ಕನ್ನಡ ನಾಡಿನ ವೀರ ರಮಣಿಯ - The Indic Lyrics Database

ಕನ್ನಡ ನಾಡಿನ ವೀರ ರಮಣಿಯ

गीतकार - Chi. Udaya Shankar | गायक - P. B. Srinivas | संगीत - Vijaya Bhaskar | फ़िल्म - Naagarahaavu | वर्ष - 1972

Song link

View in Roman

ಕನ್ನಡ ನಾಡಿನ ವೀರ ರಮಣಿಯ
ಗಂಡು ಭೂಮಿಯ ವೀರ ನಾರಿಯ
ಚರಿತೆಯ ನಾನು ಹಾಡುವೆ

ಕನ್ನಡ ನಾಡಿನ ವೀರ ರಮಣಿಯ
ಗಂಡು ಭೂಮಿಯ ವೀರ ನಾರಿಯ
ಚರಿತೆಯ ನಾನು ಹಾಡುವೆ

ಚಿತ್ರದುರ್ಗದ ಕಲ್ಲಿನ ಕೋಟೆ
ಸಿಡಿಲಿಗೂ ಬೆಚ್ಚದ ಉಕ್ಕಿನ ಕೋಟೆ

ಚಿತ್ರದುರ್ಗದ ಕಲ್ಲಿನ ಕೋಟೆ..
ಸಿಡಿಲಿಗೂ ಬೆಚ್ಚದ ಉಕ್ಕಿನ ಕೋಟೆ..

ಚಿತ್ರದುರ್ಗದ ಕಲ್ಲಿನ ಕೋಟೆ..
ಸಿಡಿಲಿಗೂ ಬೆಚ್ಚದ ಉಕ್ಕಿನ ಕೋಟೆ..
ಮಡಿಸಿದ ಕರಿಯ ಮದವಾಡಗಿಸಿದ
ಮದಕರಿನಾಯಕರ್ ಆಳಿದ ಕೋಟೆ
ಪುಣ್ಯ ಭೂಮಿಯು ಈ ಬೀಡು
ಸಿದ್ಧರು ಹರಿಸಿದ ಸಿರಿನಾಡು

ಕನ್ನಡ ನಾಡಿನ ವೀರ ರಮಣಿಯ
ಗಂಡು ಭೂಮಿಯ ವೀರ ನಾರಿಯ
ಚರಿತೆಯ ನಾನೂ ಹಾಡುವೆ

ವೀರ ಮದಕರಿ ಆಳುತಲಿರಲಿ
ಹೈದರಾಲಿಯು ಯುದ್ಧಕೆ ಬರಲು
ಕೋಟೆ ಜನಗಳ ರಕ್ಷಿಸುತಿರಲು
ಸತಥ ದಾಲಿಯು ವ್ಯರ್ಥವಾಗಲು
ವೈರಿ ಚಿಂತನೆಯಲಿ ಬಸವಳಿದ
ದಾರಿ ಕಾಣದೆ ಮಂಕಾದ

ಕನ್ನಡ ನಾಡಿನ ವೀರ ರಮಣಿಯ
ಗಂಡು ಭೂಮಿಯ ವೀರ ನಾರಿಯ
ಚರಿತೆಯ ನಾನೂ ಹಾಡುವೆ

ಗೂಡ ಚಾರರು ಅಲೆದು ಬಂದರು
ಹೈದರಾಳಿಗೆ ವಿಷಯ ತಂದರು
ಚಿತ್ರದುರ್ಗದ ಕೋಟೆಯಲಿ
ವಾಯುವ್ಯ ದಿಕ್ಕಿನೆಡೆ ನೋಡು ಎಂದರು
ಕಲ್ಲ ಗಂಡಿಯ ತೋರಿದರು
ಲಗ್ಗೆ ಹತ್ತಲು ಹೇಳಿದರು

ಕನ್ನಡ ನಾಡಿನ ವೀರರಮಣ್ಯ
ಗಂಡು ಭೂಮಿಯ ವೀರ ನಾರಿಯ
ಚರಿತೆಯ ನಾನೂ ಹಾಡುವೆ

ಸುತ್ತಮುತ್ತಲು ಕಪ್ಪು ಕತ್ತಲೆಯು ಮುಟ್ಟಿರಲು
ವೀರ ಕಾವಲುಗಾರ ಭೋಜನಕೆ ನಡೆದರು
ಸಿಹಿ ನೀರು ತರಲೆಂದು
ಅವನ ಸತಿ ಬಂದಿರಳು
ಕಲ್ಲಗಂಡಿಯ ಹಿಂದೆ ಪಿಸುಮಾತು
ಕೇಳಿದಾಳು, ಆಳಿಸಿದಳು, ಇನುಕಿದಳು
ವೈರಿ ಪಡೆ ಕೋಟೆಯತ್ತ ಬರುವದನ್ನು ಕಂಡಳು

ಕೈಗೆ ಸಿಕ್ಕಿದ ಒನಕೆ ಹಿಡಿದಳು
ವೀರ ಗಚ್ಚೆಯ ಹಾಕಿ ನಿಂದಲು
ದುರ್ಗಿಯನ್ನು ಮನದಲ್ಲಿ ನೆನೆದಳು
Kaaliyante Baligagai Kaadalu
ಯಾರವಳು? ಯಾರವಳು?
ವೀರವನಿತೆ ಆ ಓಬವ್ವ..ಆ..
ದುರ್ಗವು ಮರೆಯಾದ ಓಬವ್ವ

ಕನ್ನಡ ನಾಡಿನ ವೀರ ರಮಣಿಯ
ಗಂಡು ಭೂಮಿಯ ವೀರ ನಾರಿಯ
ಚರಿತೆಯ ನಾನೂ ಹಾಡುವೆ

ತೇವಳುತ ಓಲಗೆ ಬರುತಿರೆ ವೈರಿ
ಒನಕೆಯ ಬೀಸಿ ಕೊಂಡಳು ನಾರಿ
ಸತ್ತವನನ್ನೂ ಎಳೆದು ಹಾಕುತಾ
ಮತ್ತೆ ನಿಂತಳು ಹಲ್ಲು ಮಸೆಯುತ..
ವೈರಿ ರುಂಡ ಚೆಂಡಾಡಿದಳು
ರಾಕುಟದ ಕೊಡೆ ಹರಿಸಿದಳು

ಕನ್ನಡ ನಾಡಿನ ವೀರ ರಮಣಿಯ
ಗಂಡು ಭೂಮಿಯ ವೀರ ನಾರಿಯ
ಚರಿತೆಯ ನಾನೂ ಹಾಡುವೆ

ಸತ್ಯ ಹುಡುಕುತ ಕಾವಲಿನವನು
ಗುಪ್ತ ದ್ವಾರದ ಬಾಳಿಗೆ ಬಂದನು
ಮಾತು ಹೊರಡದೆ ಬೆಚ್ಚಿ ನಿಂತನು
ಹೆಣದ ರಾಶಿಯ ಬಲಿಯೆ ಕಂಡನು
ರಾಣಾ ಚಂಡಿ ಅವತಾರವನು
ಕೋಟೆ ಸಲಹಿದ ತಾಯಿಯನು

ಕನ್ನಡ ನಾಡಿನ ವೀರ ರಮಣಿಯ
ಗಂಡು ಭೂಮಿಯ ವೀರ ನಾರಿಯ
ಚರಿತೆಯ ನಾನು ಹಾಡುವೆ

ರಣ ಕಹಳೆಯನು ಓದುತಲಿರಲು
ಸಾಗರದಂತೆ ಸೈನ್ಯ ನುಗ್ಗಲು
ವೈರಿ ಪಡೆಯು ನಿಶೇಷವಾಗಲು
ಕಾಳಗದಲ್ಲಿ ಜಯವನು ತರಳು
ಅಮರಳಾದಳು ಓಬವ್ವ
ಚಿತ್ರದುರ್ಗದ ಓಬವ್ವ

ಕನ್ನಡ ನಾಡಿನ ವೀರ ರಮಣಿಯ
ಗಂಡು ಭೂಮಿಯ ವೀರ ನಾರಿಯ
ಚರಿತೆಯ ನಾನೂ ಹಾಡುವೆ