ನಾ ಕಾಣೋ ಲೋಕವನ್ನು - The Indic Lyrics Database

ನಾ ಕಾಣೋ ಲೋಕವನ್ನು

गीतकार - K. Kalyan | गायक - Udit Narayan | संगीत - Ilaiyaraaja | फ़िल्म - Namma Preethiya Ramu | वर्ष - 2003

Song link

View in Roman

ನಾ ಕಾಣೋ ಲೋಕವನ್ನು ಕಾಣೋರು ಯಾರು |2|
ಹೇಳುವೆಯ ನೀ ಓ ಇಬ್ಬನಿಯೇ
ಮೆಲ್ಲನೆ ಹೇಳು ಓ ಮಲ್ಲಿಗೆಯೇ
ನನ್ನ ಕಾಣೋ ಭೂಮಿ ತಾಯೇ
ನಿನ್ನ ನೋಡಲು ನನಗೇ ಇನ್ನೊಂದು ಜನ್ಮವು ಬೇಕು
ಬಾನಡಿಯ ಹಾಗೆ ನಾ ಹಾದಿ ಬದುಕಬೇಕು

ನಾ ಕಾಣೋ ಲೋಕವನ್ನು ಕಾಣೋರು ಯಾರು

ಅರಳಿದ ಹೂಗಳ ನೋಡದೆ ಹೋದರು ಆ ನಗೆ ನಾನ ಅರಿವೆ
ಅರಿಯುವ ನಾಡಿಗಳ ಕಾಣದೆ ಹೋದರು ಸ್ಪರ್ಶದೆ ನಾ ತಿಳಿಯೆ
ಕುಹು ಕುಹೂ ಕೂಗುವ ಕೋಗಿಲೆ ಗುಂಪಿನ ಇಂಪಲಿ ನಾ ಇರುವೆ
ಕಲ್ಪನೆ ಲೋಕದ ಬೆನ್ನನು ಯೆರಿ ರೆಕ್ಕೆಯ ನಾ ಪಡೆವೆ
ನೋವಿಲ್ಲ ನಿಮ್ಮನು ನಾ ನೋಡದೆ ಹೋದರೂ
ನೀನು ನನ್ನ ನೋಡಿದ್ರೆ ಸಾಕಲ್ಲವೇ ಅದು
ನಿಮ್ಮ ಮುಂದೆ ಗಾಯಕ ನಾ

ನಾ ಕಾಣೋ ಲೋಕವನ್ನು ಕಾಣೋರು ಯಾರು |2|

ರಾತ್ರಿಯ ಕಲೆಯಲು ಅಮ್ಮನು ಹಾಡಿದ ಲಾಲಿಯ ಸವಿ ಕಥೆಯು
ಕೇಳಿದ ಕಥೆಯಲಿ ಜಗವನು ಕಂಡೆನು ನೆನಪೆ ಹಚ್ಚ-ಹಸಿರು
ಹಿರಾಯರ ಮಾತು ಕೇಳಲು ದಕ್ಕಿತು ಅರಿವಿನ ಈ ವರವು
ಕನ್ನಡ ಪದದಲ್ಲಿ ಬಾಗಿಲು ತೆರೆಯಿತು ಕಷ್ಟಗಳೇ ಇರವು
ಅನುಭವದ ಭಾವಗಳ ಅನುಭವದಲ್ಲಿ
ಇಡಿದುಕೊಂಡೆ ನಂಬಿಕೆಯ ಜೀವನವಿಲ್ಲಿ
ಹಾಡಲ್ಲೇ ಬಾಳೋ ಕೋಗಿಲೆ ನಾ ಓಹೋ ಓಹೋ

ನಾ ಕಾಣೋ ಲೋಕವನ್ನು ಕಾಣೋರು ಯಾರು |2|
|ಹೇಳುವೆಯ ನೀ ........ ಹಾದಿ ಬದುಕಿ ಬೇಕು|

ನಾ ಕಾಣೋ ಲೋಕವನ್ನು ಕಾಣೋರು ಯಾರು