ಕುಣಿಯೋಣ ಬನ್ನಿ ಬನ್ನಿ

ತಳವ ಕೊಡುವ ಡೋಲುಗೆ
ಎರಡು ಪಕ್ಕವೂ ಕಡ್ಡಿ ಏಟು
ಯೆಂದೂ ಯೆಂದೂ ತಪ್ಪದು
ಯೆಲ್ಲೋ ಬಡಿದಾರೂ ಯೆಲ್ಲೆಲ್ಲು ಕೇಳತ್ತೇ
ಜೋರಾಗಿ ಯಾವಾಗಲು ನಿಲ್ಲು

ವಾದ್ಯವ ಬಾರ್ಸೋರು ಹೇಳಿದರು
ಆ ತರಹ ಹಣಬರಹ
ಸಂಗೀತ ಸಂಸಾರ ಎರಡನ್ನು
ಹಿಡಕೊಂಡು ಬಿಡರು ಬಿಟ್ಟು ಕೊಡರು

ಕಚೇರಿಯು ಮುಗಿದ ಮೇಲೆ
ವಾದ್ಯಗಳು ಮನೆಯ ಓಲಗೆ
ಮಲಗುತ್ತೆ ಯೆಲ್ಲೋ ಮೂಲೆಯಲಿ
ಹಾಗೇ ಕಲಾವಿದರು ಇಲ್ಲಿ ಬೇರೇನು ನೋಡಿದರು
ಆ ದೇವರ ಸೃಷ್ಟಿ ಇದು

ತಂಗಡ ದಕ್ಕುಂ ತಂಗಡ ತಂಗಡ ತಂಗಡ ತೋಂ

|ತೇಗಡ ಮಾರ.....ರಾಗಗಳೆಲ್ಲ ರೋಗ ರೋಗ|

ತೇಗಡ ಮರ ಕಡಿದು
ಗೋವಿನ ತೊಗಲು ಕೊಂಡು
ಮನುಜ ಕಂಡು ಕೊಂಡ
ಡೋಲು ವಾದ್ಯಗಳ